ಬೆಂಗಳೂರು ಗ್ರಾಮಾಂತರ

ಎಂ.ವಿ. ನಾಗರಾಜು ವಿರುದ್ಧ ದೂರು

Published On :

ನೆಲಮಂಗಲ: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಎಂ.ವಿ. ನಾಗರಾಜು ತಾಲೂಕಿನ ಅರೆಬೊಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸಿ  ಮತದಾರರಿಗೆ 1 ಸಾವಿರದಿಂದ 2 ಸಾವಿರ ರು.ವರೆಗೆ ಕೊಡುತ್ತೇವೆ, ಮತ ಹಾಕಿ ಎಂದು ಮತದಾರರಿಗೆ ಆಮಿಷ  ತೋರಿಸಿ ಪ್ರೇರೇಪಿಸುತ್ತಿದ್ದುದನ್ನು ಖಂಡಿಸಿದ  ಸಂತೋಷ್, ಸಲೀಂ ಪಾಷ, ವೆಂಕಟೇಶ್, ರಘು ಎಂಬ ಯುವಕರಿಗೆ ಶಾಸಕರ ಗನ್ ಮ್ಯಾನ್ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಚುನಾವಣಾಧಿಕಾರಿ ಅಮರೇಶ್ ಅವರಿಗೆ  ಬುಧವಾರ ದೂರು ಸಲ್ಲಿಸಲಾಗಿದೆ. ತಾಲೂಕಿನ ಅರೆಬೊಮ್ಮನಹಳ್ಳಿ ಗ್ರಾಮದಲ್ಲಿ  ಬೆಳಿಗ್ಗೆ ಬಿಜೆಪಿ ವತಿಯಿಂದ ಅಭ್ಯರ್ಥಿ ಎಂ.ವಿ. ನಾಗರಾಜು,  ಎನ್‌ಡಿಎ ಅಧ್ಯಕ್ಷ ಮಲ್ಲಯ್ಯ ಮತ್ತು ಶಾಸಕರ ಅಂಗ ರಕ್ಷಕ ಪ್ರಸನ್ನ ಪ್ರಾಣ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿಮ್ಮನ್ನು ನೋಡಿಕೊಳ್ಳುವುದಾಗಿ ಧಮಕಿ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.