ಹೂತಿಟ್ಟ ಶವ ಕಿತ್ತು ಎಸೆದ ಕಿಡಿಗೇಡಿಗಳು
ಮಾಗಡಿ: ಮಳೆ ಬೀಳಲಿಲ್ಲ ಎಂಬ ಕಾರಣಕ್ಕೆ ಹೂತಿಟ್ಟ ಶವವನ್ನು ಸಮಾಧಿಯಿಂದ ಹೊರತೆಗೆದು ರಸ್ತೆ ಬದಿ ಎಸೆದಿದ್ದ ಪೈಶಾಚಿಕ ಘಟನೆ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಡೆದಿದೆ.
ಮಾಗಡಿ ತಾಲೂಕಿನ ಬಾಚೇನಹಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಕಲ್ಲೂರು ಗ್ರಾಮದಲ್ಲಿ ಕಳೆದ 2 ವರ್ಷಗಳ ಹಿಂದೆ ಹೂತಿಟ್ಟ ಶವವನ್ನು ಯಾರೋ ಕಿಡಿಗೇಡಿಗಳು ಸಮಾಧಿಯಿಂದ ಹೊರ ತೆಗೆದು ರಸ್ತೆ ಬದಿ ಎಸೆದಿದ್ದರು.
ಬೆಳಿಗ್ಗೆ ರಸ್ತೆ ಬದಿ ಬಿದ್ದ ಶವ ನೋಡಿ ಜನತೆ ಭಯಪಟ್ಟರು. ಕಲ್ಲೂರು ಇತರೆ ಸುತ್ತಲ ಗ್ರಾಮದಲ್ಲಿ ಸಮರ್ಪಕ ಮಳೆಯಾಗುತ್ತಿಲ್ಲ, ತೊನ್ನು ಇರುವ ವ್ಯಕ್ತಿಯು ಸತ್ತರೆ ಶವವನ್ನು ಹೂತು ಸಮಾಧಿ ಮಾಡಬಾರದು.
ಹಾಗೊಂದು ವೇಳೆ ಮಾಡಿದರೂ ಕಿತ್ತು ಹೊರಹಾಕಬೇಕು ಎಂಬ ಗ್ರಾಮೀಣ ಜನರ ನಂಬಿಕೆಯಾಗಿದೆ. ಹೂತ್ತಿಟ್ಟ ಶವದ ಸಮಾಧಿಯ ಮೇಲೆ ಕಡ್ಡಿ ಸಹ ನೆಟ್ಟಿದ್ದು ಕಂಡು ಬಂದಿದೆ.
ಮೂಢನಂಬಿಕೆಗೆ ಜೋತು ಬಿದ್ದಿರುವ ಜನತೆ ಈ ಕೃತ್ಯ ಎಸಗಿರಬಹುದು ಎಂಬ ಅನುಮಾನ ಜನತೆಯನ್ನು ಕಾಡಿದೆ. ಮೃತ ಶವ ಕಲ್ಲೂರು ಗ್ರಾಮದ ನರಸಿಂಹಮೂರ್ತಿ ಅಳರದು ಎನ್ನಲಾಗಿದೆ. ಹೊರಗಡೆ ಎಸೆದಿದ್ದ ಶವವನ್ನು ಆತನ ಕುಟುಂಬದ ಸದಸ್ಯರೇ ನೋಡಿ ನಂತರ 2ನೇ ಬಾರಿಗೆ ಶವಸಂಸ್ಕಾರ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

