ದರೋಡೆಗೆ ಹೊಂಚು: 6 ಮಂದಿ ಬಂಧನ
ಮದ್ದೂರು: ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಚಾಲಕರ ಮೇಲೆ ಹಲ್ಲೆ ನಡೆಸಿ ದರೋಡೆ ನಡೆಸಲು ಹೊಂಚು ಹಾಕುತ್ತಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 6 ಮಂದಿ ಯುವಕರನ್ನು ಅಪರಾಧ ಪತ್ತೆದಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಒಂದು ಟಾಟಾ ಸುಮೋ, ಲಾಂಗು, ದೊಣ್ಣೆ, ಅಗ್ಗ, ಕಾರದಪುಡಿ ಹಾಗೂ 5 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೆಕಲ್ ತಾಲೂಕಿನ ಜಿಗಣಿ ಗ್ರಾಮದ ಮಹಾಂತೇಶ್ ಪುತ್ರ ಅರುಣ್ (20) ವೇಣುಗೋಪಾಲ್ ಪುತ್ರ ಮಂಜುನಾಥ್ (20) ನಾರಾಯಣಪ್ಪನ ಪುತ್ರ ಗಿರೀಶ್ (21) ಮುನಿವೆಂಕಟಪ್ಪನ ಪುತ್ರ ವಿನೋದ್ (20), ವೆಂಕಟೇಶಪ್ಪನ ಪುತ್ರ ಮಂಜುನಾಥ್ (22) ಹಾಗೂ ಕೃಷ್ಣಪ್ಪನ ಪುತ್ರ ಅನಿಲ್‌ಕುಮಾರ್ (19) ಬಂಧಿತ ಆರೋಪಿಗಳು.
ಆನೆಕಲ್ ಸಮೀಪದ ಜಿಗಣಿಯಿಂದ ಟಾಟಾ ಸುಮೋದಲ್ಲಿ ಬಂಧಿತ ಆರೋಪಿಗಳು ಮದ್ದೂರು ಹೊರವಲಯದ ಬೆಂಗಳೂರು ಹೆದ್ದಾರಿಯಲ್ಲಿ ದರೋಡೆ ನಡೆಸಲು ಹೊಂಚು ಹಾಕಿ ಕುಳಿತಿದ್ದರು. ಈ ಸಂದರ್ಭದಲ್ಲಿ ತಾಲೂಕಿನ ಹಲವು ದೇವಾಲಯಗಳಲ್ಲಿ ಕಳುವಿನ ಪ್ರಕರಣದ ಹಿನ್ನೆಲೆಯಲ್ಲಿ ಕಳ್ಳರ ಪತ್ತೆಗಾಗಿ ಸಿಪಿಐ ಯೋಗೇಂದ್ರನಾಥ್ ಮಾರ್ಗದರ್ಶನದಲ್ಲಿ ಕರ್ತವ್ಯ ನಿರತರಾಗಿದ್ದ ಅಪರಾಧ ಪತ್ತೆದಳದ ತಂಡ ರಾತ್ರಿ ಗಸ್ತಿನ ಸಂದರ್ಭದಲ್ಲಿ ಟಾಟಾ ಸುಮೋ ತಡೆದು ಪರಿಶೀಲನೆ ನಡೆಸಿದಾಗ ಆರೋಪಿಗಳು ದರೋಡೆ ನಡೆಸಲು ಹೊಂಚು ಹಾಕುತ್ತಿದ್ದು ಬೆಳಕಿಗೆ ಬಂದಿದೆ.
ನಂತರ ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪರಾಧ ಪತ್ತೆದಳದ ಸಬ್‌ಇನ್ಸ್‌ಪೆಕ್ಟರ್ ಚಂದ್ರಶೇಖರ್, ಕೆಸ್ತೂರು ಠಾಣೆ ಸಬ್ ಇನ್ಸ್‌ಪೆಕ್ಟೆರ್ ಮಹೇಶ್, ಮುಖ್ಯಪೇದೆ ನಟರಾಜು, ಪೇದೆಗಳಾದ ಕುಮಾರಸ್ವಾಮಿ, ಗೋಪಾಲ್, ಪ್ರೇಮ್‌ಕುಮಾರ್, ಸಿದ್ದಯ್ಯ, ದೇವರಾಜು ಅವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತ ಆರೋಪಿಗಳನ್ನು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಅಪರ ಸಿವಿಲ್‌ನ್ಯಾಯಾಧೀಶ ವಿ. ವೆಂಕಟೇಶ್ ನಾಯಕ್ ಅವರ ಮುಂದೆ ಹಾಜರು ಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

