ಮೊದಲ ದಿನವೇ 1.5 ಲಕ್ಷ ದಂಡ ವಸೂಲಿ, 1520 ಮಂದಿಗೆ ದಂಡ

ಮೊದಲ ದಿನ ದಾಖಲಿಸಿದ ಒಟ್ಟು ಪ್ರಕರಣಗಳಲ್ಲಿ ಯುವಕ– ಯುವತಿಯರ ಪಾಲು ಶೇ 90ರಷ್ಟಿದೆ. 1520 ಜನರಿಗೆ ದಂಡ ವಿಧಿಸಿ. 1.5 ಲಕ್ಷ ಹಣ ಸಂಗ್ರಹ ಮಾಡಲಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದ್ವಿಚಕ್ರ ವಾಹನ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಸವಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಂಚಾರ ಪೊಲೀಸರನ್ನು ಒಳಗೊಂಡ 10 ತಂಡಗಳನ್ನು ರಚಿಸಲಾಗಿತ್ತು. ನಗರದೆಲ್ಲೆಡೆ ಕಾರ್ಯಾಚರಣೆ ನಡೆಸಿದ ಈ ತಂಡಗಳು, ಹೆಲ್ಮೆಟ್ ಧರಿಸದೆ ಪ್ರಯಾಣಿಸುವ ಸವಾರ ಹಾಗೂ ಹಿಂಬದಿ ಸವಾರರನ್ನು ತಡೆದು ದಂಡ ಹಾಕಿ ಕಳುಹಿಸಿದ್ದಾರೆ.

‘ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ  100 ದಂಡ ಹಾಗೂ 2ನೇ ಬಾರಿಯ ಉಲ್ಲಂಘನೆಗೆ 300 ದಂಡ ವಿಧಿಸಲಾಗುವುದು. 3ನೇ ಸಲ ಹೆಲ್ಮೆಟ್ ಧರಿಸದೆ ಸಿಕ್ಕಿ ಬಿದ್ದರೆ ಬೈಕ್ ಸವಾರನ ಪರವಾನಗಿಯನ್ನು ಜಪ್ತಿ ಜತೆಗೆ ಅಮಾನತು ಮಾಡಲು ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗುವುದು.

‘ಸವಾರರು ಸ್ವಯಂ ಪ್ರೇರಿತರಾಗಿ ಹೆಲ್ಮೆಟ್ ಧರಿಸುತ್ತಿದ್ದಾರೆ. ನಗರದಲ್ಲಿ ಶೇ 50ರಷ್ಟು ನಿಯಮ ಪಾಲನೆಯಾಗಿದೆ. ದಿನದಿಂದ ದಿನಕ್ಕೆ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುವುದು. ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದ ಸಾರಿಗೆ ಇಲಾಖೆ, ಮೊದಲು ಸವಾರರಲ್ಲಿ ಅರಿವು ಮೂಡಿಸಿ, ಜ.20ರಿಂದ ದಂಡ ವಿಧಿಸುವುದಾಗಿ ತಿಳಿಸಿತ್ತು. ಅದರಂತೆ  ನಗರದೆಲ್ಲೆಡೆ ಕಾರ್ಯಾಚರಣೆ ನಡೆಯಿತು.

ದಂಡದ ಭೀತಿಯಿಂದ ಬಹುತೇಕ ಹಿಂಬದಿ ಸವಾರರು ಬುಧವಾರ ಹೆಲ್ಮೆಟ್ ಧರಿಸಿಯೇ ಬೈಕ್ ಏರಿದ್ದರು. ಆದರೆ, ಯುವಜನರು  ಈ ನಿಯಮ ಪಾಲಿಸಲು ಅಷ್ಟೇನು ಆಸಕ್ತಿ ತೋರಲಿಲ್ಲ. ಮೊದಲ ದಿನ ದಾಖಲಿಸಿದ ಒಟ್ಟು ಪ್ರಕರಣಗಳಲ್ಲಿ ಯುವಕ– ಯುವತಿಯರ ಪಾಲು ಶೇ 90ರಷ್ಟಿದೆ. 1520 ಜನರಿಗೆ ದಂಡ ವಿಧಿಸಿ. 1.5 ಲಕ್ಷ ಹಣ ಸಂಗ್ರಹ ಮಾಡಲಾಗಿದೆ.

ಹೆಲ್ಮೆಟ್ ಕಡ್ಡಾಯ ಸರ್ಕಾರದ ತೀರ್ಮಾನವಲ್ಲ, ನಾವು ಸುಪ್ರಿಂ ಕೋರ್ಟ್ ಆದೇಶವನ್ನು ಪಾಲಿಸಿದ್ದೇವೆ. ಹಿಂಬದಿ ಸವಾರರು ಹೆಲ್ಮೆಟ್ ಖರೀದಿಸಲು ಸಮಯ ವಿಸ್ತರಿಸುವಂ ಪ್ರಶ್ನೆಯೇ ಇಲ್ಲ. ಆ ರೀತಿಯಾದರೇ ನ್ಯಾಯಾಂಗ ನಿಂದನೆಯ ಪರಿಣಾಮ ಎದುರಿಸಬೇಕಾಗುತ್ತದೆ.

ಸಿದ್ದರಾಮಯ್ಯ, ಮುಖ್ಯಮಂತ್ರಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com