ಬೆಂಗಳೂರು ಗ್ರಾಮಾಂತರ

10 ವರೆಗೆ ಕಾದು ನೋಡಿ...

Published On :

ಕ.ಪ್ರ.ವಾರ್ತೆ   ಮಾಗಡಿ   ಏ.7
ಏಪ್ರಿಲ್ 10 ವರೆಗೆ ಕಾದು ನೋಡಿ,  ಕಾಂಗ್ರೆಸ್‌ನಿಂದ ಮಾಗಡಿ ವಿಧಾನ ಸಭಾ ಕ್ಷೇತ್ರಕ್ಕೆ ಅಧಿಕೃತ ಅಭ್ಯರ್ಥಿ ಯಾರು ಎಂದು ತೀರ್ಮಾನವಾಗುತ್ತದೆ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಎಚ್.ಎಂ.ಕೃಷ್ಣಮೂರ್ತಿ ಸ್ಪಷ್ಟಪಡಿಸಿದರು.
ಅವರು ಮಾಧ್ಯಮದೊಂದಿಗೆ ಮಾತನಾಡಿ, ಮಾಗಡಿ ವಿಧಾನ ಸಭಾ ಕ್ಷೇತ್ರಕ್ಕೆ ಈಗಾಗಲೇ ಪ್ರಕಟಿಸಿರುವ ಕಾಂಗ್ರೆಸ್   ಅಭ್ಯರ್ಥಿ ಹೆಸರು ಅಂತಿಮವಲ್ಲ. ಕಾಂಗ್ರೆಸ್ ಪಕ್ಷದ ಅದಿನಾಯಕಿ ಸೋನಿಯಾಗಾಂಧಿ ವಿದೇಶದಲ್ಲಿದ್ದಾರೆ. ಅವರು ವಾಪಸು ಬಂದ ನಂತರ ಪಕ್ಷದ ರಾಷ್ಟ್ರ ನಾಯಕರು ಸೋನಿಯಾಗಾಂಧಿ ಅವರೊಂದಿಗೆ ಸಮಾಲೋಚಿಸಿ ಅಧಿಕೃತ  ಕಾಂಗ್ರೆಸ್  ಅಭ್ಯರ್ಥಿ ಯಾರೆಂದು ತೀರ್ಮಾನ ಮಾಡುತ್ತಾರೆ. ರಾಜ್ಯದ ಕೆಲ ಕಾಂಗ್ರೆಸ್  ನಾಯಕರು ಪ್ರಸ್ತುತವಾಗಿ  ಹೈಕಮಾಂಡ್‌ಗೆ ನನ್ನ ವಿರುದ್ಧ ತಪ್ಪು ಸಂದೇಶ ನೀಡಿದ್ದಾರೆ. ಹಾಗಾಗಿ ಟಿಕೆಟ್ ನೀಡುವಲ್ಲಿ ಗೊಂದಲ ಉಂಟಾಗಿದೆ.
ವಿದೇಶದಿಂದ ಸೋನಿಯಾ ಗಾಂಧಿ ದೆಹಲಿಗೆ ಬಂದ ಕೂಡಲೆ ಟಿಕೆಟ್ ನನಗೆ ಸಿಗುತ್ತದೆ ಎಂಬ ಭರವಸೆ ಇದೆ ಎಂದು ಸ್ಪಷ್ಟಪಡಿಸಿದರು.
ಕಣ್ಣೀರು ಹಾಕಿದರು: ಕಳೆದ 2008 ರಲ್ಲಿ ಮಾಗಡಿ ವಿಧಾನ ಸಭಾ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದೆ, ಕೆಲ ಕಾರಣದಿಂದ  ನಾಮಪತ್ರ ವಾಪಸು ತೆಗೆದುಕೊಂಡಾಗ ಕ್ಷೇತ್ರ ಬಹುತೇಕ ಮತದಾರರು ಕಣ್ಣೀರು ಹಾಕಿದರು. ನೊಂದವರ ಕಣ್ಣೀರು ಒರೆಸಬೇಕು ಎಂದು  ನಾನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ರಾಜಕೀಯವಾಗಿ ಸ್ಥಾನ ಮಾನ ಸಿಕ್ಕರೆ ಮತ್ತಷ್ಟು ಜನ ಸೇವೆ ಮಾಡಬಹುದು ಎಂಬ ಚಿಂತನೆಯಿಂದ  ಮಾಗಡಿ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್  ಅಭ್ಯರ್ಥಿಯಾಗಿ  ಸ್ವರ್ಧಿಸಲು ಟಿಕೆಟ್ ನೀಡುವಂತೆ ಸೋನಿಯಾಗಾಂಧಿ ಅವರಲ್ಲಿ ಅರ್ಜಿ ಸಲ್ಲಿಸಿ ಮನವಿ ಮಾಡಿಕೊಂಡಿದ್ದೇನೆ. ಪಕ್ಷದಿಂದ ಅಧಿಕೃತ ಟಿಕೆಟ್ ದೊರಕುತ್ತದೆ ಎಂಬ ಆತ್ಮವಿಶ್ವಾಸ ನನಗಿದೆ. ಅಭಿಮಾನಿಗಳ ಹಾಗೂ ಮತದಾರರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸುವುದು ಶತಸಿದ್ಧ. ಮತದಾರರ ಆಶೀರ್ವಾದಿಂದ ಗೆದ್ದು, ನೊಂದವರ ಕಣ್ಣೀರು ಒರೆಸುತ್ತೇನೆ ಎಂದು ಡಾ. ಎಚ್.ಎಂ.ಕೃಷ್ಣಮೂರ್ತಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.