ಬೆಂಗಳೂರು ಗ್ರಾಮಾಂತರ

ನಿಮ್ಮ ಮನೆ ಮಗನನ್ನು ಗೆಲ್ಲಿಸಿ, ಕೆಲಸ ಮಾಡುತ್ತೇನೆ

Published On :

ಕ.ಪ್ರ.ವಾರ್ತೆ   ಮಾಗಡಿ   ಏ.7
ನಿಮ್ಮ ಮನೆಯ ಮಗನನ್ನು ಗೆಲ್ಲಿಸಿ, ಪ್ರಾಮಾಣಿಕವಾಗಿ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಮತದಾರರಲ್ಲಿ ಮನವಿ ಮಾಡಿದರು.
ಅವರು ಆಗಲಕೋಟೆ, ಪೂಜಾರಿಪಾಳ್ಯ, ಮಠದಪಾಳ್ಯ, ಮತ್ತೀಕೆರೆ, ದಂಡಿಗೇಪುರ, ಏಳಿಗೆಹಳ್ಳಿ, ಗೆಜ್ಜಗಾರಕುಪ್ಪೆ, ಗಟ್ಟೀಪುರ, ಚಿಟ್ಟನಹಳ್ಳಿ, ಕೊಟ್ಟಗಾರನಹಳ್ಳಿ, ಲಕ್ಕಸಂದ್ರ, ಬೆಳಗವಾಡಿ ಇತರೆ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚಿಸಿದರು.  ಮೂರು ಬಾರಿ ನನ್ನನ್ನು ವಿಧಾನ ಸಭೆಗೆ ಆಯ್ಕೆ ಮಾಡಿದ್ದೀರ, ಮತ್ತೊಮ್ಮೆ ಆಶೀರ್ವದಿಸಿ ಎಂದರು.
ತಾಲೂಕಿನಲ್ಲಿ ನೀರಿನ ಸಮಸ್ಯೆ  ನಿವಾರಣೆಗೆ ಶಕ್ತಿ ಮೀರಿ ಸ್ಪಂದಿಸಿದ್ದೇನೆ. ಹಳ್ಳಿ, ಹಳ್ಳಿಗಳಿಗೂ ಸಂಪರ್ಕ ರಸ್ತೆ ಕಲ್ಪಿಸಿದ್ದೇನೆ. ಡಾಂಬರೀಕರಣಗೊಳಿಸಿದ್ದೇನೆ.  ಮಹಿಳೆಯರಿಗೆ ಹೆಚ್ಚಿನ ಸೌಲತ್ತು ನೀಡಲು ವಿಶೇಷವಾದ ಯೋಜನೆ ರೂಪಿಸಲಾಗುವುದು. ಸ್ತ್ರೀಶಕ್ತಿ ಸಂಘಗಳಿಗೂ ಹೆಚ್ಚಿನ ಶಕ್ತಿ ನೀಡುತ್ತೇನೆ ಎಂದರು. ಜಿಪಂ ಅಧ್ಯಕ್ಷ ಕೆ.ಮುದ್ದುರಾಜ ಯಾದವ್  ಮಾತನಾಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಸೇವೆ ಕ್ಷೇತ್ರಕ್ಕೆ ಅನನ್ಯವಾದುದು. ಮಾನವೀಯ ಮೌಲ್ಯಗಳುಳ್ಳ ಜೆಡಿಎಸ್  ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ ಅವರನ್ನು ಗೆಲ್ಲಿಸೋಣ ಎಂದರು. ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ  ಈ ಬಾರಿ ಎಚ್.ಸಿ. ಬಾಲಕೃಷ್ಣ ಅವರನ್ನು ಗೆಲ್ಲಿಸಿಕೊಂಡರೆ ಕ್ಷೇತ್ರದಲ್ಲಿ  ಹಸಿರು ಕ್ರಾಂತಿಯಾಗಲಿದೆ ಎಂದರು. ತಾ.ಪಂ. ಅಧ್ಯಕ್ಷ ಬಿ.ಟಿ.ವೆಂಕಟೇಶ್, ರೂಪೇಶ್, ಎ.ಸಿ.ಗಂಗಣ್ಣ, ಗಿರಿಯಣ್ಣ, ದೊಡ್ಡಯ್ಯ, ಆನಂದ್, ಜಯಣ್ಣ, ವಿಜಯಕುಮಾರ್, ಸಿದ್ದಪ್ಪ, ರಮೇಶ್, ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.