
ಬೆಂಗಳೂರು: ಪ್ರತ್ಯೇಕ ಕಡೆ ಬುಧವಾರ ಕರಡಿ ಹಾಗೂ ಚಿರತೆ ದಾಳಿಗೆ ಇಬ್ಬರು ಮೃತಪಟ್ಟಿದ್ದರೆ, ಕಾಡಾನೆ ದಾಳಿಗೆ ಕಾರ್ಮಿಕರೊಬ್ಬರಿಗೆ ಗಾಯವಾಗಿದೆ. ಇನ್ನು ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ.
ಕರಡಿ ದಾಳಿ: ಹೊಸದುರ್ಗ ತಾಲೂಕಿನ ತಣಿಗೆಕಲ್ಲು ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಧರಣೇಶಪ್ಪ ಎಂಬುವರ ಮೇಲೆ ಮೂರು ಕರಡಿಗಳು ದಾಳಿ ನಡೆಸಿ ಕೊಂದು ಹಾಕಿವೆ. ಗ್ರಾಮಸ್ಥರು ಓಡಿಸಲು ಮುಂದಾದರೂ ಒಂದು ಕರಡಿ ಶವದ ಮುಂದೆಯೇ ಇತ್ತು. ಕೊನೆಗೆ ಗ್ರಾಮಸ್ಥರು ಬಡಿದುಕೊಂದಿದ್ದಾರೆ.
ಕೊಂದ ಚಿರತೆ: ಸಂಡೂರು ತಾಲೂಕಿನ ಸಿದ್ದಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಆಡು ಮೇಯಿಸುತ್ತಿದ್ದ ಕರಡಿ ಭರಮಲಿಂಗಪ್ಪ (70) ಎಂಬುವರ ಮೇಲೆ ಚಿರತೆ ದಾಳಿ ನಡೆಸಿ ಕೊಂದಿದೆ. ಆಡು ಮೇಯಿಸುತ್ತಾ ಊಟಕ್ಕೆ ಕುಳಿತಿದ್ದಾಗ ದಾಳಿ ನಡೆಸಿದೆ. ಸಕಲೇಶಪುರ ತಾಲೂಕಿನ ದಬ್ಬಳ್ಳಿಯಲ್ಲಿ ಕುಮಾರ್ (42) ಎಂಬುವರ ಮೇಲೆ ಕಾಡಾನೆ ದಾಳಿ ನಡೆಸಿ ಗಾಯಗೊಳಿಸಿದೆ. ಅವರನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಡಗು ಜಿಲ್ಲೆಯ ಸಿದ್ದಾಪುರದ ಚೆಟ್ಟಳ್ಳಿಯಲ್ಲಿ ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ.
Advertisement