
ಬೆಂಗಳೂರು: ಕ್ಷುಲ್ಲಕ ಕಾರಣದ ಹಿನ್ನೆಲೆಯಲ್ಲಿ ಆಟೊ ಚಾಲಕರ ಗುಂಪೊಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಯಶೋದಾ ವಿ ಆಚಾರ್ಯ ಎಂಬುವವರ ಮೇಲೆ ಹಲ್ಲೆ ನಡೆಸಿರುವ ಘಟನೆ ವಿಜಯನಗರದಲ್ಲಿ ಗುರುವಾರ ರಾತ್ರಿ ನಡೆದಿದೆ.
``ನ. 12ರಂದು ರಾತ್ರಿ 7.45ರ ಸುಮಾರಿಗೆ ವಿಜಯನಗರ ಸರ್ವಿಸ್ ರಸ್ತೆ ಶಂಕರ್‍ನಾಗ್ ಆಟೊ ನಿಲ್ದಾಣದ ಹತ್ತಿರ ಕಾರು ನಿಲ್ಲಿಸಿ ಅಂಗಡಿಗೆ ತೆರಳಿದ್ದೆ. ಅಂಗಡಿಯಿಂದ ಮರಳಿ ಬಂದಾಗ ಕಾರಿನ ಸುತ್ತ ನಾಲ್ಕು ಆಟೋ ನಿಲ್ಲಿಸಿದ್ದರು. ಈ ವಿಚಾರವಾಗಿ ಆಟೊ ಚಾಲಕರು ಮತ್ತು ನನ್ನ ನಡುವೆ ನಡೆದ ವಾಗ್ವಾದ ನಡೆಯಿತು.
ಚಾಲಕರು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಲ್ಲದೆ ಇಬ್ಬರು ಆಟೊ ಚಾಲಕರು ನನ್ನ ಕೆನ್ನೆಗೆ ಕೈಯಿಂದ ಹೊಡೆದು ಗಾಯಗೊಳಿಸಿ, ಕಾರು ತೆಗೆಯಲು ಬಿಡದೆ ಕೀ ಕಿತ್ತುಕೊಳ್ಳಲು ಪ್ರಯತ್ನಿಸಿದರು. ಗಲಾಟೆ ವೇಳೆ ಎಲ್ಲಾ ಆಟೋ ಚಾಲಕರು ಪಾನಮತ್ತರಾಗಿದ್ದರು. ಅವರ ಹೊಡೆತಕ್ಕೆ ಸಿಲುಕಿ ನಾನು ಪ್ರಜ್ಞೆ ಕಳೆದುಕೊಂಡೆ' ಎಂದು ವಿಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ.
Advertisement