ಬೆಂಗಳೂರು ಗ್ರಾಮಾಂತರ

ವದಂತಿಗಳಿಗೆ ಬೆಲೆ ಕೊಡಬೇಡಿ: ಶಾಸಕ ಪಿಳ್ಳ ಮುನಿಶಾಮಪ್ಪ

Published On :

ದೇವನಹಳ್ಳಿ: ಕಳೆದ ಮೂರು ದಿನಗಳಿಂದ ತಾಲೂಕಿನ ರಾಜಕೀಯ ವಲಯದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದು ಕೇಳಿ ಬರುತ್ತಿದ್ದು, ಎಲ್ಲವೂ ಸುಳ್ಳು ಮತ್ತು ಗಾಳಿಮಾತಿಗೆ ಮತದಾರರು ಬೆಲೆ ಕೊಡಬಾರದು ಎಂದು ಶಾಸಕರಾದ ಪಿಳ್ಳಮುನಿಶಾಮಪ್ಪರವರು ಇಲ್ಲಿನ ಸಮಾರಂಭವೊಂದರಲ್ಲಿ ತಿಳಿಸಿದರು.
ತಾಲೂಕಿನ ಮಾಜಿ ಸಂಸದರಾದ ಸಿ.ನಾರಾಯಣಸ್ವಾಮಿರವರು ಕಾಂಗ್ರೆಸ್‌ಗೆ ಹೋಗುತ್ತಾರೆ, ಶಾಸಕರಾದ ಪಿಳ್ಳಮುನಿಶಾಮಪ್ಪರವರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುತ್ತಾರೆ. ಈ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಜಿ.ಪರಮೇಶ್ವರ್‌ರವರು ಚುನಾವಣೆಗೆ ನಿಲ್ಲುತ್ತಾರೆ. ಪರಮೇಶ್ವರ್‌ರವರು ವಿಧಾನಸಭೆ ಪ್ರವೇಶಿಸಿದರೆ ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗುತ್ತದೆ, ಮುಂದೆ ಪಿಳ್ಳಮುನಿಶಾಮಪ್ಪರವರಿಗೆ ಎಂಎಲ್ಸಿ ಅಥವ ಉನ್ನತ ಸ್ಥಾನಮಾನ ಕಲ್ಪಿಸುತ್ತಾರೆ, ಪಕ್ಷಾಂತರಗೊಂಡ ನಾರಾಯಣಸ್ವಾಮಿರವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ, ಈ ಎಲ್ಲ ರೀತಿಯ ಗಾಳಿಮಾತುಗಳ ತಾಲೂಕಿನ ರಾಜಕೀಯ ವಲಯದಲ್ಲಿ ಕೇಳಿಬರುತ್ತಿತ್ತು.
ಈ ಎಲ್ಲ ಗಾಳಿಮಾತುಗಳಿಗೆ ಇತಿಶ್ರೀ ಹಾಡಿದ ಶಾಸಕರಾದ ಪಿಳ್ಳಮುನಿಶಾಮಪ್ಪರವರು ನಾನು ಐದು ವರ್ಷಗಳ ಕಾಲ ಇಲ್ಲಿನ ಜನರ ಸೇವೆಯನ್ನು ನಿಮ್ಮ ಸೇವಕನಂತೆ ಮಾಡುತ್ತೇನೆ ಯಾವುದೇ ಕಾರಣಕ್ಕೂ ತನ್ನ ಶಾಸಕ ಸ್ಥಾನವನ್ನು ಮಾರಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.