ಬೆಂಗಳೂರು ಗ್ರಾಮಾಂತರ

ಹಾಲಿನ ಬೂತ್ ಜಾಗದಿಂದ ಪೆಟ್ಟಿ ಅಂಗಡಿ ಎತ್ತಂಗಡಿ

Published On :

ಮಾಗಡಿ: ರಾಜಕೀಯ ವಿವಾದಕ್ಕೆ ತಿರುಗಿದ ಹಾಲಿನ ಬೂತ್ ಕೇಂದ್ರದ ಜಾಗದಿಂದ ಪೆಟ್ಟಿ ಅಂಗಡಿಯನ್ನು ಸದ್ಯಕ್ಕೆ ಪುರಸಭೆ ಎತ್ತಂಗಡಿ ಮಾಡಿ ವಿವಾದಕ್ಕೆ ತೆರೆ ಎಳೆದಿದೆ ಪಟ್ಟಣದ ಕಲ್ಯಗೇಟ್ ವೃತ್ತದಲ್ಲಿ ಅಂಗವಿಕಲರೊಬ್ಬರಿಗೆ ಹಾಲಿನ ಮಾರಾಟ ಕೇಂದ್ರವನ್ನು  ಸ್ಥಾಪಿಸಲು ಅನುಮತಿ ನೀಡಬಹುದು ಎಂದು ಹಿಂದೆ ಪುರಸಭೆ ಆಡಳಿತ ಮಂಡಲಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡಿತ್ತು.
ಆದರೆ ಅಂಗವಿಕಲನೊಬ್ಬ ಪುರಸಭೆಯಿಂದ ಪರವಾನಿ ಪಡೆಯದೆ ಅಕ್ರಮವಾಗಿ ಕಲ್ಯಗೇಟ್ ವೃತ್ತದಲ್ಲಿ ಹಾಲಿನ ಮಾರಾಟ ಕೇಂದ್ರ ಸ್ಥಾಪಿಸಲು ಮುಂದಾಗಿದ್ದು, ಇದಕ್ಕೆ ಜೆಡಿಎಸ್  ಮುಖಂಡರು ಸಹಕರಿಸುತ್ತಿದ್ದಾರೆ. ಇದರಿಂದ ಕಲ್ಯಗೇಟ್ ವೃತ್ತದಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದು ಕೆಲ ಕಾಂಗ್ರೆಸ್ ಮುಖಂಡರು ಪುರಸಭೆ ಗಮನಕ್ಕೆ ತಂದಿದ್ದಾರೆ. ಕೂಡಲೆ ಪುರಸಭೆ ಮುಖ್ಯಾಧಿಕಾರಿ ಆರ್. ಮಂಜುನಾಥ್, ಪರಿಸರ ಎಂಜಿನಿಯರ್ ಗಿರೀಶ್ ಮತ್ತು ಸಿಬ್ಬಂದಿಗಳು ಹಾಗೂ ಪಿಎಸ್ಐ ಧರ್ಮೇಗೌಡ  ಸಿಬ್ಬಂದಿಯೊಂದಿಗೆ ಅಕ್ರಮವಾಗಿ ಇಟ್ಟಿದ್ದ ಹಾಲು ಮಾರಾಟ ಕೇಂದ್ರದ ಪೆಟ್ಟಿ ಅಂಗಡಿಯನ್ನು ತೆಗೆಸಲು ಮುಂದಾಯಿತು.
ಹಾಲಿನ ಬೂತ್  ಸ್ಥಾಪನೆಗೆ ಹಿಂದೆ ಪುರಸಭೆಯ ಆಡಳಿತ ಮಂಡಲಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ.
ತೆಗೆಯದಂತೆ ಕೆಲ ಜೆಡಿಎಸ್ ಮುಖಂಡರು ತಡೆದಿದ್ದಾರೆ. ಕೆಲ ಕಾಂಗ್ರೆಸ್ ಮುಖಂಡರು ಇಲ್ಲಿ ಅಕ್ರಮವಾಗಿ ಪೆಟ್ಟಿಗೆ ಅಂಗಡಿ ಸ್ಥಾಪನೆ ಮಾಡಿದರೆ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತದೆ. ಕೂಡಲೆ ತೆಗೆಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಇದು ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರ  ನಡುವೆ ಮುಸುಕಿನ ಗುದ್ದಾಟ ಶುರಾವಾಗಿದ್ದು, ರಾಜಕೀಯ ವಿವಾದಕ್ಕೆ ತಿರುಗಿತು.
  ವಿವಾದ ಸೃಷ್ಟಿ ಬೇಡ ಎಂದು ಜಾಗೃತರಾದ ಜೆಡಿಎಸ್ ಮುಖಂಡರುಗಳೇ ಮುಂದೆ ನಿಂತು ಅಂಗವಿಕಲನೊಬ್ಬ ಅಕ್ರಮವಾಗಿ ಪೆಟ್ಟಿ ಅಂಗಡಿಯನ್ನು ಇಟ್ಟುಕೊಳ್ಳಲು ಯತ್ನಿಸಿದ ಪೆಟ್ಟಿ ಅಂಗಡಿಯನ್ನು ಸದ್ಯಕ್ಕೆ ಬೇರೆಡೆ ಸ್ಥಳಾಂತರಿಸಿ ವಿವಾದಕ್ಕೆ ತೆರೆ ಎಳೆದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.