
ಬೆಂಗಳೂರು: ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ದೂರಸಂಪರ್ಕ ಇಲಾಖೆಗೆ ರು.75 ಲಕ್ಷ ನಷ್ಟ ಉಂಟು ಮಾಡಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮುತ್ಯಾಲನಗರ ನಿವಾಸಿ ರವಿಕುಮಾರ್(50) ಹಾಗೂ ಕೇರಳದ ಕಾಸರಗೋಡು ಮಂಗಲ್‍ಪಾಡಿಯ ಅನಿಲï ಕುಮಾರ್ (38) ಬಂಧಿತರು. ಇವರಿಂದ ಕೃತ್ಯಕ್ಕೆ ಬಳಸುತ್ತಿದ್ದ 2 ಲ್ಯಾಪ್‍ಟಾಪ್‍ಗಳು, 3 ಮೊಬೈಲ್ ಫೋನ್, 4 ಗೇಟ್ ವೇಗಳು, 4 ಮೋಡಮ್, ವಿವಿಧ ಕಂಪನಿಗಳ 97 ಸಿಮ್ ಗಳು, 64 ಆ್ಯಂಟೆನಾ ಮತ್ತಿತರ ಪರಿಕರ ಜಪ್ತಿ ಮಾಡಲಾಗಿದೆ.
ವಿವಿಧ ದೂರಸಂಪರ್ಕ ಕಂಪನಿಯ ಸಿಮï ಬಳಸಿ ಅನಧಿಕೃತವಾಗಿ ಟೆಲಿಫೋನ್ ಎಕ್ಸ್‍ಚೇಂಜ್ ಮಾಡಿಕೊಂಡು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಮಾರ್ಪಡಿಸುತ್ತಿದ್ದರು. ಇದರಿಂದ ಸರ್ಕಾರಕ್ಕೆ ಮತ್ತು ದೂರಸಂಪರ್ಕ ಸಂಸ್ಥೆಗೆ ತಿಂಗಳಿಗೆ ರು.65 ಲಕ್ಷ ಉಂಟಾಗುತ್ತಿತ್ತು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು,
ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮತ್ತಿಕೆರೆಯ ಬಿನ್‍ಸಾಫ್ಟ್ ಟೆಕ್ನೊ ಸಲ್ಯೂಷನ್ ಮತ್ತು 11ನೇ ಕ್ರಾಸ್ ಸಪ್ತಗಿರಿ ಬಿಲ್ಡಿಂಗ್‍ನ ಅಂಗಡಿಗಳ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ.
ಏರ್‍ಟೆಲ್ ಕಂಪನಿಯ ಬ್ರಾಡ್‍ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಪಡೆದು ಜೋಡಣೆ ಮಾಡಿರುವ ಗೇಟ್‍ವೇಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದರು. ದುಬೈ, ಸೌದಿ ಅರೇಬಿಯಾದಲ್ಲಿರುವ ಕಂಪನಿಗಳ ಮೂಲಕ ಹೊಂದಾಣಿಕೆ ಮಾಡಿಕೊಂಡು ಸ್ಥಳೀಯ ಗ್ರಾಹಕರಿಗೆ ಕಡಿಮೆ ದರಕ್ಕೆ ಕರೆ ಸಂಪರ್ಕಿಸುತ್ತಿದ್ದರು.
Advertisement