ಬೆಂಗಳೂರು ಗ್ರಾಮಾಂತರ

ಅಧಿಕಾರಕ್ಕಾಗಿ ಸಿದ್ಧಾಂತ ಗಾಳಿಗೆ ತೂರಿದ ಜೆಡಿಎಸ್: ರೆಹಮಾನ್ ಖಾನ್ ಟೀಕೆ

Published On :

ಕ.ಪ್ರ.ವಾರ್ತೆ   ಆನೇಕಲ್ಲು   ಆ.14
ಜಾತ್ಯತೀತ ಜನತಾದಳದ ವರಿಷ್ಠರಾದ ದೇವೇಗೌಡರು ಹಾಗೂ ಅವಕಾಶವಾದಿ ರಾಜಕಾರಣಿ ಕುಮಾರ ಸ್ವಾಮಿ ಜಾತ್ಯತೀತ ಸಿದ್ಧಾಂತಗಳನ್ನು ಗಾಳಿಗೆ ತೂರಿ ಅಧಿಕಾರ ಹಿಡಿಯಲು ಅಡ್ಡದಾರಿ ಹಿಡಿದಿರುವುದು ನಾಟಿಕೆಗೇಡಿನ ಸಂಗತಿ. ತಮಗೆ ಬೇಕಾದಾಗ ಬಿಜೆಪಿ ಬಾಗಿಲನ್ನು ತಟ್ಟುವುದು ತಮ್ಮ ಹಕ್ಕು ಎಂಬುದನ್ನು ಸಾಬೀತುಪಡಿಸಿದ್ದಾರೆ. ಇಂತಹ ಇಬ್ಬಗೆ ನೀತಿಯ ರಾಜಕಾರಣಿಗಳನ್ನು ಜನತೆ ದೂರಮಾಡಬೇಕೆಂದು ಕೇಂದ್ರ ಸಚಿವ ರೆಹಮಾನ್ ಖಾನ್ ಮನವಿ ಮಾಡಿದ್ದಾರೆ.
ಅವರು ಆನೇಕಲ್ ಬ್ಲಾಕ್ ಕಾಂಗ್ರೆಸ್ ಘಟಕ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಅಲ್ಪ ಸಂಖ್ಯಾತ ಸಮಾವೇಶದಲ್ಲಿ ಮಾತನಾಡಿ ಕಾಂಗ್ರೆಸ್ ತತ್ವ ಸಿದ್ಧಾಂತಗಳಿಗೆ ಬದ್ಧ. ಅಲ್ಪ ಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರು ದೇಶದಲ್ಲಿ ನೆಮ್ಮದಿ ಕಾಣಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಇಂದು ಬಿಜೆಪಿ ರಾಜ್ಯದಲ್ಲಿ ತಲೆ ಎತ್ತಲು ಕುಮಾರಸ್ವಾಮಿಯವರ ಸ್ವಾರ್ಥವೇ ಕಾರಣವಾಯಿತು. ಈಗ ತಮ್ಮ ಶ್ರೀಮತಿಯವರನ್ನು ಸಂಸದೆಯನ್ನಾಗಿಸಲು  ಮತ್ತೆ ಬಿಜೆಪಿ ಬಾಗಿಲು ತಟ್ಟಿದ್ದಾರೆ. ಯಡಿಯೂರಪ್ಪನವರ ಜೊತೆ ಮಾಲೆ ಹಂಚಿಕೊಂಡಿದ್ದಾರೆ. ಇವರಿಂದ ಜನತೆ ಎಚ್ಚರವಾಗಿರಬೇಕು ಎಂದರು.
 ಮೇಲ್ಮನೆ ಸದಸ್ಯ ಬಿ.ಟಿ. ದಯಾನಂದರೆಡ್ಡಿ ಮಾತನಾಡಿ ಬೆಂಗಳೂರು ನಗರ ಜಿಲ್ಲೆಯ ಅಬಿವೃದ್ಧಿ ವೇಗ ಗತಿಯಿಂದ ನಡೆಯುತ್ತಿದೆ. ಡಿ.ಕೆ. ಸುರೇಶ್ ಯುವ ಉತ್ಸಾಹಿ ರಾಜಕಾರಣಿ ಇವರಿಗೆ ತಮ್ಮ ಅಮೂಲ್ಯ ಮತ ನೀಡಬೇಕೆಂದರು ಮನವಿ ಮಾಡಿದರು. ಶಾಸಕ ಬಿ. ಶಿವಣ್ಣ ಅಲ್ಪ ಸಂಖ್ಯಾತರು, ಹಿಂದುಳಿದವರು ಹಾಗೂ ದಲಿತ ಬಂಧುಗಳ ಸೇವೆಗಾಗಿ  ಡಿ.ಕೆ. ಸುರೇಶ್ ಅವರಿಗೆ ಮತ ನೀಡಿ ಎಂದರು. ಮುಖಂಡರಾದ ಸೋಮಶೇಖರರೆಡ್ಡಿ, ಷಫಿ, ಪುರಸಭಾ ಸದಸ್ಯರಾದ ಮುನಾವರ್, ಪಿ.ಶಂಕರ್ ಕುಮಾರ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜಣ್ಣ, ಚಂದ್ರಪ್ಪ ಮತ್ತು ಗೋಪಾಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.