ಬೆಂಗಳೂರು ಸ್ಫೋಟದ ಆರೋಪಿ ಆಪ್ತನ ಸೆರೆ

2005ರ ಬೆಂಗಳೂರು ಸ್ಫೋಟದ ಆರೋಪಿ ಟಿ ನಾಝೀರ್ ಎಂಬುವನ ಆಪ್ತ ಶಹ್ನಾಜ್‍ನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ...
ಬೆಂಗಳೂರು ಸ್ಫೋಟ ಪ್ರಕರಣ (ಸಂಗ್ರಹ ಚಿತ್ರ)
ಬೆಂಗಳೂರು ಸ್ಫೋಟ ಪ್ರಕರಣ (ಸಂಗ್ರಹ ಚಿತ್ರ)

ಕೊಚ್ಚಿ: 2005ರ ಬೆಂಗಳೂರು ಸ್ಫೋಟದ ಆರೋಪಿ ಟಿ ನಾಝೀರ್ ಎಂಬುವನ ಆಪ್ತ ಶಹ್ನಾಜ್‍ನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಈತ ಆರೋಪಿ ನಾಝೀರ್ ಜತೆಗೆ ಪತ್ರ ವ್ಯವಹಾರ  ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕಳ್ಳತನ ಆರೋಪವೊಂದರ ಸಂಬಂಧ ಬಂಧಿಸಿ, ಕೋರ್ಟ್‍ಗೆ ಹಾಜರುಪಡಿಸುವಾಗ ಈ ಪತ್ರದ ವ್ಯವಹಾರ ನಡೆದಿದೆ. ಪೊಲೀಸರ ಪ್ರಕಾರ, ಎಲ್‍ಇಟಿ ಉಗ್ರ ನಾಝೀರ್ ಈತನಿಗೆ 8 ಪತ್ರಗಳನ್ನು  ಬರೆದಿದ್ದಾನೆ. ಈ ಪತ್ರಗಳಲ್ಲಿ ಬೆಂಗಳೂರು ಸ್ಫೋಟದ ಬಗ್ಗೆ ಪ್ರಸ್ತಾಪಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಹೀಗಾಗಿ ಈತನ ವಿರುದ್ಧ ಯುಎಪಿಎ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.  ಭಯೋತ್ಪಾದಕನ ಜತೆಗೆ ಸಂಪರ್ಕ ಇಟ್ಟುಕೊಂಡಿದ್ದ ಕಾರಣಕ್ಕಾಗಿ ಈ ಕೇಸು ದಾಖಲಿಸಲಾಗಿದೆ. ಶುಕ್ರವಾರವಷ್ಟೇ ಬೆಂಗಳೂರು ಜೈಲಿನಲ್ಲಿದ್ದ ನಾಝೀರ್‍ನನ್ನು ಕೋಲೆಂಚೇರಿ ಫಸ್ಟ್ ಕ್ಲಾಸ್  ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಕರೆತರಲಾಗಿತ್ತು.

ಕೇರಳ ಮತ್ತು ಕರ್ನಾಟಕ ಪೊಲೀಸರ ಬಿಗಿ ಭದ್ರತೆಯಲ್ಲಿ ಕೋರ್ಟ್‍ಗೆ ಹಾಜರುಪಡಿಸಲಾಗಿತ್ತು. 2002ರಲ್ಲಿ ಇಲ್ಲಿನ ಆಭರಣ ಅಂಗಡಿಯ ಮಾಲೀಕ, ಮತ್ತವರ ಪುತ್ರನ ಮೇಲೆ ಹಲ್ಲೆ ನಡೆಸಿ  ಕಳ್ಳತನ ನಡೆಸಿದ ಆರೋಪದ ಸಂಬಂಧ ನಾಝೀರ್‍ನನ್ನು ಬೆಂಗಳೂರಿಂದ ಕರೆತರಲಾಗಿತ್ತು. ಈ ಸಂದರ್ಭದಲ್ಲಿ 2 ಕೆಜಿ ಬಂಗಾರ ಕದ್ದಿದ್ದ ನಾಝೀರ್, ಇದನ್ನು ಉಗ್ರ ಕೃತ್ಯಗಳಿಗೆ ಬಳಕೆ ಮಾಡಿದ್ದ  ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com