ಜೆಡಿಎಸ್ ಷಡ್ಯಂತ್ರಕ್ಕೆ ಮತದಾರರು ತಕ್ಕ ಪಾಠ ಕಲಿಸಲಿ
ಕ.ಪ್ರ.ವಾರ್ತೆ ಮಾಗಡಿ ಆ.14
ಜೆಡಿಎಸ್ ನಾಯಕರ ಷಡ್ಯಂತ್ರಕ್ಕೆ ಮತದಾರರು ತಕ್ಕ ಪಾಠ ಕಲಿಸಬೇಕು. ಹಸ್ತದ ಗುರುತಿಗೆ ಮತ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಅವರು ಮಾಗಡಿ ಪಟ್ಟಣದ ಕೆಂಪೇಗೌಡ ಬಯಲು ರಂಗಮಂದಿರದಲ್ಲಿ ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಬಡವರ, ದೀನದಲಿತರ ಅಲ್ಪಸಂಖ್ಯಾತರ ಪರವಾದ ಜನಪರ ಕಾರ್ಯಕ್ರಮವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ನೀಡುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರನ್ನು ಅಧಿಕ ಮತದಿಂದ ಗೆಲ್ಲಿಸಿಬೇಕು ಎಂದರಲ್ಲದೆ ಹೇಮಾವತಿ ನದಿ ನೀರನ್ನು ಮಾಗಡಿಗೆ ಕೊಡುತ್ತೇನೆ. ಇದು ಕೇವಲ ಚುನಾವಣೆ ಭರವಸೆಯಲ್ಲ, ಈಗಾಗಲೇ ಬಜೆಟ್ನಲ್ಲಿ ಘೋಷಿಸಿದ್ದೇನೆ. ಉಪ ಸಮಿತಿ ರಚನೆಯಾದ ಕೂಡಲೆ ಕಾಮಗಾರಗೆ ಚಾಲನೆ ನೀಡುವುದಾಗಿ ಸಿದ್ದರಾಮಯ್ಯ ತಿಳಿಸಿದರು.
ಜಾತ್ಯೀತೀತ ಎಂದು ಹೇಳಿಕೊಳ್ಳುವ ಜೆಡಿಎಸ್ ನಾಯಕರು ಮೊದಲು ಜಾತ್ಯತೀತ ಎಂಬ ಪದವನ್ನು ತೆಗೆದು ಹಾಕಿ ಬರೀ ಜೆಡಿಎಸ್ ಎಂದು ನಾಮಕರಣ ಮಾಡಿಕೊಂಡರೆ ನಿಜಕ್ಕೂ ಜನತೆ ಸತ್ಯ ತಿಳಿಸಿದಂತಾಗುತ್ತದೆ. ಜತೆಗೆ ಜೆಡಿಎಸ್ ನಾಯಕರು ಅಲ್ಪಸಂಖ್ಯಾತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಇವರಿಬ್ಬರು ಅಧಿಕಾರ ದಾಹಿಗಳು. ಇವರು ಅಧಿಕಾರಕ್ಕಾಗಿ ಭೈರೇಗೌಡ, ನಾಗೇಗೌಡ, ಬಚ್ಚೇಗೌಡ, ಚಂದ್ರೇಗೌಡ, ಜವರೇಗೌಡ, ಪುಟ್ಟೇಗೌಡ, ಕೃಷ್ಣಪ್ಪ ಹಾಗೂ ನನ್ನನ್ನು ಸೇರಿ ಮುಗಿಸಿ ಪಕ್ಷದ ವಾರುಸುದಾರರಾಗಿದ್ದಾರೆ ಎಂದು ಟೀಕಿಸಿದರು. ಕೆ.ಎಂ.ಆರ್.ಪಿ. ಯೋಜನೆಯಡಿ ಸರ್ಕಾರ 72 ಕೋಟಿ ರು ಮೀಸಲಿಟ್ಟದ್ದು, ಕ್ಷೇತ್ರಕ್ಕೆ 24 ಗಂಟೆಗಳು ಶುದ್ಧ ಕುಡಿಯುವ ನೀರು ಕಲ್ಪಿಸುವಂತೆ ಸಿಎಂ. ಸಿದ್ದರಾಮಯ್ಯ ಅವರಲ್ಲಿ ಕೆಪಿಸಿಸಿ ಸದಸ್ಯ ಎ.ಮಂಜು ಮನವಿ ಮಾಡಿದರು.
ಮಾಜಿ ಸಚಿವ ಅಂಜನಮೂರ್ತಿ, ಸಿ.ಎಂ. ಇಬ್ರಾಹಿಂ, ವೆಂಕಟರಮಣಪ್ಪ,ಎಚ್.ಎಂ.ಕೃಷ್ಣಮೂರ್ತಿ, ಕಲ್ಪನಾಶಿವಣ್ಣ, ಕಮಲಮ್ಮ, ಮಾಜಿ ಎಂಎಲ್ಸಿ ಎಸ್.ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್,ಬಿಬಿಎಂಪಿ ಮಾಜಿ ಉಪಮೇಯರ್ ಬಿ.ಎಸ್. ಪುಟ್ಟರಾಜು, ಪುರಸಭಾ ಸದಸ್ಯ ಎಂ.ಎನ್.ಮಂಜುನಾಥ್, ಪುರುಷೋತ್ತಮ್, ಮಂಜು, ನಯಾಜ್, ಜಯರಾಮಯ್ಯ, ಮಾಜಿ ಪುರಸಭಾಧ್ಯಕ್ಷರಾದ ರಂಗಹನುಮಯ್ಯ,ಪಿ.ವಿ. ಸೀತಾರಾಂ, ಟಿ.ಭೋಗೇಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

