ಬೆಂಗಳೂರು ಗ್ರಾಮಾಂತರ

ಆಟೋದಲ್ಲಿ ಅನುಮಾನಾಸ್ಪದ ಸಾವು

Published On :

ಕನಕಪುರ: ಸೋದರಿಯ ಮನೆಗೆ ತೆರಳುತ್ತೇನೆಂದು ಹೋದವ ತನ್ನ ಆಟೋದಲ್ಲಿಯೇ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಕನಕಪುರದ ಮುನಿಸಿಪಲ್ ಹೈಸ್ಕೂಲ್ ಹಿಂಭಾಗ ನಡೆದಿದೆ.
ಮೃತನು ಮೂಲತಃ ಮೈಸೂರಿನ ನಾಗರಾಜು (36)ಎಂದು ತಿಳಿದು ಬಂದಿದ್ದು ಈತನು  ಕನಕಪುರ ತಾಲೂಕು ಗಾಣಾಳು ಗ್ರಾಮದ ಶೋಭಾ ಎಂಬುವವರೊಂದಿಗೆ ಇಲ್ಲಿನ ಮುನಿನಗರದಲ್ಲಿ ವಾಸವಾಗಿದ್ದನು.
ಕನಕಪುರದ ಎವಿಆರ್‌ರಸ್ತೆಯಲ್ಲಿನ ತನ್ನ ಸಹೋದರಿ ಮನೆಗೆ ತೆರಳುತ್ತೇನೆಂದು ತನ್ನ ಆಟೋದಲ್ಲಿ ಹೊರಟ ನಾಗರಾಜು ಪ್ರಾಯಶಃ ಮದ್ಯದಲ್ಲಿ ವಿಷವನ್ನು ಬೆರೆಸಿ ಕುಡಿದು ಸಾವನ್ನಪ್ಪಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಾರೆ. ಈ ಸಾವಿನ ಬಗ್ಗೆ ಕನಕಪುರ ಟೌನ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರಕ್ಷಕ ಉಪನಿರೀಕ್ಷಕ ಅಶೋಕ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಪರಾಧ ಉಪನಿರೀಕ್ಷಕ ಗಣೇಶ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.