ಬೆಂಗಳೂರು ಗ್ರಾಮಾಂತರ

75 ಕೋಟಿ ವೆಚ್ಚದ ಸೌಲಭ್ಯ ಅನುಷ್ಠಾನಕ್ಕೆ ಇಂದು ಶಾಸಕ ಎನ್. ನಾಗರಾಜ್ ಚಾಲನೆ

Published On :

ಕ.ಪ್ರ.ವಾರ್ತೆ   ಸೂಲಿಬೆಲೆ   ಆ.7
ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯಲ್ಲಿನ ನಾಲ್ಕು ತಾಲೂಕಿನ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಮುಂದಿನ ಐದು ವರ್ಷಗಳ ಕಾಲ ಮೊಟ್ಟೆಯಂಥ ಪೌಷ್ಟಿಕಾಂಶಗಳನ್ನು ಉಚಿತವಾಗಿ ನೀಡುವ ಕಾರ್ಯಕ್ರಮಕ್ಕೆ ಆ.8ರಂದು  ಹೊಸಕೋಟೆ ದೇವಕಿ ಕಲ್ಯಾಣ ಮಂಟಪ್ಪದಲ್ಲಿ ಶಾಸಕ ಎನ್.ನಾಗರಾಜ್ ಚಾಲನೆ ನೀಡಲಿದ್ದಾರೆ ಎಂದು ಹೊಸಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪ್ರಸಾದ್ ತಿಳಿಸಿದ್ದಾರೆ.
ಸೂಲಿಬೆಲೆ ಹೋಬಳಿ ಗಿಡ್ಡಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬುಧವಾರ ಕ್ಷೀರ ಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ವೇದಾಂತ ಪೌಂಡೇಷನ್ ಸಂಸ್ಥೆವತಿಯಿಂದ 5 ವರ್ಷಗಳ ಕಾಲ ಅಂಗನವಾಡಿ ಕೇಂದ್ರ ಮಕ್ಕಳಿಗೆ ಹಾಗೂ ಗರ್ಭೀಣಿಯರಿಗೆ ಉಚಿತವಾಗಿ ಮೊಟ್ಟೆಯಂಥ ಪೌಷ್ಟಿಕಾಂಶದ ಪದಾರ್ಥಗಳನ್ನು ಪೂರೈಕೆ ಮಾಡುವಂತ ಯೋಜನೆಗೆ ಹೊಸಕೋಟೆಯಲ್ಲಿ ಚಾಲನೆ ಸಿಗಲಿದ್ದು, ಇದಕ್ಕಾಗಿ ರು.75 ಕೋಟಿ ಹಣವನ್ನು ಖರ್ಚು ಮಾಡಲಿದೆ. ಸರ್ಕಾರ ಕ್ಷೀರ ಭಾಗ್ಯದಂತ ಯೋಜನೆಗಳನ್ನು ಜಾರಿ ಮಾಡಿ ಗ್ರಾಮೀಣ ಭಾಗದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ದೈಹಿಕ ಹಾಗೂ ಮಕ್ಕಳ ಬುದ್ಧಿಮಟ್ಟದ ಸಾಮರ್ಥ್ಯಬೆಳೆವಣಿಗೆಗೆ ಅನುಕೂಲವಾಗುವಂತೆ ಮಾಡಿದೆ. ಹಾಲು ಉತ್ತಮ ಪೌಷ್ಟಿಕಾಂಶದ ಸತ್ವವನ್ನು ಹೊಂದಿದ್ದು, ಹಾಲು ನೀಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳತ್ತ ಹೆಚ್ಚು ಗಮನಹರಿಸಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.