ಬೆಂಗಳೂರು ಗ್ರಾಮಾಂತರ

ಉಂಡಮನೆಗೆ ದ್ರೋಹ ಬಗೆದವರು ಪಕ್ಷ ಬಿಟ್ಟರೆ ಚಿಂತೆಯಿಲ್ಲ: ಹುಸೇನ್

Published On :

ಕ.ಪ್ರ.ವಾರ್ತೆ   ಕನಕಪುರ   ಏ.29
ಕಾಂಗ್ರೆಸ್ ಪಕ್ಷದಿಂದ ಸಕಲ ಸೌಲಭ್ಯಗಳನ್ನು ಪಡೆದು ಜಿಪಂ ಉಪಾಧ್ಯಕ್ಷರಾಗಿ ಹಾಲಿ ತಾಪಂ ಸದಸ್ಯರಾಗಿ ಚುನಾಯಿತರಾಗಿ ಉಂಡಮನೆಗೆ ದ್ರೋಹ ಬಗೆಯುವಂತೆ ಪಕ್ಷಾಂತರ ನಡೆಸಿ ಜೆಡಿಎಸ್ ಸೇರಿರುವ ಹಲಸೂರು ಸಿದ್ಧರಾಜು ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡಿಹೋಗಬೇಕೆಂಬ ಸಾಮಾನ್ಯ ಪರಿಜ್ಞಾನವಿಲ್ಲದವರಾಗಿದ್ದಾರೆ. ವಾಸವಿದ್ದಮನೆ ಬಿಟ್ಟಾಗ ಕೀಲಿಕೊಟ್ಟು ಹೋಗಬೇಕು ಎಂಬ ಸತ್ಯವನ್ನು ಅರಿತುಕೊಳ್ಳಬೇಕು ಎಂದು ರಾಮನಗರ ಜಿಪಂ ವಿರೋಧಪಕ್ಷದ ನಾಯಕ ಇಕ್ಬಾಲ್ ಹುಸೇನ್ ಟೀಕಿಸಿದ್ದಾರೆ.
 ಅವರು ಕನಕಪುರದ ಶಾಸಕರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಿದ್ದರು. ಬ್ಲಾಕ್ ಕಾಂಗ್ರೆಸ್‌ಅಧ್ಯಕ್ಷ ವಿಜಯದೇವ್  ಜೆ.ನಟರಾಜ್ ಪಾಲ್ಗೊಂಡಿದ್ದರು.
ಜೆಡಿಎಸ್‌ಗೆ ವಲಸೆಹೊಗಿ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿರುವ ಸಿದ್ದರಾಜು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ ಚುನಾವಣೆಯಲ್ಲಿ ಸ್ಫರ್ಧಿಸಿ ತಮ್ಮ ಶಕ್ತಿ ಪ್ರದರ್ಶಿಸಲಿ. ಪಕ್ಷದಲ್ಲಿರುವವರ ರಾಜಿನಾಮೆ ಕೇಳುವುದರಲ್ಲಿ ಔಚಿತ್ಯವಿಲ್ಲ, ಕಾಂಗ್ರೆಸ್ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಇವರ ವಿರುದ್ಧ ಗೆಲ್ಲಿಸುವ ಸಾಮರ್ಥ್ಯ ಹೊಂದಿದೆ ಎಂದು ಇಕ್ಬಾಲ್ ಸವಾಲು ಹಾಕಿದರು. ಕಳೆದ ಚುನಾವಣೆ ಸಂದರ್ಭದಲ್ಲಿ ಸಿದ್ಧರಾಜು ವಿರುದ್ಧ ನಡೆದ ಗಲಾಟೆಯಲ್ಲಿ ಶಾಸಕ ಶಿವಕುಮಾರ್‌ಹಾಗೂ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಹೋಗಿ ರಕ್ಷಿಸದಿದ್ದರೆ ಇವರ ಅಸ್ತಿತ್ವವೇ ಇರುತ್ತಿರಲಿಲ್ಲ. ಉಂಡ ಮನೆಗೆ ದ್ರೋಹ ಬಗೆಯುವ ಇಂತಹಾ ವ್ಯಕ್ತಿಗಳು ಕಾಂಗ್ರೆಸ್‌ಗೆ ಅಗತ್ಯವಿಲ್ಲ ಎಂದು ಇಕ್ಬಾಲ್‌ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.