ಬೆಂಗಳೂರು ಗ್ರಾಮಾಂತರ

ಚುನಾವಣಾ ವೆಚ್ಚ ಪರಿಶೀಲನಾ ತಂಡ

Published On :

ರಾಮನಗರ: ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡುವ ವೆಚ್ಚದ ಮೇಲೆ ನಿಗಾ ಇರಿಸಲು ಜಿಲ್ಲಾಡಳಿತವು ಚುನಾವಣಾ ವೆಚ್ಚ ಪರಿಶೀಲನಾ ತಂಡವನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನೇಮಕ ಮಾಡಿ ಆದೇಶಿಸಿದೆ.
ಜಿಲ್ಲಾ ಮಟ್ಟದ ತಂಡ: ಸ್ಥಳೀಯ ಲೆಕ್ಕ ಪರಿಶೋಧನಾ ಕಚೇರಿಯ ಸಹಾಯಕ ನಿಯಂತ್ರಣಾಧಿಕಾರಿ ವಿ.ವೇಣುಗೋಪಾಲಲ್ತಂಡದ ಮುಖ್ಯಸ್ಥರಾಗಿರುತ್ತಾರೆ. ಮೊ.9742682430. ತಾ.ಪಂ.ನ ಲೆಕ್ಕ ಪರಿಶೋಧನಾಧಿಕಾರಿ ಗಿರಿಗೌಡ (ಮೊ.9964522820) ಹಾಗೂ ಕಂಪ್ಯೂಟರ್ ಆಪರೇಟರ್ ಪ್ರಸನ್ನ ತಂಡದ ಸದಸ್ಯರಾಗಿದ್ದಾರೆ.
ತಾಲೂಕು ಮಟ್ಟದ ತಂಡಗಳು
ಮಾಗಡಿ ತಾಲೂಕು: ಮಾಗಡಿ ತಾ.ಪಂ. ಲೆಕ್ಕಪರಿಶೋಧನಾಧಿಕಾರಿ ಬಸವರಾಜಯ್ಯ ಹಾಗೂ ಎಫ್‌ಡಿಎ ಎನ್.ಎಸ್.ಶಿವಣ್ಣ ನೇಮಕಗೊಂಡಿದ್ದಾರೆ. ಮೊ.9448104361
ರಾಮನಗರ ತಾಲೂಕು: ರಾಮನಗರ ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಲೆಕ್ಕಪತ್ರ ಅಧಿಕಾರಿ ಪುಟ್ಟಬೈರಯ್ಯ ಹಾಗೂ ಸ್ಥಳೀಯ ಲೆಕ್ಕಪರಿಶೋಧನಾ ಕಚೇರಿಯ ಸಹಾಯಕ ನಿಂತ್ರಣಾಧಿಕಾರಿ ಸಂತೋಷ್ ಬಿರಾದಾರ್ ನೇಮಕಗೊಂಡಿದ್ದಾರೆ. ಮೊ.9739531065.
ಕನಕಪುರ ತಾಲೂಕು: ಕನಕಪುರ ತಾ.ಪಂ. ಲೆಕ್ಕ ಪರಿಶೋಧನಾಧಿಕಾರಿ ಸತ್ಯನಾರಾಯಣ ಹಾಗೂ ರಾಮನಗರದ ಸ್ಥಳೀಯ ಲೆಕ್ಕಪರಿಶೋಧನಾ ವಿಭಾಗದ ಸಹಾಯಕ ನಿಯಂತ್ರಣಾಧಿಕಾರಿ ವೆಂಕಟೇಶ್ ನೇಮಕಗೊಂಡಿದ್ದಾರೆ. ಮೊ.9739841488.
ಚನ್ನಪಟ್ಟಣ ತಾಲೂಕು: ಚನ್ನಪಟ್ಟಣ ತಾ.ಪಂ. ಲೆಕ್ಕಪರಿಶೋಧನಾಧಿಕಾರಿ ದೊಡ್ಡಪುಟ್ಟ ಹಾಗೂ ರಾಮನಗರ ಲೆಕ್ಕಪರಿಶೋಧನಾಧಿಕಾರಿ ಕೆ.ಆರ್.ಶ್ರೀಕಂಠಯ್ಯ ನೇಮಕಗೊಂಡಿದ್ದಾರೆ. ಮೊ.9980027335.
ಕುಣಿಗಲ್ ತಾಲೂಕು: ಕುಣಿಗಲ್ ತಾ.ಪಂ. ಸಹಾಯಕ ಲೆಕ್ಕಪತ್ರ ಅಧಿಕಾರಿ ಶ್ರೀನಿವಾಸ್, ತುಮಕೂರು ಪಿಡಬ್ಲ್ಯೂಡಿ ಅಧಿಕಾರಿ ರಾಜಕುಮಾರ್ ಹಾಗೂ ಚಂದ್ರಶೇಖರ್ ನೇಮಕಗೊಂಡಿದ್ದಾರೆ. 9480877121.
ಉಪ ಚುನಾವಣೆ: ರಜೆ ಘೋಷಣೆ
ರಾಮನಗರ: ಆ.21 ರಂದು ನಡೆಯುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ. ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರ ಎಸ್ಟಾಬ್ಲಿಷ್‌ಮೆಂಟ್‌ಗಳಲ್ಲಿ ಕಾಯಂ ಅಥವಾ ದಿನಗೂಲಿ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ನೆಗೋಷಿಯೇಬಲ್ ಇಸ್ಟ್ರುಮೆಂಟ್ ಕಾಯ್ದೆ 1881 ಕಲಂ 25ರಡಿ ಮತ್ತು ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 135 ಬಿ ಅಡಿಯಲ್ಲಿ ವೇತನ ಸಹಿತ ರಜೆ ನೀಡಲು ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪದ್ಮರಾಜು ಆದೇಶಿಸಿದ್ದಾರೆ.
ಚುನಾವಣಾ ವೆಚ್ಚ ವೀಕ್ಷಕರ ಬದಲು
ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ, ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು ನೇಮಿಸಿದ್ದ ಚುನಾವಣಾ ವೆಚ್ಚ ವೀಕ್ಷಕರನ್ನು ಕೇಂದ್ರ ಚುನಾವಣಾ ಆಯೋಗವು ಬದಲಿಸಿದ್ದು, ಬೈರೇನ್ ಪಾರ್ಮರ್ ಚುನಾವಣಾ ವೆಚ್ಚ ವೀಕ್ಷಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಯಾವುದೇ ಅಹವಾಲು ಅಥವಾ ದೂರುಗಳಿದ್ದಲ್ಲಿ ಇವರನ್ನು ಸಂಪರ್ಕಿಸಬಹುದಾಗಿದೆ. ಮೊ. 3449150922.
ಮುತ್ತುರಾಜು
ಮಾಗಡಿ: ಪಟ್ಟಣದ ನಿವಾಸಿ  ಮುತ್ತುರಾಜು (62) ಕಿಡ್ನಿ ವೈಫಲ್ಯದಿಂದ ನಿಧನರಾದರು. ಅವರು ಮಾಗಡಿ ತಾಲೂಕು ಶ್ರೀರಂಗನಾಥಸ್ವಾಮಿ ಕಟ್ಟಡ  ನಿರ್ಮಾಣ ಮತ್ತು ಇತರೆ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಗಳು ಇದ್ದಾರೆ. ಮಾಜಿ ಸಚಿವ ಎಚ್.ಎಂ. ರೇವಣ್ಣ, ಕೆಪಿಸಿಸಿ ಸದಸ್ಯ ಎ.ಮಂಜು, ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಸಂಘದ  ಬಸವರಾಜು, ಪುಟ್ಟರಾಜು, ನರಸಿಂಹಮೂರ್ತಿ, ಶಂಕರಾಚಾರ್, ಹನುಮಂತಪ್ಪ ಇತರೆ ಪದಾಧಿಕಾರಿಗಳು ಹಾಗು ಕಾರ್ಮಿಕರುಗಳು ಮೃತರ ಅಂತಿಮ ದರ್ಶನ ಪಡೆದು ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.