ಬಿಡಿಎಯಿಂದ ಇನ್ನು ಫ್ಲಾಟ್ಸ್ ಗಳಿಗೆ ಆಹ್ವಾನ

ನಿವೇಶನ ಹಂಚಿಕೆಯ ಉತ್ಸಾಹದಲ್ಲಿರುವ ಬಿಡಿಎ ಈಗ ಫ್ಲಾಟ್ ಹಂಚಿಕೆಗೂ ಮುಂದಾಗಿದೆ...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ಬೆಂಗಳೂರು: ನಿವೇಶನ ಹಂಚಿಕೆಯ ಉತ್ಸಾಹದಲ್ಲಿರುವ ಬಿಡಿಎ ಈಗ ಫ್ಲಾಟ್ ಹಂಚಿಕೆಗೂ ಮುಂದಾಗಿದೆ.

ಬೆಂಗಳೂರು ಕೇಂದ್ರ ಭಾಗದ ಹೊರಗಿರುವ ತುಮಕೂರು ರಸ್ತೆಯ ಆಳೂರು, ಮೈಸೂರು ರಸ್ತೆಯ ಕಣಮಿಣಿಕೆ, ದೊಡ್ಡ ಬಾನಹಳ್ಳಿ, ಹೊಳಗೇರಿಹಳ್ಳಿ ಪ್ರದೇಶಗಳಲ್ಲಿ ವಿವಿಧ ಮಾದರಿಯ 3280 ಫ್ಲಾಟ್‍ಗಳನ್ನು ನಿರ್ಮಿಸಿದ್ದು, ಅವುಗಳನ್ನು ಹಂಚಿಕೆ ಮಾಡಲು ಶುಕ್ರವಾರ ಅರ್ಜಿ ಆಹ್ವಾನಿಸಲಿದೆ.

568ಕ್ಕೂ ಹೆಚ್ಚು 1ಬಿಎಚ್‍ಕೆ ಫ್ಲಾಟ್‍ಗಳನ್ನು ನಿರ್ಮಿಸಲಾಗಿ ದೆ. ಅದೇ ರೀತಿ 2 ಬಿಎಚ್‍ಕೆ 1386, ಮತ್ತು 3 ಬಿಎಚ್‍ಕೆ ಮಾದರಿಯ 384 ಫ್ಲಾಟ್ ಗಳನ್ನು ನಿರ್ಮಿಸಲಾಗಿದೆ. ಒಟ್ಟಾರೆ 3280 ಫ್ಲಾಟ್‍ಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಕಡಿಮೆ ದರದಲ್ಲಿ ನೀಡಲಾಗುತ್ತದೆ. ಫ್ಲಾಟ್ ಗಳ ದರ ಮತ್ತು ವಿವರಗಳನ್ನು ಶುಕ್ರವಾರ ಬಿಡಿಎ ವೆಬ್‍ಸೈಟ್ ಮತ್ತು ಪ್ರಚಾರ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗುತ್ತ ದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com