ಬೆಂಗಳೂರು ಗ್ರಾಮಾಂತರ

ಚೆಕ್ಪೋಸ್ಟ್ 10 ಕಡೆ ಸ್ಥಾಪನೆ

Published On :

ಕ.ಪ್ರ.ವಾರ್ತೆ   ರಾಮನಗರ   ಏ.9
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನವೀನ್ರಾಜ್ ಸಿಂಗ್ ಆದೇಶದಂತೆ 10 ಕಡೆ ಚೆಕ್ಪೋಸ್ಟ್ ಸ್ಥಾಪಿಸಲಾಗಿದೆ.
ಮಾಗಡಿ ಕ್ಷೇತ್ರದ ಸೋಲೂರು ಹ್ಯಾಂಡ್ಪೋಸ್ಟ್, ಸೋಮೇಶ್ವರ ಕಾಲೋನಿ, ತಾವರೆಕೆರೆ ಗಡಿ ಬಳಿಯ ವರದನಹಳ್ಳಿಗಳಲ್ಲಿ, ರಾಮನಗರ ಕ್ಷೇತ್ರದ ಕುಂಬಳಗೋಡು, ಹೆಜ್ಜಾಲ ಬಳಿ ಚೆಕ್ಪೋಸ್ಟ್ಗಳನ್ನು ಸ್ಥಾಪನೆ ಮಾಡಲಾಗಿದೆ. ಕನಕಪುರ ಕ್ಷೇತ್ರ ವ್ಯಾಪ್ತಿಯಲ್ಲಿ ತಮಿಳುನಾಡು ಗಡಿಯ ಹುಣಸನಹಳ್ಳಿ ಚೆಕ್ಪೋಸ್ಟ್, ಹಾರೋಹಳ್ಳಿ ಬಸ್ನಿಲ್ದಾಣ, ದುದ್ದೂರು-ಹಾರೋಹಳ್ಳಿ, ಹೊನ್ನಿಗಾನಹಳ್ಳಿ, ಚನ್ನಪಟ್ಟಣ ಕ್ಷೇತ್ರದ ಕೆಸ್ತೂರು ರಸ್ತೆಯ ಕುಂಬಾರಕಟ್ಟೆ, ಮಂಡ್ಯ ಗಡಿಯ ಕೋಲೂರು ಗೇಟ್ಗಳಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ.
ತಪಾಸಣೆಗೆ ಸೂಚನೆ: ಚೆಕ್ಪೋಸ್ಟ್ಗಳಲ್ಲಿ ನಿಗಾ ಘಟಕಗಳು ಹೆಚ್ಚಿನ ಹಣ, ಅಕ್ರಮ ಮದ್ಯ, ಅನುಮಾಸ್ಪದ ವಸ್ತುಗಳ ಸಾಗಣೆ ಸಂಬಂಧ ನಿಗಾ ವಹಿಸಲಿವೆ. ಅನುಮಾಸ್ಪದವಾಗಿ ಕಂಡು ಬಂದ ವಾಹನ ಹಾಗೂ ವ್ಯಕ್ತಿಗಳನ್ನು ಪರಿಶೀಲಿಸಿ ವಿಚಾರಣೆಗೆ ಒಳಪಡಿಸಲಿವೆ. ವಿಚಾರಣೆ ವೇಳೆ ಸಮರ್ಪಕ ಮಾಹಿತಿ ಹಾಗೂ ದಾಖಲಾತಿಗಳನ್ನು ಒದಗಿಸದಿದ್ದಲ್ಲಿ ಹಣ, ವಸ್ತುಗಳನ್ನು ಜಫ್ತಿ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ವಾಹನ ತಡೆ, ಪರಿಶೀಲನೆ, ವಶಪಡಿಸಿಕೊಳ್ಳುವಿಕೆ ಪ್ರಕ್ರಿಯೆಯ ವೀಡಿಯೋ ಚಿತ್ರೀಕರಣ ಮಾಡಲಾಗುವುದು.  
ಪ್ರಕರಣದಲ್ಲಿ ಸಿಲುಕುವ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ. ವಶಪಡಿಸಿಕೊಂಡ ಹಣ, ವಸ್ತುಗಳನ್ನು 24 ತಾಸಿನಲ್ಲಿ ಖಜಾನೆಗೆ ಜಮೆ ಮಾಡಲಾಗುತ್ತದೆ. ವರದಿಯನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗಕ್ಕೆ ನೀಡಲಾಗುವುದು.
ತಂಡಗಳ ರಚನೆ: ಮಾಗಡಿ ತಾಲೂಕಿಗೆ ಉಪ ವಿಭಾಗದ ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಟರಾಜ್(9916929957), ರಾಮನಗರ ತಾಲೂಕಿಗೆ ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ನಾಗರಾಜ್(9448482710) ತಂಡದ ಮುಖ್ಯಸ್ಥರು.  
ಕನಕಪುರಕ್ಕೆ ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಬಿ. ಪ್ರಕಾಶ್(9900172810), ಚನ್ನಪಟ್ಟಣಕ್ಕೆ ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಿಶೋರ್ ಜಿ.ದೇಸಾಯಿ(9342727015) ಘಟಕದ ಮುಖಸ್ಥರಾಗಿ ಕೆಲಸ ನಿರ್ವಹಿಸುವರು.
ಪ್ರತಿ ಘಟಕವು 2 ಪಾಳಿಗಳಲ್ಲಿ ಕೆಲಸ ನಿರ್ವಹಿಸಲಿದೆ. ಪ್ರತಿ ಘಟಕದಲ್ಲಿ ಪಿಡಿಒ, ತಲಾ ಒಬ್ಬರು ಪೊಲೀಸ್ ಪೇದೆ, ಅಬಕಾರಿ ಸಿಬ್ಬಂದಿ, ಅರಣ್ಯ ಸಿಬ್ಬಂದಿ ಹಾಗೂ ವಿಡಿಯೋಗ್ರಾಫರ್ ಇರುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.