ಮಾಗಡಿಗೆ ಹೇಮಾವತಿ ಹರಿಸುವುದು ಖಂಡಿತ: ಡಿ.ಕೆ.ಸುರೇಶ್
ಕ.ಪ್ರ.ವಾರ್ತೆ ಟಿ ಮಾಗಡಿ ಟಿ ಆ.10
ದಿನದ 24 ಗಂಟೆಗಳಲ್ಲಿ, 16 ಗಂಟೆ ಜನಸೇವೆಗೆ ತೊಡಗಿಸಿಕೊಳ್ಳಲು ಸಿದ್ಧನಿದ್ದೇನೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ತಿಳಿಸಿದರು.
ಅವರು ಮಾಗಡಿ ತಾಲೂಕಿನ ಕುದೂರಿನಲ್ಲಿ ಸಾರ್ವಜನಿಕರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಲೋಕ ಸಭೆಗೆ ನನ್ನನು ಬಹುಮತದಿಂದ ಗೆಲ್ಲಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ, ಡಿ.ಕೆ.ಶಿವಕುಮಾರ್, ಸಿ.ಎಂ. ಲಿಂಗಪ್ಪ, ಕೆಪಿಸಿಸಿ ಸದಸ್ಯ ಎ.ಮಂಜು ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ನಿಂದ ಖಂಡಿತವಾಗಿ ಹೇಮಾವತಿ ನದಿ ನೀರನ್ನು ಮಾಗಡಿ ಕ್ಷೇತ್ರಕ್ಕೆ ಹರಿಸುತ್ತೇನೆ. ಈ ನಿಟ್ಟಿನಲ್ಲಿ ರೈತರ ಕಣ್ಣೀರು ಒರೆಸುವ ಮೂಲಕ ಕ್ಷೇತ್ರದ ಮತದಾರರ ಋಣ ತೀರಿಸುವ ಕೆಲಸ ಮಾಡುತ್ತೇನೆ. ನನ್ನ ವಿರುದ್ಧ ಯಾರು ಏನೇ ಹೇಳಿದರೂ ಈಗ ನಾನು ಉತ್ತರಿಸುವುದಿಲ್ಲ, ಗೆದ್ದ ಮೇಲೆ ಎಲ್ಲಾ ಪ್ರಶ್ನೆಗಳಿಗೂ ಸಾರ್ವಜನಿಕವಾಗಿಯೇ ಉತ್ತರ ನೀಡುತ್ತೇನೆ. ನಿಮ್ಮ ಮನೆಯ ಮಗನಿಗೆ ಮತ ನೀಡುವಂತೆ ಸುರೇಶ್ ಮನವಿ ಮಾಡಿದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಬಿಜೆಪಿ ನಾಯಕರು ಧರ್ಮಾಧಾರಿತ ಆಡಳಿತ ಮಾಡಲು ಹೋಗಿ ಕಣ್ಮರೆಯಾಗಿ ಹೋದರು. ಜೆಡಿಎಸ್ ನಾಯಕರದ್ದು ಜಾತಿ ಆಧಾರಿತ ಆಡಳಿತ, ಕಾಂಗ್ರೆಸ್ನದ್ದು, ಜನಪರ ಆಡಳಿತ. ಈ ಮೂರು ಆಡಳಿತವನ್ನು ಜನತೆ ತುಲನೆ ಮಾಡಬೇಕು. ಜನಪರ ಆಡಳಿತ ಬೇಕೋ,ಅಥವಾ ಜಾತಿ ಆಧಾರಿತವೋ,ಧರ್ಮಾದಾರಿತವೋ ನೀವೆ ತೀರ್ಮಾನಿಸಬೇಕು. ಜನಪರ ಆಡಳಿತದಿಂದ ಮಾತ್ರ ಸಾಮಾಜಿಕ ನ್ಯಾಯ ನೀಡಲು ಸಾಧ್ಯ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಮಾವತಿ ನೀರಾವರಿ ಯೋಜನೆಗೆ ಈಗಾಗಲೇ 5 ಕೋಟಿ ರು ಬಿಡುಗಡೆ ಮಾಡಿದ್ದಾರೆ. ಮತ್ತೆ 10 ಕೋಟಿ ರು ಮಂಜೂರಾತಿಗೆ ಮನವಿ ಮಾಡಲಾಗಿದೆ. ಈಗಾಗಲೇ ಮುಖ್ಯಮಂತ್ರಿಗಳು ಹಣ ಬಿಡುಗಡೆಗೆ ಭರವಸೆ ನೀಡಿದ್ದಾರೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸಂಕಲ್ಪ ಮಾಡಿರುವ ಡಿ.ಕೆ. ಸುರೇಶ್ ಅವರಿಗೆ ನಿಮ್ಮೆಲ್ಲರ ಬಹುಮತ ನೀಡಬೇಕು. ನಾನು ವಿಧಾನಸಭೆಯಲ್ಲಿ ಸೋತಿದ್ದರು ಧೃತಿಗೆಟ್ಟಿಲ್ಲ, ನಿಮ್ಮ ಸೇವೆಗೆ ಸದಾ ಸಿದ್ಧನಿದ್ದೇನೆ ಎಂದು ಕೆಪಿಸಿಸಿ ಸದಸ್ಯ ಎ.ಮಂಜು ತಿಳಿಸಿದರು.
ಕುದೂರಿನ ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಅಪೂರ್ಣ ಸಮುದಾಯ ಭವನ ಪೂರ್ಣಗೊಳಿಸಲಿಲ್ಲ, ಸಬ್ ರಿಜಿಸ್ಟ್ರಾರ್ ಕಚೇರಿ ಮಂಜೂರಾತಿ ತರಲಿಲ್ಲ, ಬಸ್ನಿಲ್ದಾಣಕ್ಕೆ ಅಗತ್ಯ ಕ್ರಮ ವಹಿಸಲಿಲ್ಲ. ಇಂಥ ಶಾಸಕರ ಪಕ್ಷದ ಅಭ್ಯರ್ಥಿ ಗೆ ಮತಹಾಕಬೇಡಿ ಎಂದು ತಾ.ಪಂ. ಮಾಜಿ ಅಧ್ಯಕ್ಷ ಕೆ.ಆರ್. ಯತಿರಾಜು, ಬಿಸ್ಕೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್. ಸುಹೇಲ್ ಮನವಿ ಮಾಡಿದರು.
ಮಾಜಿ ಸಚಿವ ಅಂಜನಮೂರ್ತಿ, ಎಚ್.ಎಂ. ಕೃಷ್ಣಮೂರ್ತಿ, ಚಿಗಳೂರು ಗಂಗಾಧರ್, ಜಿಲ್ಲಾ ಪಂಚಾಯ್ತಿ ಸದಸ್ಯ ರಂಗಸ್ವಾಮಿ, ಬಿ.ವಿ.ಜಯರಾಮು, ತಾ.ಪಂ. ಸದಸ್ಯ ಶಂಕರಪ್ಪ, ಕಾಂತರಾಜು, ಬಿ.ಎಸ್. ಕುಮಾರ್, ಮೋಹನ್, ಜಯರಾಮು, ಪುರುಶೋತ್ತಮ್, ಎಂ.ಎನ್. ಮಂಜು ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

