ಬೆಂಗಳೂರು ಗ್ರಾಮಾಂತರ

ಗುರಿ ಮುಟ್ಟುವ ಮನಸ್ಸಿದ್ದವರಿಗೆ ಯಾವುದೇ ಕಾರ್ಯ ಕಷ್ಟವಲ್ಲ: ಕಂಬಾಳು ನಾಗೇಶ್

Published On :

ನೆಲಮಂಗಲ: ಗುರಿ ಮುಟ್ಟುವ ಮನಸ್ಸಿದ್ದವರಿಗೆ ಯಾವುದೇ ಕಾರ್ಯ ಕಷ್ಟಸಾಧ್ಯವಾಗುವುದಿಲ್ಲ ಎಂದು ಸಾರಿಗೆ ಇಲಾಖೆ ಕಂಬಾಳು ನಾಗೇಶ್ ತಿಳಿಸಿದರು.
ಅವರು ಸೋಮವಾರ  ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಘಟಕ ಮತ್ತು ರಾಜ್ಯ ಹೊಯ್ಸಳಸೇನೆ ಸಂಯುಕ್ತಾಶ್ರಯದಲ್ಲಿ ಶಿವಗಂಗೆಯ ಹೊನ್ನಮ್ಮಗವಿ ಮಠದಲ್ಲಿ ನಡೆದ ಎರಡು ದಿನಗಳ ರಾಜ್ಯ ಮಟ್ಟದ ಸರ್ವ ಸದಸ್ಯರ ಸಭೆ ಮತ್ತು ರಾಜ್ಯ ಸಮಾವೇಶದ ಸಮಾರೋಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮೂಡನಂಬಿಕೆ, ಆರೋಗ್ಯ, ಶಿಕ್ಷಣ ಮತ್ತು ಪರಿಸರದ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕಾರ್ಯ ನಡೆಸುತ್ತಿರುವುದು ಸಮಾಜಕ್ಕೆ ಅಗತ್ಯ ಎಂದರು.
ಇಂದು ಟಿ.ವಿ ಮಾಧ್ಯಮದಲ್ಲಿ ಬೆಳಿಗ್ಗೆ ಮೂಡಿಬರುವ ಜ್ಯೋತಿಷ್ಯ ಕಾರ್ಯಕ್ರಮದಿಂದ ಜನರನ್ನು ಮೋಸದ  ಜಾಲಕ್ಕೆ ತಳ್ಳುತ್ತಿವೆ. ಜಾಗೃತಿ ಮೂಡಿಸುವ ಸುದ್ದಿ ವಾಹಿನಿಗಳು ಇಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದು ಎಂದು ಮನವಿ ಮಾಡಿದರು. ಶಾಲೆಗಳಲ್ಲಿ ಮಕ್ಕಳಿಗೆ ವಿಜ್ಞಾನದ ವಿಷಯವನ್ನು ಪ್ರಾಯೋಗಿಕವಾಗಿ  ತಿಳಿಸುವುದರಿಂದ ಮುಂದೆ ಸಾಕಷ್ಟು ಪರಿಣಾಮ ಬೀರಿ ಅನುಕೂಲವಾಗುತ್ತದೆ ಎಂದರು.
 ಸಮಿತಿಯ ಉಪಾಧ್ಯಕ್ಷ ಈ.ನಂಜಪ್ಪ, ಹೊಯ್ಸಳ ಸೇನೆಯ ರಾಜ್ಯಾಧ್ಯಕ್ಷ ಬಿ.ಎಸ್.ಕೃಷ್ಣಮೂರ್ತಿ, ತಾ.ಪಂ.ಅಧ್ಯಕ್ಷ ಪುಟ್ಟಗಂಗಯ್ಯ, ಹಾಲು ಒಕ್ಕೂಟದ ನಿರ್ದೇಶಕ ತಿಮ್ಮರಾಜು, ಸೋಂಪುರ ಅಧ್ಯಕ್ಷ ತೀರ್ಥಪ್ರಸಾದ್, ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಇ.ಬಸವರಾಜು, ಜಿಲ್ಲಾ ಸಮಿತಿಯ ಅಧ್ಯಕ್ಷ ಹೊನ್ನಶಾಮಯ್ಯ, ತಾಲ್ಲೂಕು ಸಮಿತಿ ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ದೇವರಾಜು, ರವಿಕುಮಾರ್ ಇತರರು ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.