ಬೆಂಗಳೂರು ಗ್ರಾಮಾಂತರ

ಯೋಗೇಶ್ವರ್‌ಗೆ ಗೌಡ್ರ ಸವಾಲು

Published On :

ಕ.ಪ್ರ.ವಾರ್ತೆ   ಚನ್ನಪಟ್ಟಣ   ಏ.29
ಇಗ್ಗಲೂರು ಜಲಾಶಯ ನಿರ್ಮಿಸಿದ್ದು ನಾನು, ಇಂದಿಗೂ ನಾನು ಬದುಕಿದ್ದೇನೆ, ಇದು ನನ್ನದು ಎನ್ನುವವರು ನನ್ನ ಮುಂದೆ ಬಂದು ಚರ್ಚಿಸಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾಜಿ ಸಚಿವ ಯೋಗೇಶ್ವರ್‌ಗೆ ಸವಾಲಾಕಿದರು.
ತಾಲೂಕಿನ ಕೆಲ ಪ್ರಮುಖ ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿಪರ ಪ್ರಚಾರ ಕಾರ್ಯ ನಡೆಸಿದ ಅವರು. ಗರಕಹಳ್ಳಿ ಏತನೀರಾವರಿ ಯೋಜನೆ ಯಾರದು ಎಂಬುದು ಆ ಭಾಗದ ಮಂದಿಗೆ ಗೊತ್ತಿದೆ ಎಂದರು.
1983ರಲ್ಲಿ ನಾನು ನೀರಾವರಿ ಸಚಿವನಾಗಿದ್ದಾಗ ರಾಜ್ಯದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದೆ, ಅದೇ ವೇಳೆ  ತಾಲೂಕಿನ ಇಗ್ಗಲೂರು ಜಲಾಶಯವನ್ನು ನಿರ್ಮಾಣ ಮಾಡಿದ್ದು. ಇದು ನನ್ನ ಯೋಜನೆ ಎಂದು ಬೇರೆಯವರು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಹೆಚ್‌ಡಿಕೆ ಗೆಲ್ಲಿಸಿದ್ದು ನೀವು: ಕುಮಾರಸ್ವಾಮಿಯನ್ನು ನೀವೇ ಬೆಳೆಸಬೇಕು ಎಂದು ಮನವಿ ಮಾಡಿದರು.
ತಮಿಳುನಾಡಿನಂತೆ ನಮಗೂ ರಾಜಕೀಯ ಹಿಡಿತ ನೀಡಿದಾಗ ಮಾತ್ರ ನಾವು ಕಾವೇರಿ ಸೇರಿದಂತೆ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಲು ಸಾಧ್ಯ. ರಾಜ್ಯದ ಜನತೆ ದಯಮಾಡಿ ನಮಗೆ ಅಧಿಕಾರ ನೀಡಿ ನನ್ನ ಕೊನೆಯ ಉಸಿರಿರುವವರೆಗೂ ನಾನು ಹೋರಾಟ ನಡೆಸುತ್ತೇನೆ ಎಂದು ಪ್ರತಿಜ್ಞೆ ಗೈದರು.
ನಾನು ಪ್ರಧಾನಿಯಾಗಿದ್ದಾಗ ರಾಜ್ಯದಲ್ಲಿ 16 ಸಂಸದರು ನನ್ನ ಪಕ್ಷದಿಂದ ಆಯ್ಕೆಗೊಂಡಿದ್ದರು. ಆಗ ನಾನು ಹೋರಾಟ ನಡೆಸುತ್ತಿದ್ದೆ. ಆದರೆ ಈಗ ನಾವಿರುವುದು ಕೇವಲ ಮೂರೇ ಮಂದಿ. ನೀವು ಈಗಲೂ ನನಗೆ ಅಂತಹ ಶಕ್ತಿಯನ್ನು ನೀಡಿ ರಾಜ್ಯದ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಲ್ಪಿಸಿ ಕೊಡುತ್ತೇನೆ ಎಂದರು.
ಜೆಡಿಎಸ್ ಸೇರ್ಪಡೆ: ಈ ಹಿಂದೆ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದ ತಿಟ್ಟಮಾರನಹಳ್ಳಿ ಗ್ರಾಮದ ಪ್ರಭಾವಿ ಮುಖಂಡ ಪುಟ್ಟಸಿದ್ದೇಗೌಡ ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಬಮೂಲ್ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಮುಖಂಡರಾದ ಸಿಂ.ಲಿಂ.ನಾಗರಾಜು, ಮಲ್ಲಿಕಾರ್ಜುನ ಗೌಡ, ಬೋರ್‌ವೆಲ್ ರಾಮಚಂದ್ರು ಎನ್.ಎಸ್.ಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಗರಕಹಳ್ಳಿ ಕೃಷ್ಣೇಗೌಡ, ಜಿ.ಪಂ ಸದಸ್ಯರಾದ ರಘುಕುಮಾರ್, ರಮೇಶ್, ಸುಧಾರಾಜು, ತಾ.ಪಂ ಅಧ್ಯಕ್ಷೆ ಶಾಂತಮ್ಮ, ಸದಸ್ಯರಾದ ಕಾಂತರಾಜು,ಗುರುಕುಮಾರ್, ಚಿನ್ನಗಿರೀಗೌಡ, ಜಯಲಕ್ಷ್ಮಿ ತಮ್ಮಯ್ಯ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.