ಜಿಪಂ ಉಪ ಕಾರ್ಯದರ್ಶಿ ಲತಾ ನೇತೃತ್ವದ ಸಮಿತಿಯಿಂದ ಪರಿಶೀಲನೆ
ಮಾಗಡಿ: ತಾಲೂಕಿನ ತಿಪ್ಪಸಂದ್ರ ಗ್ರಾಮದ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿ ಕಳಪೆ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲಿನ ಆರೋಪಗಳ ತನಿಖೆಗಾಗಿ ನೇಮಕಗೊಂಡಿದ್ದ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಲತಾ ನೇತೃತ್ವದ ಸಮಿತಿ ತಂಡ ಶನಿವಾರ ಕಸ್ತೂರ ಬಾ ಗಾಂಧಿ ಬಾಲಕಿಯರ ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲಿಸಿತು.
ತನಿಖೆ ವೇಳೆ ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆಯಲ್ಲಿ ಗೊಂದಲ ಉಂಟಾಗಿತ್ತು. ವಾರ್ಡ್ನ್ 27 ಮಂದಿ ವಿದ್ಯಾರ್ಥಿಗಳಿದ್ದಾರೆ ಎಂದರೆ, ನೋಡಲ್ ಅಧಿಕಾರಿ 33 ಎನ್ನುತ್ತಿದ್ದರು. ಜಿಲ್ಲಾ ಪಂಚಾಯ್ತಿ
ಸದಸ್ಯ ಧನಂಜಯ ಪ್ರಕಾರ 15 ವಿದ್ಯಾರ್ಥಿಗಳು ಎಂದರು. ವಿದ್ಯಾರ್ಥಿಗಳನ್ನು ವಿಚಾರಿಸಿದರೆ 33 ಎನ್ನುವಂತಾತ್ತು. ಅಂಕೆಗೆ ಸಿಗದ ವಿದ್ಯಾರ್ಥಿ ಹಾಜರಾತಿಯಿಂದ ತನಿಖೆ ಸಮಿತಿ ತಬ್ಬಿಬ್ಬಾಗಿತ್ತು. ಹಾಜರಾತಿ ಪುಸ್ತಕ ನೋಡಿದರೆ ಎಲ್ಲರೂ ಹಾಜರಾತಿ ಇದ್ದರು. ವಾಸ್ತವಾಂಶವಾಗಿ ಸ್ಥಳದಲ್ಲಿ 20 ವಿದ್ಯಾರ್ಥಿಗಳು ಕಂಡು ಬಂದರು. ಇದರಿಂದಾಗಿ ಉಪ ಕಾರ್ಯದರ್ಶಿಗೆ ಕೆಲ ಕಾಲ ಗೊಂದಲಕ್ಕೆ ಒಳಗಾದರು. ಅಡುಗೆ ಸಮಗ್ರಿ ಖರೀದಿಸುವ ಸ್ಟಾಕ್ ಪುಸ್ತಕ ಇಟ್ಟಿರಲಿಲ್ಲ. ಸ್ಥಳೀಯವಾಗಿ ತರಕಾರಿ ಅಂಗಡಿಯಲ್ಲಿ ಖರೀದಿಸಿರುವ ಸಣ್ಣ ಪುಸ್ತಕವನ್ನು ವಾರ್ಡನ್ ತೋರಿಸಿದಾಗ, ನಿಯಮದಂತೆ ಸ್ಟಾಕ್ ಪುಸ್ತಕ ನೀಡುವಂತೆ ಒತ್ತಾಯಿಸಿದರೂ ನೀಡಲಿಲ್ಲ.
ತನಿಖೆ ವೇಳೆ ಬಿಇಓ ಕಟ್ಟಡದ ಅಂದಾಜು ಪಟ್ಟಿ ತಂದಿರಲಿಲ್ಲ. ಇದರಿಂದ ಲತಾ ಅವರ ಆಕ್ರೋಶಕ್ಕೆ ಬಿಇಓ ಗುರಿಯಾದರು. ಸ್ಥಳದಲ್ಲಿಯೇ ಬಿಇಓ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಹಾಸ್ಟೆಲ್ ಬಳಿ ಕೊಳವೆ ಬಾವಿಯೂ ಕಂಡು ಬರಲಿಲ್ಲ. ಇದರಿಂದಾಗಿ ಉಪ ಕಾರ್ಯದರ್ಶಿಗೆ ನಿಜಕ್ಕೂ ಹಾಸ್ಟೆಲ್ನಲ್ಲಿ ಹತ್ತಾರು ಸಮಸ್ಯೆಗಳಿರುವುದು ಮೇಲ್ನೋಟಕ್ಕೆ ಕಂಡು ಬಂತು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಕಾರ್ಯದರ್ಶಿ ಲತಾ ಅವರು, ಮೇಲ್ನೋಟಕ್ಕೆ ಕಸ್ತೂರ ಬಾ ಗಾಂಧಿ ಬಾಲಕಿಯರ ಹಾಸ್ಟೆಲ್ನಲ್ಲಿ ಹಲವಾರು ಸಮಸ್ಯೆಗಳಿವೆ. ಈ ಕುರಿತು ಹಾಸ್ಟೆಲ್ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಸಮಿತಿ ಸದಸ್ಯರು ಕೂಲಂಕುಶವಾಗಿ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಮುಖ್ಯ ಯೋಜನಾಧಿಕಾರಿ ಧನುಷ್, ಚಂದ್ರಶೇಖರ್ ಎಕ್ಸಿಕ್ಯುಟೀವ್ ಎಂಜಿನಿಯರ್ ವೇಣುಗೋಪಾಲ್ ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಕೆ.ಧನಂಜಯ, ಬಿಇಓ ರಂಗಸ್ವಾಮಿ ಹಾಗೂ ಹಾಸ್ಟೆಲ್ ನೋಡಲ್ ಅಧಿಕಾರಿ ಮುಖ್ಯಶಿಕ್ಷಕಿ ಸಾವಿತ್ರಿ ಹಾಗೂ ವಾರ್ಡನ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

