ಅಕ್ರಮ ಹಣ ಸಾಗಣೆ 13 ಮಂದಿ ಬಂಧನ

ನಗರದಲ್ಲಿ ನಡೆಯುತ್ತಿದ್ದ ಬಹುದಡ್ಡ ಹವಾಲ ದಂಧೆಯನ್ನು ಭೇದಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು, 13 ಮಂದಿಯನ್ನು ಬಂಧಿಸಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ನಗರದಲ್ಲಿ ನಡೆಯುತ್ತಿದ್ದ ಬಹುದಡ್ಡ ಹವಾಲ ದಂಧೆಯನ್ನು ಭೇದಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು, 13 ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ರು.1.18 ಕೋಟಿ, 16 ಮೊಬೈಲ್ ಫೋನ್, 2 ನೋಟು ಎಣಿಕೆ ಯಂತ್ರ, 24 ರಬ್ಬರ್ ಸೀಲು, ಕಂಪ್ಯೂಟರ್ ಸೇರಿ ಕೆಲ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಶ್ರೀರಾಂಪುರದ ಆರ್,ಧರ್ಮೇಂದರ್ (42), ಕಾವೇರಿನಗರದ ಚಂಪಾಲಾಲ್ (30), ನಗರ್ತಪೇಟೆಯ ಮಹದೇವಪ್ (22), ಜೀತುಸಿಂಗ್ (18), ಚಿತ್ರದುರ್ಗದ ವಿಕ್ರಮ್ (21), ಸಂಜೀವಿನಿ ನಗರದ ಅರುಣ್ ಎ ಕುಮಾರ್ (36), ಲಗ್ಗೆರೆಯ ಪ್ರಕಾಶ್ (30), ಚಿಕ್ಕಬಳ್ಳಾಪುರದ ಗೋಪಾಲ್ (36), ಹನುಮಂತ ನಗರದ ದಿನೇಶ್ (36), ವೃಷಭಾವತಿ ನಗರದ ಪುರುಷೋತ್ತಮ (45), ತ್ಯಾಗರಾಜನಗರದ ಸುನಿಲ್ (42), ಆರ್ ಟಿ ಸ್ಟ್ರೀಟ್ ನ ಭಗವಾನ್ (30) ಮತ್ತು ಎಟಿ ಸ್ಟ್ರೀಟ್ ನ ಕುನಾಲ್ (34) ಬಂಧಿತ ಆರೋಪಿಗಳು.

ಇವರು ನಗರ್ತ ಪೇಟೆ ಸಿ.ಟಿ.ಸ್ಟ್ರೀಟ್ ನಲ್ಲಿರುವ ಮಹಾವೀರ್ ಬುಲಿಯನ್ಸ್ ಅಂಗಡಿಯಲ್ಲಿ ಅನಧಿಕೃತವಾಗಿ ಹಣ ಸಂಗ್ರಹಿಸಿದ್ದು, ಹವಾಲ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ ಮತ್ತು ಭೂಗತ ಪಾತಕಿಗಳಿಗೂ ಹಣ ರವಾನೆಯಾಗುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ. ಪರಿಶೀಲನೆ ವೇಳೆ ಆರೋಪಿಗಳು ಹವಾಲ ದಂಧೆಯಲ್ಲಿ ತೊಡಗಿರುವುದು ಕಂಡು ಬಂದಿದೆ.

ಚಿನ್ನಾಭರಣ ವ್ಯಾಪಾರಿಯೇ ಸೂತ್ರಧಾರ
ಪ್ರಮುಖ ಆರೋಪಿ ಅಂಗಡಿ ಮಾಲೀಕ  ಧರ್ಮೇಂಧರ್ ಪ್ರಕರಣದ ಸೂತ್ರಧಾರ. ಈತ ಹವಾಲ ಹಣ ಸ್ವೀಕರಿಸಲು ಚಂಪಾಲಾಲ್ ಎಂಬುವನ ನೇಮಿಸಿಕೊಂಡಿದ್ದ. ಉಳಿದ ಆರೋಪಗಳ ಪೈಕಿ ಕೆಲವರು ನೇರವಾಗಿ ಹವಾಲ ಮೂಲಕ ಹಣ ರವಾನೆ ಮಾಡಲು ಬಂದಿದ್ದರು. ಇನ್ನು ಕೆಲವರು ತಮ್ಮ ಮಾಲೀಕರ ಸೂಚನೆ ಮೇರೆಗೆ ಹಣ ನೀಡಲು ಬಂದಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಧರ್ಮೇಂದರ್ ಚಿನ್ನಾಭರಣ ವ್ಯಾಪಾರಿ ಎಂಬುದಾಗಿ ಬಿಂಬಿಸಿಕೊಂಡಿದ್ದಾನೆ. ಆದರೆ, ಹವಾಲ ದಂಧೆಯಲ್ಲಿ ತೊಡಗಿಸಿಕೊಂಡು ನಾನಾ ರಾಜ್ಯಗಳಿಗೆ ಹಣ ರವಾನೆ ಮಾಡುವ ಜಾಲ ಹೊಂದಿದ್ದಾನೆ. ನಾನು ರವಾನಿಸಬೇಕಾದ ಸ್ಥಳದ ಅನುಗುಣವಾಗಿ ಪ್ರತಿ ಲಕ್ಷಕ್ಕೆ ರು.300ರಿಂದ ರು.400 ಕಮಿಷನ್ ಪಡೆಯುತ್ತಿದ್ದ ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಹಲಸೂರುಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com