ಯುವತಿಯರಿಬ್ಬರ ನಾಪತ್ತೆ ಪ್ರಕರಣ
ರಾಮನಗರ: ಜಿಲ್ಲೆಯಲ್ಲೂ ನಾಪತ್ತೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈಚೆಗೆ ಜಿಲ್ಲೆಯಲ್ಲಿ ಇಬ್ಬರು ಯುವತಿಯರು ನಾಪತ್ತೆ ಆಗಿರುವ ಬಗ್ಗೆ ಪೋಷಕರು ಪೊಲೀಸರಿಗೆ ದೂರಿದ್ದಾರೆ. ಈ ಸಂಬಂಧ ಒಂದು ಪ್ರಕರಣ ರಾಮನಗರದ ಐಜೂರು ಠಾಣೆಯಲ್ಲಿ, ಮತ್ತೊಂದು ಪ್ರಕರಣ ಬಿಡದಿ ಠಾಣೆಯಲ್ಲಿ ದಾಖಲಾಗಿದೆ. ರಾಮನಗರದ ಐಜೂರಿನ ಗೃಹ ಮಂಡಳಿ ಕಾಲೋನಿಯ ಮೀನಾಕ್ಷಿ ಮತ್ತು ಶಿವರಾಜು ಅವರ ಮಗಳು ಧನಲಕ್ಷ್ಮಿ(21) ಅ.31ರಿಂದ ಕಾಣೆಯಾಗಿದ್ದಾಳೆ. ಈಕೆ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಎ ವ್ಯಾಸಂಗ ಮಾಡುತ್ತಿದ್ದಳು. ಅಂದು ಕಾಲೇಜಿಗೆ ಹೋದವರು ಮಗೆ ಮರಳಿಲ್ಲ. 5.2 ಅಡಿ ಎತ್ತರ, ಗುಂಡುಮುಖ, ಎಣ್ಣೆ ಕೆಂಪು ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾಳೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ಕಾಣೆಯಾಗಿರುವ ಮತ್ತೊಬ್ಬ ಯುವತಿಯು ಮಂಚನಾಯಕನಹಳ್ಳಿ ವಾಸಿ ವೆಂಕಟರಮಣಪ್ಪ ಅವರ ಮಗಳು ವಿ.ವನಿತಾ(20). ಆಕೆ ಡಿ.3ರಂದು ಪರೀಕ್ಷೆ ಬರೆಯಲು ಕೆಂಗೇರಿಯ ಕಾಲೇಜಿಗೆ ಹೋಗುತ್ತೇನೆಂದು ಮನೆ ಬಿಟ್ಟು ಹೋದವಳು ಮತ್ತೆ ವಾಪಸಾಗಿಲ್ಲ. 5.2 ಅಡಿ ಎತ್ತರ, ಗುಂಡುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾಳೆ ಎಂದು ಆಕೆಯ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ಅಕ್ರಮ ಮದ್ಯ ತಡೆಗೆ ನಿಯೋಗ ಆಗ್ರಹ
ರಾಮನಗರ: ತಾಲೂಕಿನಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ನಿಯೋಗ ರಾಮನಗರ ಪುರ ಪೊಲೀಸ್ ಇನ್ಸ್ಪೆಕ್ಟರ್ ಅವರನ್ನು ಒತ್ತಾಯಿಸಿದೆ. ನಗರದ ಪುರ ಠಾಣೆಯಲ್ಲಿ ವತ್ತ ನಿರೀಕ್ಷಕ ಸುಬ್ರಹ್ಮಣ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ದಲಿತ ಮುಖಂಡರ ಸಭೆಯಲ್ಲಿ ಮಾತನಾಡಿದ ವಿವಿಧ ಮುಖಂಡರು ಪ್ರಮುಖವಾಗಿ ದಲಿತರು ವಾಸಿಸುವ ಪ್ರದೇಶಗಳಲ್ಲೇ ಅಕ್ರಮ ಮದ್ಯ ಮಾರಾಟದ ಹಾವಳಿ ಹೆಚ್ಚಿದೆ. ಈ ದಂಧೆಯಿಂದಾಗಿ ಅಪ್ರಾಪ್ತರು ಮತ್ತು ಮಹಿಳೆಯರೂ ಕೂಡ ಮದ್ಯ ವ್ಯಸನಿಗಳಾಗುತ್ತಿದ್ದಾರೆ ಎಂದು ದೂರಿದರು.
ನಗರದ ಒಟ್ಟು 31 ವಾರ್ಡುಗಳ ಪೈಕಿ ಸುಮಾರು 16 ವಾರ್ಡುಗಳಲ್ಲಿ ದಲಿತ ಸಮುದಾಯ ಹೆಚ್ಚಾಗಿ ವಾಸವಿದೆ. ಇತ್ತೀಚಿನ ದಿನಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಮಿತಿ ಮೀರಿದೆ. ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳಲ್ಲಿ ಕಳಪೆ ಆಹಾರ ಪದಾರ್ಥಗಳನ್ನು ಮಾರಾಟ ನಡೆಯುತ್ತಿದೆ. ಅಂತಹ ನ್ಯಾಯ ಬೆಲೆ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನಿಯೋಗದಲ್ಲಿ ರಾ.ಸಿ.ದೇವರಾಜು, ಮೋಹನ್ಕುಮಾರ್, ಸೋಮಶೇಖರ್, ಗೋವಿಂದರಾಜು, ಗುರುಮಲ್ಲಯ್ಯ, ಧರ್ಮಸೇನ, ಬೈರಲಿಂಗಯ್ಯ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

