ಗ್ರಾಹಕ, ಬ್ಯಾಂಕ್ ಕ್ಯಾಷಿಯರ್ ಇಬ್ಬರನ್ನೊಮ್ಮೆಗೇ ಯಾಮಾರಿಸಿ 2 ಲಕ್ಷದೊಂದಿಗೆ ಕಳ್ಳ ಪರಾರಿ
ನೆಲಮಂಗಲ: ಪಟ್ಟಣದ ಕೆನರಾ ಬ್ಯಾಂಕ್ನಲ್ಲಿ ಕಳ್ಳನೊಬ್ಬ ಗ್ರಾಹಕ ಹಾಗೂ ಬ್ಯಾಂಕ್ ಕ್ಯಾಷಿಯರ್ರನ್ನು ಯಾಮಾರಿಸಿ ಎರಡು ಲಕ್ಷ ರು. ಪಡೆದು ಪರಾರಿಯಾಗಿರುವ ಘಟನೆ ಶನಿವಾರ ನಡೆದಿದೆ.
ಬ್ಯಾಂಕ್ನ ಗ್ರಾಹಕ ಸ್ಥಳೀಯ ಅರಿಶಿನಕುಂಟೆ ವಾಸಿ ನಿವೃತ್ತ ಪಶು ವೈದ್ಯ ವೀರಣ್ಣ ಎಂಬುವರು ತಮ್ಮ ಉಳಿತಾಯ ಖಾತೆ ಎರಡು ಲಕ್ಷ ರು. ತಂದಿದ್ದರು. ಅವರಿಗೆ ಚಲನ್ ಬರೆಯಲೊಬ್ಬ ನೆರವಾದ. ಅವರು ಬ್ಯಾಂಕ್ ಕ್ಯಾಷಿಯರ್ ಬಳಿ ಚಲನ್ ಸಹಿತ ಎರಡು ಲಕ್ಷ ರು. ನೀಡಿದರು. ಚಲನ್ನಲ್ಲಿ ತಪ್ಪಿದೆ ಸರಿಪಡಿಸಿ ಎಂದು ಕ್ಯಾಷಿಯರ್ ಗ್ರಾಹಕ ವೀರಣ್ಣರಿಗೆ ತಿಳಿಸಿ ಚಲನ್ ಮಾತ್ರ ನೀಡಿದ್ದರು. ಆಗ ಗ್ರಾಹಕರ ಜತೆಯಲ್ಲೇ ಇದ್ದ ಆ ವ್ಯಕ್ತಿ ಚಲನ್ನಲ್ಲಿ ಡಿನಾಮಿನೇಷನ್ ಬರೆಯಲು ಹೇಳಿ ನಮ್ಮ ತಂದೆಯವರು ನೀಡಿರುವ ಎರಡು ಲಕ್ಷ ರು. ನೀಡಿ ಎಂದು ಬ್ಯಾಂಕ್ ಕ್ಯಾಷಿಯರ್ ಬಳಿ ಕೇಳಿದ್ದಾನೆ. ಆಗ ಬ್ಯಾಂಕ್ ಕ್ಯಾಷಿಯರ್, ಗ್ರಾಹಕರ ಕಡೆಯವರು ಎಂದು ತಿಳಿದು ಕಳ್ಳನಿಗೆ ಎರಡು ಲಕ್ಷ ರು. ನೀಡಿದ್ದಾರೆ. ಹಣ ಸಿಕ್ಕ ತಕ್ಷಣ ಆತ ಬ್ಯಾಂಕ್ನಿಂದ ಪರಾರಿಯಾಗಿದ್ದಾನೆ. ಗ್ರಾಹಕ ವೀರಣ್ಣ ಮಾತ್ರ ಅವರು ನಮ್ಮ ವ್ಯಕ್ತಿಯಲ್ಲ ಎಂದು ಬ್ಯಾಂಕ್ನವರನ್ನು ಆರೋಪಿಸಿ ಪಟ್ಣಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬ್ಯಾಂಕ್ನಲ್ಲಿ ಸೆರೆಯಾಗಿರುವ ಸಿಸಿಟಿವಿ ದೃಶ್ಯವನ್ನು ಪೊಲೀಸರು ವೀಕ್ಷಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

