ಬೆಂಗಳೂರು ಗ್ರಾಮಾಂತರ

ಸೂಕ್ಷ್ಮ ವೀಕ್ಷಕರು ಜಾಗರೂಕ ಕರ್ತವ್ಯ ನಿರ್ವಹಿಸಿ: ಡಿಸಿ

Published On :

ರಾಮನಗರ: ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಕಾರ್ಯಕ್ಕೆ ಸೂಕ್ಷ್ಮ ವೀಕ್ಷಕರಾಗಿ ನೇಮಕಗೊಂಡವರಿಗೆ ತರಬೇತಿ ಕಾರ್ಯಕ್ರಮವು ನಗರದ ಶ್ರೀರಾಮ ಚಿತ್ರಮಂದಿರದಲ್ಲಿ ಭಾನುವಾರ ನಡೆಯಿತು.
ಸೂಕ್ಷ್ಮ ವೀಕ್ಷಕರು ನೇರವಾಗಿ ಸಾಮಾನ್ಯ ವೀಕ್ಷಕರ ಅಧೀನಕ್ಕೆ ಒಳಪಡಲಿದ್ದು, ಚುನಾವಣಾ ಕಾರ್ಯವನ್ನು ಲಘುವಾಗಿ ಪರಿಗಣಿಸದೆ ಅತ್ಯಂತ ಜಾಗರೂಕತೆಯಿಂದ ನಿರ್ವಹಿಸುವಂತೆ ಜಿಲ್ಲಾಧಿಕಾರಿ ನವೀನ್‌ರಾಜ್ ಸಿಂಗ್ ಕರೆ ನೀಡಿದರು.  ಸೂಕ್ಷ್ಮ ವೀಕ್ಷಕರು ನೇಮಕಗೊಂಡಿರುವ ಮತಗಟ್ಟೆಯ ಚುನಾವಣಾ ದಿನದ ವರದಿಯನ್ನು ನೇರವಾಗಿ ಆಯಾ ಕ್ಷೇತ್ರದ ವೀಕ್ಷಕರಿಗೆ ಸಲ್ಲಿಸಬೇಕು. ವರದಿಯಲ್ಲಿ ಒಂದು ಸಣ್ಣ ಲೋಪವೆಸಗಿದರು ಆ ಮತಗಟ್ಟೆಗೆ ಮರು ಚುನಾವಣೆ ಮಾಡಬೇಕಾಗುತ್ತದೆ. ಇದರಿಂದಾಗಿ ಸೂಕ್ಷ್ಮ ವೀಕ್ಷಕರ ವರದಿಯು ಮಹತ್ವ ಹೊಂದಿದ್ದು, ವೀಕ್ಷಕರು ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.