ಬೆಂಗಳೂರು ಗ್ರಾಮಾಂತರ

ಸಮುದಾಯ ಸೇವೆಗೆ ನಮ್ಮ ಮೆಟ್ರೋ ಬದ್ಧ: ವ್ಯವಸ್ಥಾಪಕ ನಿರ್ದೇಶಕ ಶಿವಶೈಲಂ

Published On :

ಕನಕಪುರ: ಸಮುದಾಯ ಸೇವೆಯಲ್ಲಿ ತೊಡಗಿಸಿಕೊಳ್ಳಲು ಬೆಂಗಳೂರು ಮೆಟ್ರೋ ಬದ್ಧವಾಗಿದ್ದು, ಅಂತಾರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ ಯೂತ್ ಹಾಸ್ಟೆಲ್‌ಗೆ ಬೆಂಗಳೂರಿನಲ್ಲಿ ತನ್ನ ಸದಸ್ಯರಿಗೆ ವಸತಿ ಸೌಲಭ್ಯ ನೀಡುವ ಸಲುವಾಗಿ ಮೆಟ್ರೋ ಪುನರ್ವಸತಿ ವಸಾಹತು ಪ್ರದೇಶದಲ್ಲಿ ನಾಲ್ಕು ಕಾಟೇಜ್‌ಗಳನ್ನು ನೀಡಿದೆ ಎಂದು ಬಿಎಂಆರ್‌ಸಿಎಲ್ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಶಿವಶೈಲಂ ತಿಳಿಸಿದ್ದಾರೆ.
ಬೆಂಗಳೂರಿನ ಸುಂಕದಕಟ್ಟೆ ಪೈಪ್‌ಲೈನ್‌ಬಳಿಯ ಮೆಟ್ರೋಲೇಔಟ್‌ನಲ್ಲಿ ಇಂಟರ್‌ನ್ಯಾಷನಲ್‌ಯೂತ್ ಹಾಸ್ಟೆಲ್ ಶಾಖೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ವೈಹೆಚ್‌ಎಐ ರಾಷ್ಟ್ರೀಯ ಛೇರ್ಮನ್ ಹರೀಶ್ ಸಕ್ಸೇನಾ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ರಾಷ್ಟ್ರೀಯ ಅಧ್ಯಕ್ಷ ವೆಂಕಟನಾರಾಯಣ್, ಇಂದು ದೇಶದಾದ್ಯಂತ 89 ಕೇಂದ್ರಗಳು ಸಂಸ್ಥೆಯ ದಶಲಕ್ಷ ಸದಸ್ಯರಿಗೆ ವಸತಿ ನಿಲಯ ಸೌಲಭ್ಯ, ಪ್ರವಾಸಿ ಮಾರ್ಗದರ್ಶನ,ಚಾರಣ, ಯುವಜನರಿಗೆ ಪರಿಸರದ ಬಗ್ಗೆ ಅರಿವು ಮೂಡಿಸಿ ಉತ್ತೇಜನ ನೀಡುತ್ತಿದೆ ಎಂದರು.
ಮೆಟ್ರೋ ನಿರ್ದೇಶಕ ಸುಧೀರ್‌ಚಂದ್ರ, ಸಾರ್ವಜನಿಕ ಸಂಪರ್ಕಾಧಿಕಾರಿ ಚೌಹಾಣ್, ಸ್ಯಾಮ್ಯುಯಲ್, ಮಾದೇಗೌಡ, ಪದಾಧಿಕಾರಿಗಳಾದ ಲಕ್ಷ್ಮೀಕಾಂತ,ವಿವೇಕಾನಂದ, ಪದ್ಮನಾಭದವೆ, ಖಜಾಂಚಿ ಶ್ರೀಕಾಂತ್, ರಾಜನ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.