ಬೆಂಗಳೂರು ಗ್ರಾಮಾಂತರ

'ಕಾಂಗ್ರೆಸ್‌ನಿಂದ ಸಾಮಾಜಿಕ ನ್ಯಾಯ'

Published On :

ಕ.ಪ್ರ.ವಾರ್ತೆ ಟಿ ಮಾಗಡಿ ಟಿ ಆ.17
ವೀರಶೈವ ಸಮಾಜ ಸ್ವಾಭಿಮಾನಿ ಸಮಾಜ ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ನುಡಿದರು.
ಮಾಗಡಿ ತಾಲೂಕಿನ ಗುಮ್ಮಸಂದ್ರ ಮಠದಲ್ಲಿ ನಡೆದ ವೀರಶೈವ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿ, ನಾನು ಸಚಿವನಾಗಿದ್ದಾಗ ವೀರಶೈವ ಸಮಾಜಕ್ಕೆ ರಾಜಕೀಯವಾಗಿ ಸ್ಥಾನಮಾನ ನೀಡಿದ್ದೇನೆ. ಕಾಂಗ್ರೆಸ್ ಪಕ್ಷ ಎಲ್ಲರಿಗೂ ಸ್ಥಾನಮಾನ ನೀಡುವ ಮೂಲಕ ಸಾಮಾಜಿಕ ನ್ಯಾಯ ನೀಡಿದ್ದೇವೆ. ವೀರಶೈವ ಸಮಾಜ ನಿಜಕ್ಕೂ ಸ್ವಾಭಿಮಾನಿಗಳು. ಹಣ, ಹೆಂಡ, ಅಮಿಷಕ್ಕೆ ಎಂದೂ ಮತ ಹಾಕಿದವರಲ್ಲ.
ನಾನು ಕುರುಬ ಸಮಾಜದವನು. ಕ್ಷೇತ್ರದಲ್ಲಿ ಕೇವಲ 3 ಸಾವಿರ ಕುರುಬ ಸಮಾಜವಿದ್ದರೂ ಎಲ್ಲಾ ವರ್ಗಗಗಳೂ ಸೇರಿ ನನ್ನನ್ನು ಶಾಸಕನಾಗಿ, ಸಚಿವನಾಗಿ ಮಾಡಿ ಬೆಳೆಸಿದ್ದಾರೆ. ಕ್ಷೇತ್ರ ವಿಂಗಡನೆಯಿಂದ ಕ್ಷೇತ್ರ ಬಿಡಬೇಕಾಯಿತು. ಆದರೂ ಮಾಗಡಿ ಜನರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ಮಾಗಡಿ ಕ್ಷೇತ್ರಕ್ಕೆ ಹೇಮಾವತಿ ನದಿ ನೀರು ಹರಿಸುವವರೆಗೂ ವಿರಮಿಸುವುದಿಲ್ಲ. ಈಗಾಗಲೇ ಸಿಎಂ ಸಿದ್ದರಾಮಯ್ಯ ಹೇಮಾವತಿ ನೀರಾವರಿ ಯೋಜನೆ ಕ್ಷೇತ್ರಕ್ಕೆ ಹರಿಸಲು ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದಾರೆ. ನೀರು ಹರಿಸಿ, ಕ್ಷೇತ್ರ ಜನರ ಋಣ ತೀರಿಸುತ್ತೇನೆ. ಲೋಕಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರಿಗೆ ಮತ ನೀಡಿದರೆ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರುತ್ತದೆ. ಮುಂದಿನ ಲೋಕಸಭಾ ಚುನಾವಣೆಗೂ ದಿಕ್ಸೂಚಿಯಾಗುತ್ತದೆ ಎಂದರು.
ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ, ವೀರಶೈವ ಸಮಾಜದವರಲ್ಲಿ ಗಟ್ಟಿತನವಿರಲಿ. ಗಟ್ಟಿತನವೇ ಸಮಾಜದ ಅಭಿವೃದ್ಧಿಗೆ ನಾಂದಿ. ಗಟ್ಟಿತನವಿಲ್ಲದೆ ಅತಂತ್ರ ಸ್ಥಿತಿ ತಲುಪುವುದು ಬೇಡ. ಜನಪರ ಹೋರಾಟದ ಮೂಲಕ ರಾಜಕೀಯ ಸ್ಥಾನಮಾನ ಗಳಿಸಿಕೊಳ್ಳಲು ಜಾಗೃತರಾಗಬೇಕು. ಕಾಂಗ್ರೆಸ್‌ದಿಂದ ಸಾಮಾಜಿಕ ನ್ಯಾಯ ಸಿಗುವುದು ಎಂದರು.
ಚಕ್ರಭಾವಿ ಮಠದ ಸಿದ್ದಲಿಂಗ ಸ್ವಾಮೀಜಿ, ಗುಮ್ಮಸಂದ್ರ ಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಾಸಕ ಶಾಂತನಗೌಡ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ, ಬಿಬಿಎಂಪಿ ಮಾಜಿ ಮೇಯರ್ ಬಿ.ಎಸ್. ಪುಟ್ಟರಾಜು, ಜಿಲ್ಲಾ ಪಂಚಾಯಿತಿ ಸದಸ್ಯ ರಂಗಸ್ವಾಮಿ, ತಾಪಂ ಸದಸ್ಯ ಶಂಕರಪ್ಪ, ಯುವ ಮುಖಂಡ ಬಿ.ವಿ. ಜಯರಾಮು, ರೇವಣ್ಣ, ಶಿವರಾಜು, ಅನುಸೂಯ ಕಾಂತರಾಜು, ಜಿಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ವಿಶ್ವನಾಥ್, ವೀರಭದ್ರಪ್ಪ ಆರಾಧ್ಯ, ಕಿಟ್ಟಿ, ಬೋಜಣ್ಣ, ಎಂ.ಬಿ. ಮಹೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.