100 ಗೃಹ ರಕ್ಷಕರ ಸ್ಥಾನ ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ
ಕನ್ನಡಪ್ರಭ ವಾರ್ತೆ ರಾಮನಗರ ಏ.6
ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಸಾತನೂರು, ಬಿಡದಿ ಮತ್ತು ಕುದೂರು ಘಟಕಗಳಲ್ಲಿ ಖಾಲಿ ಇರುವ 100 ಗೃಹ ರಕ್ಷಕರ ಸ್ಥಾನ ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಸರ್ಕಾರಿ ಸ್ವಯಂ ಸೇವಾ ಸಂಸ್ಥೆಯಾದ ಗೃಹ ರಕ್ಷಕ ದಳವು ಪೊಲೀಸ್ ಇಲಾಖೆಗೆ ಸಹಾಯಕ ಪಡೆಯಾಗಿ ಕಾರ್ಯನಿರ್ವಹಿಸುತ್ತಿದೆ. ತುರ್ತು ಸಂದರ್ಭಗಳಲ್ಲಿ ವಿಪತ್ತು ನಿರ್ವಹಣೆ ಮಾಡುವುದು ಸಂಸ್ಥೆಯ ಪ್ರಮುಖ ಕರ್ತವ್ಯವಾಗಿದೆ.
ವಿದ್ಯಾರ್ಹತೆ: ಕನಿಷ್ಠ 4ನೇ ತರಗತಿ ಪಾಸಾಗಿರಬೇಕು, 20 ರಿಂದ 50 ವರ್ಷದೊಳಗಿರಬೇಕು, ಕಡ್ಡಾಯವಾಗಿ ಬ್ಯಾಂಕ್ ಖಾತೆ ಹೊಂದಿರಬೇಕು. ಸರ್ಕಾರಿ ನೌಕರರು, ಸ್ವಯಂ ಸೇವೆ ಮಾಡಲು ಇಚ್ಛಿಸುವ ಯಾವುದೇ ವೃತ್ತಿಯಲ್ಲಿರುವವರು, ಗೃಹ ರಕ್ಷಕರಿಗೆ ಕರ್ತವ್ಯಗಳ ಸಮಯದಲ್ಲಿ ಮತ್ತು ವಾರದ ಕವಾಯತುಗಳ ಹಾಜರಿಗೆ ಗೌರವಧನ ನೀಡಲಾಗುವುದು.
ನೇಮಕಗೊಂಡವರಿಗೆ ಸ್ಥಳೀಯವಾಗಿ ಮೂಲ ತರಬೇತಿ ಹಾಗೂ ಬೆಂಗಳೂರಿನಲ್ಲಿ ಹೆಚ್ಚಿನ ತರಬೇತಿಗೆ ನಿಯೋಜಿಸಲಾಗುವುದು. ಪ್ರಯಾಣ ವೆಚ್ಚ ಹಾಗೂ ತರಬೇತಿ ಭತ್ಯೆಗಳನ್ನು ಸಂಸ್ಥೆಯೇ ಭರಿಸಲಿದೆ. ಆಸಕ್ತ ಅಭ್ಯರ್ಥಿಗಳು(ಮಹಿಳೆಯರು ಸೇರಿದಂತೆ) ಅರ್ಜಿಯನ್ನು ಏ.20ರೊಳಗೆ ಜಿಲ್ಲಾ ಸಮಾದೇಷ್ಟರ ಕಚೇರಿ, ಗೃಹ ರಕ್ಷಕ ದಳ, ಕುವೆಂಪುನಗರ, ಮಿನಿ ವಿಧಾನಸೌಧದ ಎದುರು, ರಾಮನಗರ ಇವರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ಘಟಕಗಳ ಘಟಕಾಧಿಕಾರಿಗಳು, ಪೊಲೀಸ್ ಠಾಣೆಗಳು, ಜಿಲ್ಲಾ ಗೃಹ ರಕ್ಷಕ ದಳದ ಕಚೇರಿಯನ್ನು ಖುದ್ದಾಗಿ ಅಥವಾ ದೂ. 080-27272256 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

