ಕಲ್ಲು ಗಣಿಗಾರಿಕೆಯಿಂದಾಗಿ ಚಾರಿತ್ರಿಕ ಭೈರವನದುರ್ಗದ ಬೆಟ್ಟಕ್ಕೆ ದಕ್ಕೆ: ಆರೋಪ
ಮಾಗಡಿ: ಕಲ್ಲು ಗಣಿಗಾರಿಕೆಯಿಂದಾಗಿ ಚಾರಿತ್ರಿಕ ಭೈರವನದುರ್ಗದ ಬೆಟ್ಟಕ್ಕೆ ಧಕ್ಕೆ ಉಂಟಾಗಲಿದೆ. ಮಾಗಡಿ ತಾಲೂಕಿನ ಕುದೂರು ಬಳಿ ಇರುವ ಚಾರಿತ್ರಿಕ ಭೈರವನ ಬೆಟ್ಟದ ತಪ್ಪಲಿನಲ್ಲಿ ಅಕ್ರಮ ಗಣಿಗಾರಿಕೆ ನಡೆದಿದ್ದು, ಇಲ್ಲಿನ ಪ್ರಾಕೃತಿ ಪರಿಸರ ಸಂಪತ್ತು , ಗಣಿ ಸಂಪತ್ತು ಹಾಗೂ ಚಾರಿತ್ರಿಕ ಭೈರವೇಶ್ವರಸ್ವಾಮಿ ದೇವಾಲಯಕ್ಕೆ ಮತ್ತು ಭೈರವನಬೆಟ್ಟಕ್ಕೂ ದಕ್ಕೆ ತಪ್ಪಿದಲ್ಲ. ಕಲ್ಲು ಗಣಿ ಲೂಟಿ ತಡೆಯುವಂತೆ ಪ್ರಾಕೃತಿ ಸಂಪತ್ತು ಉಳಿಸುವಂತೆ ಸಂಬಂಧಪಟ್ಟ ಇಲಾಖೆ ಮನವಿ ಮಾಡಿದ್ದಾಗಿಯೂ ಸ್ಥಳೀಯ ಮುಖಂಡ ಬಿ.ಎಸ್. ಸುಹೇಲ್ ತಿಳಿಸಿದ್ದಾರೆ. ಬಳ್ಳಾರಿಯಲ್ಲಿ ನಡೆಯುತ್ತಿದ್ದಂತಹ ಬೃಹತ್ ಕಲ್ಲು ಗಣಿಯನ್ನೇ ಸರ್ಕಾರ ಸ್ಥಗಿತಗೊಳಿಸಿದೆ. ಆದರೆ ಮಾಗಡಿ ತಾಲೂಕಿನ ಸುತ್ತಮುತ್ತಲು ಕಲ್ಲು ಗಣಿಗಾರಿಕೆ ಮಾತ್ರ ಯಾವ ಎಗ್ಗಿಲ್ಲದೆ ನಿರಂತರವಾಗಿ ನಡೆದಿದೆ. ರಜಾ ದಿನಗಳಲ್ಲಿ, ರಾತ್ರೋ ರಾತ್ರಿ ಕಲ್ಲು ಗಣಿಗಾರಿಕೆ ನಡೆಸಲು ಬಾರಿಸ್ಪೋಟಕಗಳನ್ನು ಬಳಸಲಾಗುತ್ತಿದೆ. ಇದರಿಂದ ಸುತ್ತಮುತ್ತಲ ಹಳ್ಳಿಗಳ ನಾಗರೀಕರು ವಾಸ ಮಾಡಲಾಗದಂತಹ ಭಯದ ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದೇವೆ ಎಂದಿದ್ದಾರೆ. ಆದರೂ ಎಗ್ಗಿಲ್ಲದೆ ಲಕ್ಷಾಂತರ ರು.ಗಳಬೆಲೆ ಬಾಳುವ ಕಲ್ಲು ದಿಮ್ಮಿಗಳನ್ನು ಅಕ್ರಮವಾಗಿ ತೆಗೆದು ಲಾರಿಗಳಲ್ಲಿ ಸಾಗಣಿಕೆ ಮಾಡಲಾಗುತ್ತಿದೆ. ಅಕ್ರಮ ಕಲ್ಲು ದಿಮ್ಮಿಗಳ ಸಾಗಾಣಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್ ಡಾ.ಬಿ.ಆರ್. ಹರೀಶ್ ನಾಯಕ್ ಮಾರ್ಗದರ್ಶನದಲ್ಲಿ ಪೊಲೀಸ್ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದ ರೆವಿನ್ಯೂ ಅಧಿಕಾರಿಗಳು ಕಲ್ಲು ದಿಮ್ಮಿ ತುಂಬಿದ ಲಾರಿಯನ್ನು ತಡೆದು, ಕಲ್ಲು ದಿಮ್ಮಿ ಸಮೇತ ಲಾರಿ ವಶಪಡಿಸಿಕೊಂಡು ಸೋಲೂರು ಪೊಲೀಸ್ ಠಾಣೆಯಲ್ಲಿರಿಸಿ ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

