ಹೆಣ್ಮಕ್ಕಳು ತಂದೆ ಆಸ್ತಿ-ಸಾಲಕ್ಕೂ ಪಾಲುದಾರರು
ದೇವನಹಳ್ಳಿ: ಇತ್ತೀಚಿನ ದಿನಗಳಲ್ಲಿ ತಂದೆ ಗಳಿಸಿದ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಮಪಾಲು ಎಂದು ಕಾನೂನಿದೆ. ಅದೇ ರೀತಿ ತಂದೆಯ ಸಾಲಕ್ಕೂ ಅದೇ ಹೆಣ್ಣು ಮಕ್ಕಳು ಸಹ ಜವಾಬ್ದಾರರಾಗಿರುತ್ತಾರೆ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಯು.ಎಂ.ಅಡಿಗ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಭವನದಲ್ಲಿ ಭಾನುವಾರ ನಡೆದ ಮಾನವ ಹಕ್ಕುಗಳ ಜಾಗೃತಿ ಸಮಿತಿಯ ತಾಲೂಕು ಸಮಾವೇಶದಲ್ಲಿ ಹಕ್ಕು ಮತ್ತು ಕರ್ತವ್ಯದ ಬಗ್ಗೆ ತಿಳಿಸಿ ಅವರು ಮಾತನಾಡಿದರು. ರಾಜ್ಯದ ಮಾನವ ಹಕ್ಕುಗಳ ಜಾಗೃತಿ ಸಮಿತಿ, ಸಾಮಾನ್ಯ ಜನರಿಗೆ ತಮ್ಮ ಹಕ್ಕು ಭಾದ್ಯತೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ ಎಂದು ಇದೇ ವೇಳೆ ಅವರು ಅಭಿಪ್ರಾಯಪಟ್ಟರು. ತಾಯಿಯ ಹೊಟ್ಟೆಯಲ್ಲಿ ಇರುವ ಭ್ರೂಣಾವಸ್ಥೆಯಿಂದ ಮತ್ತು ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಮತ್ತು ಕೆಲವು ವೇಳೆ ಸತ್ತ ನಂತರವೂ ಮಾನವ ಹಕ್ಕುಗಳು ಆತನ ಜೊತೆಯಲ್ಲೇ ಬರುತ್ತವೆ. ನ್ಯಾಯಾಲಯಗಳಲ್ಲಿ ಕೆಲವು ಸಂಧರ್ಭದಲ್ಲಿ ಸಾಕ್ಷಿಗಳು ಸರಿಯಾದ ಸಾಕ್ಷಿ ನೀಡದೇ ಹೋದರೆ ನೊಂದ ವ್ಯಕ್ತಿಗೆ ಹೇಗೆ ನ್ಯಾಯ ಸಿಗಲು ಸಾಧ್ಯ ಎಂದರಲ್ಲದೆ ಉತ್ತಮ ಸಮಾಜಕ್ಕೆ ಕಾನೂನು ಅಗತ್ಯವಾಗಿದೆ ಎಂದರು.
ಸಿವಿಲ್ ನ್ಯಾಯಾಧೀಶ ಎಂ.ನಟರಾಜ್ ಮಾತನಾಡಿ, ಸರ್ಕಾರ ಮಾಡಬೇಕಾದ ಕೆಲಸವನ್ನು ಇಲ್ಲಿನ ಮಾನವ ಹಕ್ಕುಗಳ ಜಾಗೃತಿ ಸಮಿತಿ ಮಾಡುತ್ತಿರುವುದು ಅಭಿನಂದನೀಯ. ಪ್ರತಿ ಮನೆಯಲ್ಲಿಯೂ ತಮ್ಮ ಮಗಳು ಗಂಡನ ಮನೆಯಲ್ಲಿ ಚೆನ್ನಾಗಿರಬೇಕೆಂದು ತಂದೆ-ತಾಯಿ ಬಯಸುತ್ತಾರೆ. ಅದೇ ರೀತಿ ಮನೆಗೆ ಬಂದ ಸೊಸೆಗೂ ಒಳ್ಳೆಯದನ್ನು ಬಯಸಬೇಕು ಎಂದು ಕಿವಿಮಾತು ಹೇಳಿದರು.
ಪವಾಡ ಸಂಶೋಧನ ಕೇಂದ್ರ ಸ್ಥಾಪಕ ಹುಲಿಕಲ್ ನಟರಾಜ್ ಧರ್ಮ ಮತ್ತು ವೈಚಾರಿಕತೆ ಬಗ್ಗೆ ಮಾತನಾಡಿ, ಧರ್ಮದ ಹೆಸರಿನಲ್ಲಿ ಪೂಜೆ ಪುನಸ್ಕಾರಗಳು
ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ನಡೆಯುವುದೇ ಧರ್ಮ ಎಂದರಲ್ಲದೆ ಮನುಷ್ಯ ಎಷ್ಟು ದಿನ ಬದುಕುತ್ತಾನೆ ಎಂಬುದು ಮುಖ್ಯವಲ್ಲ ಇರುವಷ್ಟು ದಿನ ಸಮಾಜದಲ್ಲಿ ಹೇಗೆ ಉಪಕಾರಿಯಾಗಿ ಬಾಳುತ್ತಾನೆ ಎಂಬುದು ಮುಖ್ಯ ಎಂದು ತಿಳಿಸಿದರು. ಸಂಘದ ಅಧ್ಯಕ್ಷ ಎ.ಎಂ.ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣಸಿಂಗ್ ರಾಜ್ಯ ಉಪಾಧ್ಯಕ್ಷ ಬಿ.ಶ್ರೀನಿವಾಸ್, ಮಾಜಿ ಸಂಸದ ಸಿ. ನಾರಾಯಣಸ್ವಾಮಿ ಮತ್ತಿತರರು ಮಾತನಾಡಿದರು. ಚಿಕ್ಕಬಳ್ಳಾಪುರ, ಕೋಲಾರ, ಹೊಸಕೋಟೆ, ಬಾಗೇಪಲ್ಲಿ, ದೊಡ್ಡಬಳ್ಳಾಪುರ, ಶಿಡ್ಲಘಟ್ಟ ಚಿಂತಾಮಣಿ ಮಾಲೂರು ತಾಲೂಕು ಸಮಿತಿ ಕಾರ್ಯಕರ್ತರು ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ನರಸಾರೆಡ್ಡಿ, ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್, ಪತ್ರಕರ್ತ ಶಾಂತಮೂರ್ತಿ, ಎಸ್‌ಎಲ್‌ಎಸ್ ಶಾಲೆಯ ಡಿ.ಎಸ್.ಧನಂಜಯ, ಮಾನವ ಹಕ್ಕುಗಳ ಸಮಿತಿ ರಾಜ್ಯ ಕಾರ್ಯದರ್ಶಿ ಚಾಂದ್ ಮತ್ತಿತರರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

