ಒಕ್ಕಲಿಗರು ಮಾರಾಟಕ್ಕಿಲ್ಲ: ಸಚಿವ ಬಚ್ಚೇಗೌಡ ವಾಗ್ದಾಳಿ
ಕ.ಪ್ರ.ವಾರ್ತೆ, ಸೂಲಿಬೆಲೆ, ಏ.21-
ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಣದಿಂದ ಏನುಬೇಕಾದರೂ ಸಾಧಿಸುತ್ತೇನೆ.ಅಗತ್ಯ ಬಿದ್ದರೇ ಗೆಲವಿಗೆ ಒಕ್ಕಲಿಗರ ಮತಗಳನ್ನು ಖರೀದಿಸುತ್ತೇನೆ ಎಂದು ಸಾರ್ವಜನಿಕ ಸಭೆಗಳಲ್ಲಿ ಹೇಳುತ್ತಿದ್ದು, ಒಕ್ಕಲಿಗರು ಮಾರಾಟಕ್ಕಿಲ್ಲ, ಅವರು ಪಾಠ ಕಲಿಸ್ತಾರೆ ಎಂದು ಸಚಿವ ಬಿ.ಎನ್. ಬಚ್ಚೇಗೌಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸೂಲಿಬೆಲೆ ಬಳಿಯ ಕಮ್ಮಸಂದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮತಯಾಚನೆ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಹೊಸಕೋಟೆ ಕ್ಷೇತ್ರವನ್ನು ಕಳೆದ 5 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಪಡಿಸಿದ್ದೇನೆ. 35 ವರ್ಷ ನನ್ನ ಕೈ ಬಿಡದೇ 5 ಬಾರಿ ಗೆಲ್ಲಿಸಿ ಆಶೀರ್ವದಿಸಿದ್ದೀರಿ. ಅಧಿಕಾರವೇ ಇಲ್ಲದೇ ಕಾಂಗ್ರೆಸ್ ಅಭ್ಯರ್ಥಿ ಎನ್. ನಾಗರಾಜ್ ಕೊಡುಗೆ ಕ್ಷೇತ್ರಕ್ಕೇನು ಎಂದು ಪ್ರಶ್ನಿಸಿದರು.
ಸರ್ವ ಧರ್ಮವರು ಸಮಾನವಾಗಿ ಬಾಳ್ವೆ ನಡೆಸುತ್ತಿದ್ದ ಕ್ಷೇತ್ರದಲ್ಲಿ ಜಾತಿಯನ್ನು ಎತ್ತಿಕಟ್ಟಿದಲ್ಲದೇ ಈ ಬಾರಿ ಗೆಲವಿಗಾಗಿ ಅಗತ್ಯ ಬಿದ್ದರೇ ಒಕ್ಕಲಿಗರ ಮತಗಳನ್ನು ಖರೀದಿಸುತ್ತೇನೆ ಎನ್ನುತ್ತಿದ್ದು, ಒಕ್ಕಲಿಗರು ಮಾರಾಟಕ್ಕಿಲ್ಲ.ಅವರೇ ಪಾಠ ಕಲಿಸ್ತಾರೆ. ಕ್ಷೇತ್ರದ ಮತದಾರರು ಕಾಂಗ್ರೆಸ ಅಭ್ಯರ್ಥಿ ಮಾತುಗಳಿಗೆ ಮರಳಾಗಬೇಡಿ.ಬಚ್ಚೇಗೌಡರಿಗೆ ಮತ ನೀಡಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಬದಲಾವಣಿ ಆಗಿಲ್ಲವಾ: ಕಾಂಗ್ರೆಸ್ಸಿಗೆ ಬನ್ನಿ, ಬದಲಾವಣಿ ತನ್ನಿ ಎಂದು ಹೇಳುವ ಕಾಂಗ್ರೆಸ್ನವರು ದೇಶದಲ್ಲಿ 65 ವರ್ಷಗಳ ಕಾಲ ಆಡಳಿತ ನಡೆಸಿ ಸಾಧಿಸಿದ್ದೇನು? ಕ್ಷೇತ್ರದಲ್ಲಿ ಕೇವಲ ಮೂರುವರೆವರ್ಷ ಮಾತ್ರ ಅಧಿಕಾರ ನಡೆಸಿದ ಕಾಂಗ್ರೆಸ್ಸಿನ ಎನ್.ನಾಗರಾಜ್ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಆಸೆ ಆಮಿಷಗಳನ್ನು ಒಡ್ಡಿ ಯುವಕರನ್ನು ಹಾಳು ಮಾಡಿದ್ದೇ ಅವರ ಸಾಧನೆಯಾಗಿದೆ. ವಲಸಿಗರಾಗಿ ಕ್ಷೇತ್ರಕ್ಕೆ ಬಂದ ಕಾಂಗ್ರೆಸ್ ಅಭ್ಯರ್ಥಿಗಿಂತ ಕ್ಷೇತ್ರದ ನಿವಾಸಿ ಬಚ್ಚೇಗೌಡರಿಗೆ ಮತನೀಡುವಂತೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಎನ್.ಗೋಪಾಲಗೌಡ ಹೇಳಿದರು. ತಿಮ್ಮಸಂದ್ರ, ಯನಗುಂಟೆ, ಸಾದಪ್ನಹಳ್ಳಿ, ಸತ್ಯವಾರ, ಸೊಣ್ಣಳೀಪುರ, ಬೆಟ್ಟಹಳ್ಳಿ, ಗಿಡ್ಡಪ್ಪನಹಳ್ಳಿ, ರಾಂಪುರ, ಅರಸನಹಳ್ಳಿ ಗ್ರಾಮಗಳಲ್ಲಿ ಬಿರುಸಿನ ಮತ ಯಾಚನೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

