ಬೆಂಗಳೂರು ಗ್ರಾಮಾಂತರ

ನನಗೆ ಎದುರಾಳಿ ಬಾಲಕೃಷ್ಣ: ಕೆಜೆಪಿ ಅಭ್ಯರ್ಥಿ ಕೃಷ್ಣಮೂರ್ತಿ

Published On :

ಕ.ಪ್ರ.ವಾರ್ತೆ  ,  ಮಾಗಡಿ  ,  ಏ.22
ನನಗೆ ಎದುರಾಳಿ ಕಾಂಗ್ರೆಸ್  ಅಭ್ಯರ್ಥಿ ಎ.ಮಂಜು ಅಲ್ಲ, ಜೆಡಿಎಸ್  ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ. ಅವರ ವಿರುದ್ಧ ನನ್ನ ನೇರ ಸ್ಪರ್ಧೆ ಎಂದು ಕೆಜೆಪಿ ಅಭ್ಯರ್ಥಿ ಎಚ್.ಎಂ.ಕೃಷ್ಣಮೂರ್ತಿ ಸ್ಪಷ್ಟಪಡಿಸಿದರು.
   ಅವರು ಸೋಮವಾರ ಇಲ್ಲಿನ ಪ್ರಸಿದ್ಧ ತಿರುಮಲೆ ಶ್ರೀರಂಗನಾಥಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ನನಗೆ ಕೆಲ ನಾಯಕರು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ತಪ್ಪಿಸಿದರು. ಇದರಿಂದಾಗಿ ಕ್ಷೇತ್ರದ ಜನತೆಯ ಭಾವನೆಗೆ ದಕ್ಕೆಯಾಯಿತು. ಈ ನಿಟ್ಟಿನಲ್ಲಿ  ಕೆಜೆಪಿಯಿಂದ ಸ್ಪರ್ಧಿಸುವ ಮೂಲಕ ಅವರ ಭಾವನೆಗೆ ಸ್ಪಂದಿಸಿದ್ದೇನೆ. ಈಗ ನನ್ನ ಅಭಿಮಾನಿ ಮತದಾರರೇ ಕೂಗುತ್ತಿದ್ದಾರೆ, ಕೆಜೆಪಿ ಅಭ್ಯರ್ಥಿ ಎಚ್.ಎಂ. ಕೃಷ್ಣಮೂರ್ತಿಯ  ಗೆಲ್ಲಿಸುವುದಾಗಿ ಎಂದರು.
   ಗ್ರಾಮೀಣ ಅಭ್ಯುದಯಕ್ಕೆ ವಿಶೇಷ ಪ್ಯಾಕೇಜ್ ನೀಡುತ್ತೇನೆ ಎಂದು ಎಚ್.ಎಂ.ಕೃಷ್ಣಮೂರ್ತಿ ಭರವಸೆ ನೀಡಿದರು.
  ಏ.27ಕ್ಕೆ ಸಮಾವೇಶ: ಮಾಗಡಿಯಲ್ಲಿ ಏ.27 ರಂದು ಬೃಹತ್ ಸಮಾವೇಶ ನಡೆಸಲು ಚಿಂತಿಸಲಾಗಿದೆ. ಮಾಜಿ ಮುಖ್ಯಮಂತ್ರಿ , ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸಮಾವೇಶ ಉದ್ಘಾಟಿಸಲಿದ್ದಾರೆ. ಸಚಿವೆ ಶೋಭಾ ಕರಂದ್ಲಾಜೆ, ಧನಂಜಯ ಕುಮಾರ್, ಎಂ.ಡಿ.ಲಕ್ಷ್ಮೀನಾರಾಯಣ್ ಇತರರು ಭಾಗವಹಿಸಲಿದ್ದಾರೆ ಎಂದು  ಎಚ್.ಎಂ.ಕೃಷ್ಣಮೂರ್ತಿ ತಿಳಿಸಿದರು.
ಉರುಳು ಸೇವೆ: ಇಲ್ಲಿನ ಶ್ರೀರಂಗನಾಥಸ್ವಾಮಿ ದೇವರಿಗೆ ಕೆಜೆಪಿ ಅಭ್ಯರ್ಥಿ ಎಚ್.ಎಂ. ಕೃಷ್ಣಮೂರ್ತಿ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವ ವೇಳೆ ಅಭಿಮಾನಿ ಹಾರೋಹಳ್ಳಿ ನಾಗೇಶ್ ದೇವಾಲಯದ ಮುಂಭಾಗ ಕೃಷ್ಣಮೂರ್ತಿ ಗೆಲವಿಗೆ  ಉರುಳು ಸೇವೆ  ನೆರವೇರಿಸಿದರು.
  ಪುಷ್ಪ ಕೃಷ್ಣಮೂರ್ತಿ,  ಸೀನಪ್ಪ, ಗುರು, ಜಾನಿ, ಎಸ್.ಎನ್.ಸುರೇಶ್ ಬಾಬು, ನಾಗೇಶ್, ಅರುಣ್,ಜಯರಾಮು, ಗಂಗಾಧರ್, ಗಿರೀಶ್, ಮೂರ್ತಿ, ನಾಗರಾಜು, ಶಂಕರ್, ರಾಜು ಇತರೆ ನೂರಾರು ಕಾರ್ಯಕರ್ತಕರು  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.