ಆಧ್ಯಾತ್ಮಿಕ ಕ್ರಾಂತಿಯನ್ನೇ ಸೃಷ್ಟಿಸಿದ ಮಹಾನ್ ಪುರುಷ ಮಂಟೇಸ್ವಾಮಿ
ಚನ್ನಪಟ್ಟಣ: ಸಾಮಾಜಿಕವಾಗಿ ಹಿಂದುಳಿದಿದ್ದ ಶೋಚಿತ ವರ್ಗದಿಂದ ಹುಟ್ಟಿಬಂದ ಮಂಟೇಸ್ವಾಮಿ, ಹಳೇ ಮೈಸೂರು ಪ್ರಾಂತ್ಯದಲ್ಲಿ ಆಧ್ಯಾತ್ಮಿಕ ಕ್ರಾಂತಿಯನ್ನೇ ಸೃಷ್ಟಿಸಿದ ಮಹಾನ್ ಪುರುಷ ಎಂದು ಗುಲ್ಬರ್ಗಾ ಕೇಂದ್ರಿಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಂಠೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಆಯೋಜಿಸಿದ್ದ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಕಾರ್ಯಕ್ರಮದಲ್ಲಿ ಮಾತನಾಡಿ, 16-17 ನೇ ಶತಮಾನ ಏಕತೆಯ ತತ್ವವನ್ನು ಪ್ರತಿಪಾದಿಸಿದ ಮಂಟೇಸ್ವಾಮಿ ಸಮಾಜದ ಶೋಷಿತ ಜನರ ಪರವಾಗಿ ದನಿಎತ್ತು ಅವರೆಲ್ಲರಿಗೂ ಭಗವಂತನನ್ನು ಕಾಣುವ ಸರಳ ಮಾರ್ಗವನ್ನ ತೋರಿಸಿ ಕೊಟ್ಟ ಶ್ರೇಷ್ಠ ದಾರ್ಶನಿಕ ಎಂದರು.
ಜಾನಪದ ಸಂತ ಮಂಟೇಸ್ವಾಮಿ ನಮ್ಮ ನಿಮ್ಮ ಹಾಗೇಯೇ ಬದುಕಿದ್ದ ನಿಜ ಮನುಷ್ಯ. ಕನ್ನಡ ಜನಪದ ಕಾವ್ಯದ ಸಂದರ್ಭದಲ್ಲಿ ಮಂಟೇಸ್ವಾಮಿ ಕಾವ್ಯ, ಸಿದ್ದಪ್ಪಾಜಿ ರಾಚಪ್ಪಾಜಿ, ಮೈಲಾರಲಿಂಗನ ಕಾವ್ಯ, ಹಾಲುಮತ ಪುರಾಣ ನಮ್ಮ ಮೌಲಿಕ ಕಾವ್ಯಗಳು, ತಮ್ಮ ಸಮುದಾಯದ ಆದರ್ಶಪ್ರಾಯರಾದ ಸಂಸ್ಕೃತಿಕ ನಾಯಕರಾದ ಮಂಟೇಸ್ವಾಮಿ, ಮಲೈಮಹದೇಶ್ವರ, ಜುಂಜಪ್ಪ ಎರಡೂ ಕಾಲಘಟ್ಟಗಳ ಸಾಕ್ಷಿ ಪ್ರಜ್ಞೆ ಎಂದರು.
ಅಸಮಾನತೆಯ ವಿರುದ್ಧ ಪ್ರತಿರೋಧ ಒಡ್ಡುವ ಮಂಟೇಸ್ವಾಮಿ ಆದಿಯಿಂದ ತಾನು ಪಾತಾಳ ಲೋಕಕ್ಕೆ ಹೋಗುವವರೆವಿಗೂ ಬಹುದೊಡ್ಡ ಬಂಡಾಯಗಾರನಾಗಿ ಕಾಣುತ್ತಾರೆ. ಆದಿ ಕಲ್ಯಾಣದ ಮುಖವಾಡದ ಶರಣರನ್ನು ತುಂಬಾ ನಿಷ್ಠುರವಾಗಿ ಪ್ರಶ್ನಿಸಿ, ಏಕತೆಯ ತತ್ವವನ್ನು ತನ್ನ ಜೀವನದುದ್ದಕ್ಕೂ ಪ್ರತಿಪಾದಿಸಿದ ಸಾಂಸ್ಕೃತಿಕ ನಾಯಕ ಮಂಟೇಸ್ವಾಮಿ ಎಂದರು.
ಭಕ್ತಿ ಚಳವಳಿ: ಕಾರ್ಯಕ್ರಮದ ಉದ್ಘಾಟಸಿ ಮಾತನಾಡಿದ ಪರಿಸರ ಸಂರಕ್ಷಣಾ ಒಕ್ಕೂಟದ ಮುಕುಂದರಾವ್, ಉತ್ತರ ಕರ್ನಾಟಕದ ಕಲ್ಯಾಣ ಕ್ರಾಂತಿಗೆ ಸಮಾನವಾದ ಕ್ರಾಂತಿ ಹಳೇ ಮೈಸೂರು ಪ್ರಾಂತ್ಯದಲ್ಲಿ ನಡೆಯಿತೆಂದರೆ ಅದು ಈ ಪವಾಡ ಪುರುಷರು ಹುಟ್ಟು ಹಾಕಿದ ಭಕ್ತಿ ಚಳವಳಿ. ಮಂಟೇಸ್ವಾಮಿ ಅಸಮಾನತೆಯ ವಿರುದ್ಧದ ಸ್ಫೋಟಕ ಶಕ್ತಿ, ಹಾಗೇಯೇ ದುರ್ಬಲ ವರ್ಗದ ಪರವಾದ ಪ್ರೇರಕ ಶಕ್ತಿ ಎಂದರು.
ಸಾಹಿತಿ ಡಾ. ಕೂಡ್ಲೂರು ವೆಂಕಟಪ್ಪ, ಕ.ಸಾ.ಪ ಮಾಜಿ ಅಧ್ಯಕ್ಷ ಸಿ.ಸಿ.ರಾ ಹೇಳಿದರು. ಸಹಾಯಕ ತೋಟಗಾರಿಕಾ ಅಧಿಕಾರಿ ಎಚ್.ಆರ್. ರಾಮಚಂದ್ರಯ್ಯ ಮಾತನಾಡಿದರು. ತಾಲೂಕು ಕ.ಸಾ.ಪ ಅಧ್ಯಕ್ಷ ಎಂ. ಶಿವಮಾದು, ಜಿಲ್ಲಾ ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಬಿ.ಟಿ. ಚಿಕ್ಕಪುಟ್ಟೇಗೌಡ, ಕೆ.ಕೃಷ್ಣಮೂರ್ತಿ, ಮಲ್ಲಿಕಾರ್ಜುನೇಗೌಡ, ಸಿ.ರಾಜು ಕೆ.ಎಸ್.ಆರ್.ಟಿ.ಸಿ ನೌಕರ, ಚ.ಶಿ.ವೆಂಕಟೇಶಮೂರ್ತಿ, ನಗರಸಭಾ ಸದಸ್ಯ ಎಸ್.ಉಮಾಶಂಕರ್ ಉಪಸ್ಥಿತರಿದ್ದರು.
ಮೋಳೆದೊಡ್ಡಿ ಗ್ರಾಮದ ಹರಿಕಥಾ ವಿದ್ವಾನ್ ಪೂಜಾರಿ ಸ್ವಾಮಿ ಮತ್ತು ಸಂಗಡಿಗರು ಗೀತಗಾಯನ ನಡೆಸಿಕೊಟ್ಟರು. ಗೌರವ ಕಾರ್ಯದರ್ಶಿ ವಿಜಯ್ರಾಂಪುರ, ಸ್ವಾಗತಿಸಿದರು. ಬ್ರಹ್ಮಣೀಪುರ ರಾಮಕಷ್ಣಯ್ಯ ನಿರೂಪಿಸಿ, ಕೋಶಾಧ್ಯಕ್ಷ ಕೂರಣಗೆರೆ ಕೃಷ್ಣಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

