ಹೈವೆ ಆಗಲಿವೆ ರಾಜಧಾನಿಯ 4 ರಸ್ತೆಗಳು

ರಾಜಧಾನಿ ಬೆಂಗಳೂರಿನ ರಸ್ತೆಗಳು ಇನ್ನುಮುಂದೆ ಖಾಸಗಿ ನಿರ್ವಹಣೆಗೆ ಒಳಪಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲ. ಈ ರಸ್ತೆಗಳನ್ನು ಬಳಸಿದ್ದಕ್ಕೆ ಜನತೆ ಶುಲ್ಕ (ಸರ್‍ಜಾರ್ಜ್) ಪಾವತಿಸುವಂತಾದರೂ ಅಚ್ಚರಿ ಇಲ್ಲ. ಏಕೆಂದರೆ, ರಾಜ್ಯ ಸರ್ಕಾರ ಬೆಂಗಳೂರಿನ ರಸ್ತೆಗಳನ್ನು ...
ಬೆಂಗಳೂರು ನಗರಾಭಿವೃದ್ಧಿಸಚಿವ ಕೆ.ಜೆ. ಜಾರ್ಜ್(ಸಂಗ್ರಹ ಚಿತ್ರ)
ಬೆಂಗಳೂರು ನಗರಾಭಿವೃದ್ಧಿಸಚಿವ ಕೆ.ಜೆ. ಜಾರ್ಜ್(ಸಂಗ್ರಹ ಚಿತ್ರ)
Updated on

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆಗಳು ಇನ್ನುಮುಂದೆ ಖಾಸಗಿ ನಿರ್ವಹಣೆಗೆ ಒಳಪಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲ. ಈ ರಸ್ತೆಗಳನ್ನು ಬಳಸಿದ್ದಕ್ಕೆ ಜನತೆ ಶುಲ್ಕ (ಸರ್‍ಜಾರ್ಜ್) ಪಾವತಿಸುವಂತಾದರೂ ಅಚ್ಚರಿ ಇಲ್ಲ. ಏಕೆಂದರೆ, ರಾಜ್ಯ ಸರ್ಕಾರ ಬೆಂಗಳೂರಿ ನ ರಸ್ತೆಗಳನ್ನು ಖಾಸಗಿ ಸಹಭಾಗಿತ್ವ ದಲ್ಲಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಚಿಂತಿಸಲಾರಂಭಿಸಿದೆ.

ಇದರ ಸಾಧಕ, ಬಾಧಕ ಚರ್ಚಿಸಲು ಸದ್ಯದಲ್ಲೇ ಅಧಿಕಾರಿಗಳ ಸಭೆಯೂ ನಡೆಯಲಿದೆ. ಬೆಂಗಳೂರು ನಗರಾಭಿವೃದ್ಧಿಸಚಿವ ಕೆ.ಜೆ. ಜಾರ್ಜ್ ಮಂಗಳವಾರ ಸುದ್ದಿಗಾರರಿಗೆ
ಈ ಬಗ್ಗೆ ವಿವರ ನೀಡಿದರು. ಬೆಂಗಳೂರಿನ ರಸ್ತೆಗಳು ಉತ್ತಮ ಗುಣಮಟ್ಟದಲ್ಲಿ ಇಲ್ಲ. ಆದ್ದರಿಂದ ನಗರ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟಕ್ಕೇರಿಸಬೇಕು. ಆ ನಿಟ್ಟಿನಲ್ಲಿ
ಅಧ್ಯಯನ ನಡೆಸಿ ನಗರ ರಸ್ತೆಗಳನ್ನು ಪಿಪಿಪಿ ಮಾದರಿಯಲ್ಲಿ ಖಾಸಗಿಗೆ ವಹಿಸಲು ಚರ್ಚಿಸಲಾಗುವುದು ಎಂದರು.

ನಗರ ರಸ್ತೆಗಳ ಬಗ್ಗೆ ಗಮನ ಸೆಳೆದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಕೆ.ಜೆ. ಜಾರ್ಜ್, ನಗರದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳಿಲ್ಲ. ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟದಲ್ಲಿ ರಸ್ತೆಗಳನ್ನು ನಿರ್ಮಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹಣವೂ ಇಲ್ಲ. ಆದ್ದರಿಂದ ತಾತ್ಕಾಲಿಕವಾಗಿ ಗುಂಡಿ ಮುಚ್ಚಲಾಗುತ್ತಿದೆ. ಸಾಮಾನ್ಯ ರೀತಿಯಲ್ಲಿ ರಸ್ತೆಗಳ ನಿರ್ಮಿಸಲು ಟೆಂಡರ್ ಅಹ್ವಾನಿಸಲಾಗಿದೆ. ಆದ್ದರಿಂದ ರಸ್ತೆ ಸಮಸ್ಯೆ ಪರಿಹರಿಸುವುದು ಸುಲಭವಲ್ಲ ಎಂದು ಜಾರ್ಜ್ ಹೇಳಿದರು.

ಬೆಂಗಳೂರಿನ ಜನತೆ ಒಪ್ಪಿದ್ದೇ ಆದರೆ ಬೆಂಗಳೂರಿನ 4 ರಸ್ತೆಗಳನ್ನು ಆಯ್ಕೆ ಮಾಡಿಕೊಂಡು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾದರೆ, ಕನಿಷ್ಠ 16 ರಸ್ತೆಗಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗುವುದು. ಆದರೆ ಈ ಬಗ್ಗೆ ಮೊದಲು ಅಧಿಕಾರಿಗಳ ಜತೆ ಚರ್ಚಿಸುತ್ತೇನೆ. ಅವರಿಂದ ಮಾಹಿತಿ ಪಡೆದು ಜನರಿಂದ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಒಂದೊಮ್ಮೆ ಪಿಪಿಪಿ ಮಾದರಿಯಲ್ಲಿ ರಸ್ತೆ ನಿರ್ಮಿಸಿದರೆ ಅದಕ್ಕೆ ಟೋಲ್ ವಿಧಿಸಬೇಕು. ಆದರೆ ಬೆಂಗಳೂರಿನಲ್ಲಿ ಟೋಲ್ ವಿಧಿಸುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಬಳಕೆದಾರರಿಗೆ ಕೊಂಚ ಪ್ರಮಾಣದ ಸರ್ ಚಾರ್ಜ್ ವಿಧಿಸಿ ನಿರ್ವಹಣಾ ಶುಲ್ಕ ಸಂಗ್ರಹ ಬೇಕಾಗುತ್ತದೆ ಎಂದು ಸಚಿವ ಜಾರ್ಜ್ ಪ್ರತಿಕ್ರಿಯಿಸಿದರು. ಸದ್ಯ ರಸ್ತೆಗಳ ನಿರ್ಮಾಣಕ್ಕೆ ನಮ್ಮಲ್ಲಿರುವವರನ್ನೇ ನೆಚ್ಚಿಕೊಳ್ಳಬೇಕು. ಅದೇ ಪಿಪಿಪಿ ಮಾದರಿಯಲ್ಲಿ ರಸ್ತೆ ಮಾಡಲು ಮುಂದಾದರೆ ವಿದೇಶಗಳ ರಸ್ತೆ ನಿರ್ಮಾತೃಗಳೂ ಭಾಗಿಯಾಗುತ್ತಾರೆ. ರಸ್ತೆ ನಿರ್ಮಾಣಕ್ಕೆ ಖಾಸಗಿಯವರು ಮುಂದೆ ಅವರಿಗೆ ಸಾಲಸೌಲಭ್ಯವೂ ಸಿಗುತ್ತದೆ. ಹಾಗೆಯೇ ಅವರೇ ಇಂತಿಷ್ಟು ವರ್ಷಗಳವರೆಗೂ ನಿರ್ವಹಣೆ ಮಾಡಿ ಲಾಭವನ್ನೂಗಳಿಸಬಹುದು. ಸರ್ಕಾರಕ್ಕೂ ಹೊರೆ ತಪ್ಪುತ್ತದೆ. ಉತ್ತಮ ರಸ್ತೆಗಳು ದೊರೆತಂತಾಗುತ್ತದೆ. ಆದ್ದರಿಂದ ಈ ಎಲ್ಲಾವಿಚಾರಗಳ ಬಗ್ಗೆ ಅಧಿಕಾರಿಗಳ ಜತೆ  ಚರ್ಚಿಸುತ್ತೇನೆ ಎಂದು ಸಚಿವರು ವಿವರಿಸಿದರು.

ಬಿಡಿಎ ಯಾವುದೇ ಕೆರೆ ಒತ್ತುವರಿ ಮಾಡಿಲ್ಲ: ಬಿಡಿಎಯಿಂದ ಕೆರೆ ಒತ್ತುವರಿಯಾಗಿದೆ ಎನ್ನುವುದು ಬರೀ ಆರೋಪ ಅಷ್ಟೆ. ಆದರೆ ವಾಸ್ತವದಲ್ಲಿ ಬಿಡಿಎ ಯಾವುದೇ ಕೆರೆಯನ್ನೂ ಒತ್ತುವರಿ ಮಾಡಿಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿಸಚಿವ ಜಾರ್ಜ್ ಸ್ಪಷ್ಟಪಡಿಸಿದರು. ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಹೈಕೋರ್ಟ್ ಅನುಮತಿ ನೀಡಿರುವುದರಿಂದ ಯಾವುದೇ ಅಡಚಣೆ ಇಲ್ಲ. ಜನರು ಆತಂಕ ಪಡುವ ಅಗತ್ಯವೂ ಇಲ್ಲ. ಏಕೆಂದರೆ ಬಿಡಿಎ ಎಲ್ಲಿಯೂ ಕೆರೆ ಒತ್ತುವರಿ ಮಾಡಿಲ್ಲ. ಇದನ್ನು ಆಯುಕ್ತರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು.

ಕೆರೆ ಒತ್ತುವರಿ ಕುರಿತ ಸದನ ಸಮಿತಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿರಬಹುದು. ಆದರೆ ಅವರು ವರದಿ ನೀಡಲು. ತಮ್ಮ ಶಿಫಾರಸುಗಳನ್ನು ಸಲ್ಲಿಸಲಿ. ಅದನ್ನು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ. ಸಮಿತಿಯಲ್ಲಿ ಆರೋಪ ಬಂದ ಮಾತ್ರಕ್ಕೆ ತಪ್ಪು  ಎನ್ನುವುದು ಸರಿಯಲ್ಲ ಎಂದು ಸಚಿವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com