ಬೆಂಗಳೂರು ಗ್ರಾಮಾಂತರ

ಒಕ್ಕಲಿಗರು ದಕ್ಷ ತಂಡ ಆರಿಸುವ ಮೂಲಕ ಪ್ರೌಢತೆ ಮೆರೆಯಬೇಕಿದೆ: ಅಪ್ಪಾಜಿಗೌಡ

Published On :

ಕನಕಪುರ: ವೈದ್ಯಕೀಯ, ತಾಂತ್ರಿಕ ಶಿಕ್ಷಣ ಕಾಲೇಜುಗಳೂ ಸೇರಿದಂತೆ ಒಕ್ಕಲಿಗರ ಸಂಘವು 21 ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದೆ, ಹತ್ತಾರು ವರ್ಷಗಳಿಂದ ಅಭಿವೃದ್ಧಿ ಕುಂಠಿತವಾಗಿರುವ ಸಂಘದಲ್ಲಿ ಭ್ರಷ್ಟಾಚಾರ ಸ್ವಜನಪಕ್ಷಪಾತಗಳು ಮೇರೆಮೀರಿದ್ದು, ಒಕ್ಕಲಿಗರು ದಕ್ಷ ತಂಡವನ್ನು ಆರಿಸುವ ಮೂಲಕ ಪ್ರೌಢತೆ ಮೆರೆಯಬೇಕಾಗಿದೆ ಎಂದು ಡಾ.ಅಪ್ಪಾಜಿಗೌಡ ಹೇಳಿದ್ದಾರೆ.   ಅವರು ಕನಕಪುರ ಇನ್ಸ್‌ಸ್ಟಿಟ್ಯೂಟ್ ಆವರಣದಲ್ಲಿ ಒಕ್ಕಲಿಗರ ಸಂಘದ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸಭೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.  ಅಭ್ಯರ್ಥಿ ಶಿವಣ್ಣೇಗೌಡ ಮಾತನಾಡಿ, ಬೆಂಗಳೂರಿನ ಸುತ್ತಮುತ್ತ ಎಂಟು ಸುಸಜ್ಜಿತ ಆಸ್ಪತ್ರೆಗಳು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳನ್ನು ಪ್ರಾರಂಭಿಸಿ ಸದಸ್ಯರಿಗೆ ಶೇ.25 ರಿಯಾಯತಿ ದರದಲ್ಲಿ ಚಿಕಿತ್ಸೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಶೇ.5 ಮೀಸಲಾತಿ ಒದಗಿಸಲಾಗುವುದು. ಭ್ರಷ್ಟ ಆಡಳಿತದ ನಿರ್ಮೂಲನೆಗಾಗಿ ಸಜ್ಜನ, ಜನಪರ, ರೈತಪರ ಅಭ್ಯರ್ಥಿಗಳನ್ನು ಆರಿಸಲು ಕರೆ ನೀಡಿದರು.  ಸಭೆಯಲ್ಲಿ ಅಭ್ಯರ್ಥಿಗಳಾದ ಅ.ದೇವೇಗೌಡ, ಎಂ.ಎ.ಆನಂದ್, ಡಾ.ಸರ್ಗ, ಡಿ.ಸಿ.ಕಾಳೇಗೌಡ, ಎಚ್.ಸಿ. ಜಯಮುತ್ತು,  ಶಿವಣ್ಣೇಗೌಡ, ಎಂ.ಬಿ.ಮಲ್ಲಿಕಾರ್ಜುನಗೌಡ, ಪಿಳ್ಳಾಂಜನಪ್ಪ,ಚಿಕ್ಕರಾಮಕೃಷ್ಣಪ್ಪ, ಸಂಪಂಗಿ ರಾಮಯ್ಯ, ಮೋಹನ ಕುಮಾರ್, ಹನುಮಂತೇಗೌಡ, ಕೃಷ್ಣಮೂರ್ತಿ, ಬಿ.ವಿ.ರಮೇಶ್ ಪಾಲ್ಗೊಂಡಿದ್ದರು.ಪ್ರಾಂಶುಪಾಲ ದೊಡ್ಡರಸಿನಕೆರೆ ಮಾಯಪ್ಪ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.