ಕಾರ್ಪೋರೇಶನ್ ಬ್ಯಾಂಕ್‌ನಿಂದ ಕೃಷಿ ಕ್ಷೇತ್ರಕ್ಕೆ ಹಣ: ರೆಡ್ಡಿ
ಚನ್ನಪಟ್ಟಣ: ಈ ದೇಶದ ಜೀವಾಳ ಎನಿಸಿರುವ ಕೃಷಿ ಕ್ಷೇತ್ರಕ್ಕೆ ನಮ್ಮ ಬ್ಯಾಂಕ್ ವಿಫುಲ ಹಣಕಾಸು ಸೌಲಭ್ಯ ನೀಡಲು ಸಿದ್ಧವಿದೆ ಎಂದು ಕಾರ್ಪೋರೇಶನ್ ಬ್ಯಾಂಕ್ ಪ್ರಧಾನ ಕಚೇರಿ ಜನರಲ್ ಮ್ಯಾನೇಜರ್ ಲಕ್ಷ್ಮೀನಾಥರೆಡ್ಡಿ ತಿಳಿಸಿದರು.
ಪಟ್ಟಣದ ಅನುಗ್ರಹ ಟವರ್ಸ್‌ನಲ್ಲಿ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ಕೃಷಿ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಈ ದೇಶಕ್ಕೆ ರೈತನೇ ಬೆನ್ನೆಲುಬಾಗಿದ್ದು ಬೃಹತ್ ಕೈಗಾರಿಕೆಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವಂತೆ ಕೃಷಿಗೂ ನಮ್ಮ ಬ್ಯಾಂಕ್ ಸಾಲ ಸೌಲಭ್ಯ ನೀಡಲಿದೆ ಎಂದರು.
ಕೃಷಿಕರಿಗೆ ಬೆಳೆಸಾಲ, ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣ, ಹೈನುಗಾರಿಕೆ ಹಾಗೂ ಇತರ ಕೃಷಿ ಉಪಕಸುಬುಗಳಿಗೆ ನಮ್ಮ ಬ್ಯಾಂಕ್ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಿದ್ದು, ರೈತರು ತಮ್ಮ ಶಕ್ತಾನುಸಾರ ಸಾಲವನ್ನು ಪಡೆದು ಕೊಳ್ಳುವಂತೆ ತಿಳಿಸಿದರು.
ಸೋಲಾರ್ ಸೌಲಭ್ಯಕ್ಕೆ ಸಾಲ: ನಮ್ಮ ಬ್ಯಾಂಕ್ ವತಿಯಿಂದ ರೈತರ ಕೊಳವೆ ಬಾವಿಗಳಿಗೆ ಸೌರ ವಿದ್ಯುತ್ ಶಕ್ತಿ ಅಳವಡಿಸಿ ಕೊಳ್ಳಲು, ಮನೆಗಳಿಗೆ ಸೌರ ವಿದ್ಯುತ್ ಸೌಲಭ್ಯ ಅಳವಡಿಸಿ ಕೊಳ್ಳಲು ಬ್ಯಾಂಕ್‌ನಿಂದ ಸಾಲ ಸೌಲಭ್ಯ ನೀಡಲಿದ್ದು ಇದರೊಂದಿಗೆ ಸ್ವಸಹಾಯ ಸಂಘಗಳಿಗೂ ಸಾಲ ನೀಡಲಾಗುವುದು ಎಂದರು.
ಬೆಳೆಸಾಲಕ್ಕೆ ಸಾಲ ನೀಡುವ ಸಂಬಂಧ ಸಿದ್ಧಪಡಿಸಿರುವ ಪಟ್ಟಿ ಹಳೆಯದಾಗಿದ್ದು ಇಂದಿನ ದಿನಗಳಲ್ಲಿ ಈ ದರ ಏನೇನು ಸಾಲದಾಗಿರುವುದನ್ನು ಮನಗಂಡಿರುವ ಬ್ಯಾಂಕ್ ಬೆಳೆ ಸಾಲವನ್ನು ಶೇ.192 ರಷ್ಟು ನೀಡುತ್ತಿದ್ದು ಬೆಳೆ ಸಾಲಕ್ಕೆ ನಿಗದಿತ ಪ್ರಮಾಣಕ್ಕಿಂತ ಎರಡು ಪಟ್ಟು ಹಣವನ್ನು ಹೆಚ್ಚಾಗಿ ನೀಡುತ್ತಿರುವ ಬ್ಯಾಂಕ್ ನಮ್ಮದು ಎಂದು ತಿಳಿಸಿದರು.
ರೈತರಿಗೂ ಕೋಟಿ ರೂ. ಸಾಲ : ಹಿಂದಿನ ದಿನಗಳಲ್ಲಿ ಬ್ಯಾಂಕ್‌ಗಳ ಕೇವಲ ಕೈಗಾರಿಕೋದ್ಯಮಿಗಳಿಗೆ ಮಾತ್ರ ಕೋಟಿ ಞ್ಜ. ಗಳ ಸಾಲ ನೀಡುತ್ತಿತು.್ತ ಆದರೆ ನಮ್ಮ ಬ್ಯಾಂಕ್ ತರಿಗೆ ಕೋಟಿರೂ. ಗಳವರೆಗೆ ಸಾಲ ನೀಡುತ್ತಿದೆ.
ಈಗಾಗಲೆ ರಾಮನಗರ ಜಿಲ್ಲೆಯ ಹಲವಾರು ರೈತರಿಗೆ 50 ಲಕ್ಷ ರು. ನಿಂದ ಕೋಟಿರೂ. ಗಳ ವರೆಗೆ ಸಾಲ ನೀಡಿದೆ ಎಂದು ಬೆಂಗಳೂರು ವಲಯದ ಜನರಲ್ ಮ್ಯಾನೇಜರ್ ಸ್ವಾತಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

