ವೆಂಕಟಗಿರಿಕೋಟೆಯಲ್ಲಿ ಕಾವೇರಿ ಬ್ಯಾಂಕ್ ಶಾಖೆ
ದೇವನಹಳ್ಳಿ: ತಾಲೂಕಿನ ವೆಂಕಟಗಿರಿಕೋಟೆಯಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್ 365 ನೇ ಶಾಖೆಯ ಉಧ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಚಂದ್ರಶೇಖರ್ ಶುಕ್ರವಾರ ಉದ್ಘಾಟಿಸಿದರು. ಗ್ರಾಮದಲ್ಲಿ ಪ್ರಥಮವಾಗಿ ಕಾವೇರಿ ಗ್ರಾಮೀಣ ಬ್ಯಾಂಕ್ ಆರಂಭವಾಗಿರುವುದರಿಂದ ಈ ಭಾಗದ ರೈತರಿಗೆ ವರದಾನವಾಗಿದ್ದು ರೈತರು ಬೆಳೆಯಿಂದ ಗಳಿಸಿದ ಹಣವನ್ನು ಮನೆಗಳಲ್ಲಿಡದೆ ಬ್ಯಾಂಕಿನಲ್ಲಿ ಇಡಬಹುದು ಅಲ್ಲದೆ ಯಾವುದೇ ರೀತಿಯ ಬೆಳೆಗಳಿಗೆ ಸಾಲ ಸೌಲಭ್ಯ ಸಹ ಪಡೆಯಬಹುದಾಗಿದೆ ಎಂದರು. ಬ್ಯಾಂಕ್ನ ಪ್ರಾದೇಶಿಕ ವ್ಯವಸ್ಥಾಪಕ ಪಿ.ಎನ್.ಸ್ವಾಮಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ದೊರೆಯುವ ಎಲ್ಲ ಸೌಲಭ್ಯಗಳು ಇಲ್ಲಿ ದೊರೆಯಲಿದ್ದು, ನಿಶ್ಚಿತ ಠೇವಣಿಗಳಿಗೆ ಇತರ ಬ್ಯಾಂಕ್ ಗಳಿಗಿಂತ ಶೇ. 0.5 ಬಡ್ಡಿ ಹೆಚ್ಚಿಗೆ ಪಡೆಯಬಹುದಾಗಿದೆ. ಈ ವರ್ಷ ಬ್ಯಾಂಕ್ 8000 ಕೋಟಿ ವ್ಯವಹಾರ ನಡೆಸಿದೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರು ಬ್ಯಾಂಕಿನಿಂದ ಸಾಲ ಪಡೆದು ಆರ್ಥಿಕವಾಗಿ ಮುಂದೆ ಬಂದು ಬ್ಯಾಂಕಿನ ಪ್ರಗತಿ ಸಹ ಹೆಚ್ಚಿಸಬೇಕು ಎಂದರು. ದೇವನಹಳ್ಳಿ ಪುರಸಭೆ ಮಾಜಿ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಮಾತನಾಡಿದರು. ಸಮಾರಂಭದಲ್ಲಿ ಕೆ.ಮಂಗಳ, ಹರಿಹರನ್, ದೇವನಹಳ್ಳಿ ಶಾಖೆ ಮ್ಯಾನೇಜರ್ ಭೋತೇಗೌಡ, ನಾರಾಯಣಸ್ವಾಮಿ, ಶಾಖೆಯ ವ್ಯವಸ್ಥಾಪಕಿ ವಿ.ಅಶ್ವಿನಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

