ಗರಕಹಳ್ಳಿ ಏತನೀರಾವರಿ ಯೋಜನೆಗೆ ಜೆಡಿಎಸ್ ಕೊಡುಗೆ ಅಪಾರ: ಪುಟ್ಟಣ್ಣ
ಚನ್ನಪಟ್ಟಣ: ಗರಕಹಳ್ಳಿ ಏತನೀರಾವರಿ ಯೋಜನೆಗೆ ನಿಜವಾದ ಕೊಡುಗೆ ನೀಡಿದವರು ಜೆಡಿಎಸ್ನವರು. ಆದರೆ ಇದೀಗ ಯೋಗೇಶ್ವರ್ ಇದು ನಮ್ಮದೇ ಎಂದು ಬಿಂಬಿಸಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಆರೋಪಿಸಿದರು.
ಪಟ್ಟಣದ ಖಾಸಗಿ ಹೋಟೆಲಲ್ನಲ್ಲಿ ಕರೆಯಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಇಗ್ಗಲೂರು ಜಲಾಶಯ ನಿರ್ಮಾಣ ಮಾಡಿದ್ದು ದೇವೇಗೌಡರು, ನಂತದ ಗರಕಹಳ್ಳಿ ಏತನೀರಾವರಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು ವರದೇಗೌಡರು ಮತ್ತು ಕುಮಾರಸ್ವಾಮಿ ಎಂದರು.
ನಮ್ಮೆಲ್ಲರ ಪರಿಶ್ರಮದಿಂದ ಅನುಷ್ಠಾನಗೊಂಡ ಗರಕಹಳ್ಳಿ ಏತನೀರಾವರಿ ಯೋಜನೆಯನ್ನು ನಮ್ಮದೆನ್ನುವ ಯೋಗೇಶ್ವರ್ದು ಕೆರೆಗೆ ಬಾಗಿನ ಅರ್ಪಿಸಿದ್ದೇ ಸಾಧನೆಯೇ ಹೊರತು ಬೇರೇನು ಇಲ್ಲ ಎಂದರು.
ವರದೇಗೌಡರು, ಕುಮಾರಸ್ವಾಮಿ ನಾಗೇಗೌಡರ ಜತೆ ಹೋರಾಟ ನಡೆಸಿ ಈಭಾಗಕ್ಕೆ ಅಗತ್ಯವಿರುವ ಏತ ನೀರಾವರಿ ಕಾಮಗಾರಿಯನ್ನು ಮಂಜೂರು ಮಾಡಿಸಿದರು. ಈ ಮಧ್ಯೆ ಕಾವೇರಿ ನೀರಾವರಿ ನಿಗಮ ಕಾವೇರಿ ಕೊಳ್ಳದ ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳದಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತ ಗೊಂಡಿತು.
2007ರಲ್ಲಿ ಕಾವೇರಿ ಐತೀರ್ಪು ಹೊರ ಬಿದ್ದು ಕರ್ನಾಟಕದ ಪಾಲು ನಿರ್ದಿಷ್ಟ ಪ್ರಮಾಣದಲ್ಲಿ ಹಂಚಿಕೆಯಾಯಿತಾದರೂ ಈವೇಳೆಗೆ ಕುಮಾರಸ್ವಾಮಿ ಅಧಿಕಾರದಿಂದ ಕೆಳಗಿಳಿದ ಪರಿಣಾಮ ಯೋಜನೆ ಕೈಗೆತ್ತು ಕೊಳ್ಳಲಾಗಲಿಲ್ಲ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿದ್ದ ಆಡಳಿತವನ್ನು ಹಳ್ಳಿಗಳಿಗೆ ಕೊಂಡೊಯ್ದಿದ್ದು, ಜನರ ಸಮಸ್ಯೆ ಆಲಿಸಲು ಜನತಾ ದರ್ಶನ ಆರಂಭಿಸಿದ್ದು ಕುಮಾರಸ್ವಾಮಿ ಸಾಧನೆ. ಅವರು 20 ತಿಂಗಳ ಅವಧಿಯಲ್ಲಿ 20 ವರ್ಷಗಳ ಕಾಲ ಮಾಡಲಾಗದ ಸಾಧನೆ ಮಾಡಿದ್ದು ಮತದಾರರು ಇವರನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಸುದ್ದಿ ಗೋಷ್ಠಿಯಲ್ಲಿ ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಅನಿತಾಕುಮಾರಸ್ವಾಮಿ ಸಹೋದರ ಡಾ. ಚನ್ನಪ್ಪ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

