ನನ್ನ ಗೆಲವು ನಿಶ್ಚಿತ: ಎ. ಮಂಜು
ಕ.ಪ್ರ.ವಾರ್ತೆ , ಮಾಗಡಿ , ಏ.15
ರಾಜ್ಯದಲ್ಲಿ ಕಾಂಗ್ರೆಸ್ ಬಿರುಗಾಳಿ ಬೀಸಿದೆ, ಮಾಗಡಿ ವಿಧಾನ ಸಭಾ ಕ್ಷೇತ್ರದಲ್ಲೂ ಮತದಾರರು ಬದಲಾವಣೆ ಬಯಸಿ ನನ್ನನ್ನು ಬೆಂಬಲಿಸಲು ಜನಸಾಗರೋಪದಿಯಲ್ಲಿ ಆಗಮಿಸಿದ್ದಾರೆ. ಮತದಾರರು ನನ್ನನ್ನು ಬಹುಮತದಿಂದ ಗೆಲ್ಲಿಸಿ ವಿಧಾನ ಸಭೆ ಕಳಿಸಿಕೊಡುತ್ತಾರೆ ಎಂದು ವಿಶ್ವಾಸವಿಟ್ಟಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ನುಡಿದರು.
ಅವರು ನಾಮ ಪತ್ರ ಸಲ್ಲಿಸಿ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕ್ಷೇತ್ರದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ನನ್ನ ರಾಜಕೀಯ ನಾಯಕರಾದ ಡಿ.ಕೆ.ಶಿವಕುಮಾರ್, ಎಚ್.ಎಂ. ರೇವಣ್ಣ, ಸಿ.ಎಂ. ಲಿಂಗಪ್ಪ ಅವರಿಗೆ ಆಭಾರಿಯಾಗಿದ್ದೇನೆ. ಮತದಾರರ ಮತ್ತು ನಾಯಕರ ಆಶೀರ್ವಾದಿಂದ ಬಹುಮತದಿಂದ ಗೆಲ್ಲುವ ವಿಶ್ವಾಸ ಹೊಂದಿದ್ದೇನೆ. ನನ್ನನ್ನು ಬಹುಮತದಿಂದ ಗೆಲ್ಲಿಸಿ ವಿಧಾನ ಸಭೆಗೆ ಕಳಿಸಿಕೊಡುವಂತೆ ಕ್ಷೇತ್ರ ಎಲ್ಲಾ ಮತದಾರರು ಆಶೀರ್ವದಿಸಬೇಕಿದೆ. ನಾನು ಗೆದ್ದರೆ ನಿಮ್ಮ ಸೇವಕನಾಗಿ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಪ್ರಾಮಾಣಿಕವಾಗಿ ದುಡಿಯುತ್ತೇನೆ. ನಿಮ್ಮ ಸೇವೆ ಸದಾ ಬದ್ಧನಾಗಿದ್ದೇನೆ ಎಂದು ಮತದಾರರಿಗೆ ವಿನಂತಿಸಿದರು.
ನಾಮಪತ್ರ ಸಲ್ಲಿಕೆ: ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಪಕ್ಷದ ಕಚೇರಿಯಿಂದ ಕಲಾ ತಂಡಗಳ ಮೆರವಣಿಗೆಯೊಂದಿಗೆ ಇಲ್ಲಿನ ವರಸಿದ್ಧಿ ಶ್ರೀವಿನಾಯಕಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ, ದೇವರ ಆಶೀರ್ವಾದ ಪಡೆದು, ಜನತೆಯ ಆಶೀರ್ವಾದಕ್ಕಾಗಿ, ಜನಸಾಗರದೊಂದಿಗೆ ಮೆರವಣಿಗೆಯಲ್ಲಿಯೇ ತಾಲೂಕು ಕಚೇರಿಗೆ ಆಗಮಿಸಿದರು.
ಮಧ್ಯಾಹ್ನ ಸುಮಾರು 12.20ಕ್ಕೆ ಚುನಾವಣಾಧಿಕಾರಿ ಎಂ.ವಿ. ವೈಶಾಲಿ ಅವರಲ್ಲಿ ಎರಡು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ವೇಳೆ ಪತ್ನಿ ಲಕ್ಷ್ಮೀ ಎ.ಮಂಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್, ಜುಟ್ಟನಹಳ್ಳಿ ಜಯರಾಮು, ಚಂದ್ರಶೇಖರ್ ಅವರೊಂದಿಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

