ಬೆಂಗಳೂರು ಗ್ರಾಮಾಂತರ

ಕಾಂಗ್ರೆಸ್‌ನಿಂದ ಮಾತ್ರ ರಾಜ್ಯದ ಅಭಿವೃದ್ಧಿ: ಆಂಧ್ರ ಸಿಎಂ ವಿಶ್ವಾಸ

Published On :

ಕ.ಪ್ರ. ವಾರ್ತೆ  ಆನೇಕಲ್  ಏ.30
ಕಾಂಗ್ರೆಸ್ಸೇತರ ಸರ್ಕಾರ ಬಂದಾಗಲೆಲ್ಲಾ ಕರ್ನಾಟಕದ ಅಭಿವೃದ್ಧಿ ಕುಂಠಿತವಾಗಿದ್ದು, ದೇಶದ ಐಕ್ಯತೆ ಹಾಗೂ ಸಮಗ್ರತೆಗಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಮನವಿ ಮಾಡಿದರು.
ಅವರು ಆನೇಕಲ್ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ಶಿವಣ್ಣ ಪರ ಮತಯಾಚಿಸಿ, ಕರ್ನಾಟಕಕ್ಕೆ ಬರಬೇಕಾದ ಬಹುತೇಕ ಬಹುರಾಷ್ಟ್ರೀಯ ಕಂಪನಿಗಳು ಆಂಧ್ರ ಪ್ರದೇಶಕ್ಕ ವಲಸೆ ಬಂದವು. ಸ್ಥಿರ ಸರ್ಕಾರ ಹಾಗೂ ಕನಿಷ್ಠ ಮೂಲ ಸೌಕರ್ಯಗಳನ್ನೂ ಒದಗಿಸದ ಕಾರಣ ಬಂಡವಾಳ ಹೂಡಿಕೆ ನೆರೆ ರಾಜ್ಯಗಳ ಪಾಲಾಯಿತು. ಉದ್ಯೋಗ ಭದ್ರತೆ ಹಾಗೂ ಹಸಿವು ನೀಗಿಸಬೇಕಾದ ಬಿಜೆಪಿ ಸರ್ಕಾರ ಆಂತರಿಕ ಜಗಳದಲ್ಲಿ ತೊಡಗಿಸಿಕೊಂಡು ರಾಜ್ಯದ ಆರ್ಥಿಕ ಹಿನ್ನಡೆಗೆ ಕಾರಣವಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಲೆ: ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದ್ದು ಕನಿಷ್ಠ 130-150 ಸ್ಥಾನಗಳನ್ನು ಗಳಿಸುವ ವಿಶ್ವಾಸವಿದೆ. ಆಂಧ್ರ ಹಾಗೂ ಕರ್ನಾಟಕದ ಆಡಳಿತದಲ್ಲಿ ಬಹುತೇಕ ಸಾಮ್ಯತೆ ಇದ್ದು 1 ನಂತೆ 30 ಕೆಜಿ ಅಕ್ಕಿ, ಬಡ್ಡಿ ರಹಿತ ಕೃಷಿ ಸಾಲ, ವೃದ್ಧರು ಹಾಗೂ ವಿಧವೆಯರಿಗೆ ಮಾಸಾಶನ, ದಲಿತ ಹಾಗೂ ಅಲ್ಪ ಸಂಖ್ಯಾತರಿಗೆ ಉತ್ತಮ ಯೋಜನೆ ಚುನಾವಣಾ ಪ್ರಣಾಳಿಕೆಯಲ್ಲಿದೆ. ರಾಜ್ಯದ ಚಿಕ್ಕಮಗಳೂರು ಹಾಗೂ ಆಂಧ್ರದ ಮೇಡಕ್ ಇಂದಿರಾ ಗಾಂಧಿಯವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಪುಣ್ಯ ಭೂಮಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.