ವೃದ್ಧಾಪ್ಯದಲ್ಲಿ ಹೆತ್ತವರ ಬಿಡದಿರಿ

ಸಮಾಜದಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಮಕ್ಕಳು ಹೆತ್ತವರನ್ನು ವೃದ್ಧಾಪ್ಯದ ಕಾಲದಲ್ಲಿ ಕೈ ಬಿಡಬಾರದು ಎಂದು ಆದಿಚಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು ಹೇಳಿದರು...
ನಿರ್ಮಾಣ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಿ.ಲಕ್ಷ್ಮಿನಾರಾಯಣ್ ಅವರನ್ನು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅಭಿನಂದಿಸಿದರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಾಹ
ನಿರ್ಮಾಣ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಿ.ಲಕ್ಷ್ಮಿನಾರಾಯಣ್ ಅವರನ್ನು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅಭಿನಂದಿಸಿದರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಾಹ
Updated on

ಬೆಂಗಳೂರು: ಸಮಾಜದಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಮಕ್ಕಳು ಹೆತ್ತವರನ್ನು ವೃದ್ಧಾಪ್ಯದ ಕಾಲದಲ್ಲಿ ಕೈ ಬಿಡಬಾರದು ಎಂದು ಆದಿಚಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು ಹೇಳಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ `ವಿ.ಲಕ್ಷ್ಮೀನಾರಾಯಣ್ ಅಭಿನಂದನಾ ಸಮಾರಂ ಭ'ದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಹೆತ್ತವರನ್ನು ಕಡೆಗಣಿಸುವ
ಮನೋಭಾವನೆ ಹೆಚ್ಚುತ್ತಿರುವುದರಿಂದಲೇ ವೃದ್ಧಾಶ್ರಮಗಳ ಸಂಖ್ಯೆ ಏರುತ್ತಿದೆ. ಮಕ್ಕಳು ಚಿಕ್ಕವರಾಗಿದ್ದಾಗ ಹೆತ್ತವರು ಅವರ ಎಲ್ಲ ಚೇಷ್ಟೆಗಳನ್ನು ಸಹಿಸಿಕೊಂಡು, ಕ್ಷಮಿಸಿ ಬೆಳೆಸುತ್ತಾ
ರೆ. ಆದರೆ, ದೊಡ್ಡವರಾದ ಬಳಿಕ ಮಕ್ಕಳು ತಂದೆತಾಯಿಯನ್ನು ವೃದಾಟಛಿಪ್ಯದಲ್ಲಿ ಕೈ ಬಿಡುತ್ತಾರೆ. ಹೆತ್ತವರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಯಬೇಕು ಎಂದರು.

ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಮಾತನಾಡಿ, ಸಮಾಜದಿಂದ ಪಡೆದ ಕಾರಣಕ್ಕಾಗಿ ಮರಳಿ ಸಮಾಜಕ್ಕೆ ತಮ್ಮ ದುಡಿಮೆಯನ್ನು ನೀಡುವವರು ಬಹಳ ಕಡಿಮೆ. ಲಕ್ಷ್ಮಿ ನಾರಾಯಣ್ ಅವರು ಜನರಿಗೆ ಸಂಸತ ನೀಡಬೇಕು ಎಂಬ ಉದ್ದೇಶದಿಂದ ಮಾಡುತ್ತಿರುವ ಕಾರ್ಯಗಳು ಶ್ಲಾಘನೀಯವಾಗಿವೆ ಎಂದರು.

ಸುಜ್ಞಾನಪೀಠ ಪ್ರಶಸ್ತಿ ಸ್ಥಾಪನೆ

ನಿರ್ಮಾಣ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಲಕ್ಷ್ಮಿನಾರಾ ಯಣ್ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಸೇವೆ ಸಲ್ಲಿಸಿದವರಿಗೆ ಜ್ಞಾನಪೀಠ  ಜ್ಞಾನಪೀಠ ಪ್ರಶಸ್ತಿ ಮಾದರಿ ಯಲ್ಲಿ ಸಂಸ್ಥೆ ವತಿಯಿಂದ `ಕನ್ನಡ ಸುಜ್ಞಾನಪೀಠ ಪ್ರಶಸ್ತಿ ನೀಡಲಾಗುವುದು ಎಂದರು. ಆಸರೆ ಅಭಿನಂದನ ಗ್ರಂಥ, ಸಂಸ್ಕೃತಿ ಪೋಷಕ ನಿರ್ಮಾಣ್ ಲಕ್ಷ್ಮಿ ನಾರಾಯಣ್ ಕೃತಿ ಬಿಡುಗಡೆಯಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com