ಬೆಂಗಳೂರು ಗ್ರಾಮಾಂತರ

ವಿದ್ಯೆ ನೀಡಿದ ಮಹಾಪುರುಷ ಶಾಂತ ಮಲ್ಲಿಕಾರ್ಜುನ ಶ್ರೀ

Published On :

ಚನ್ನಪಟ್ಟಣ: ವಿದ್ಯೆ ಎಂಬ ಅಂತರಂಗದ ಬೆಳಕನ್ನು ಈ ಭಾಗದ ಜನತೆಗೆ ತಿಳಿಸುವ ಜತೆಗೆ ಈ ಭಾಗಕ್ಕೆ ಮೊದಲ  ಬಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗುವ ಮೂಲಕ ಬಾಹ್ಯದ ಬೆಳಕನ್ನೂ ಕರುಣಿಸಿದ ಮಹಾಪುರುಷ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಎಂದು ಸಿದ್ದಗಂಗೆ ಸಿದ್ದಲಿಂಗ ಮಹಾಸ್ವಾಮೀಜಿ ಬಣ್ಣಿಸಿದರು.
ತಾಲೂಕಿನ ಬೇವೂರು ಗ್ರಾಮದಲ್ಲಿ ನಡೆದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ 12ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಗ್ರಾಮೀಣಭಾಗದಲ್ಲಿ ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದ ಅವರು ಜನಕಲ್ಯಾಣಕ್ಕಾಗಿ ತಮ್ಮ ಜೀವಿತಾವಧಿಯಲ್ಲಿ ಶ್ರಮಿಸಿದರು ಎಂದರು.
ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಲು ಸಾಕಷ್ಟು ಮಹನೀಯರು ಶ್ರಮಿಸಿದ್ದು ಇಂತಹ ಮಹನೀರ ಪರಿಶ್ರಮದಿಂದಾಗಿ ಇಂದು ನಮ್ಮ ಮುಂದೆ ಸ್ವಸ್ಥ ಸಮಾಜ ತಲೆ ಎತ್ತಿ ನಿಂತಿದೆ. ಇಂತಹ ಮಹನೀಯರ ಆದರ್ಶಗಳನ್ನು ನಾವೆಲ್ಲ ಅಳವಡಿಸಿಕೊಂಡಿದ್ದೇ ಆದಲ್ಲಿ ಜೀವನದಲ್ಲಿ ಉನ್ನತ ಸಾಧನೆ ಮಾಡಬಹುದೆಂದರು.
ಕೃಷಿಕರಾಗಿ, ಈ ಭಾಗದ ಜನಸೇವಕರಾಗಿ, ಆಧ್ಯಾತ್ಮಿಕ ಬೆಳಕು ತೋರುವ ಗುರುವಾಗಿ ಜನತೆಯ ಕಣ್ಮಣಿಯಾಗಿದ್ದ ಶಾಂತವೀರ ಸ್ವಾಮೀಜಿ, ರೈತರಿಗೆ ಸಾಕಷ್ಟು ಸಲಹೆ ನೀಡುವ ಜತೆಗೆ ಅವರ ಕಷ್ಟಸುಖಗಳಿಗೆ ಸ್ವಂದಿಸುತ್ತಾ ಎಲ್ಲಾ ಸಮುದಾಯದ ಜನತೆಯ ಕಣ್ಮಣಿಯಾಗಿದ್ದರು ಎಂದರು.
ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಮಠದ ಸೇವಾಕೈಂಕರ್ಯಗಳಿಗೆ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಕಿ ಕೊಟ್ಟ ಮೇಲ್ಪಂಕ್ತಿಯೇ ಆಧಾರವಾಗಿದ್ದು ಶ್ರೀಗಳ ಹಾದಿಯಲ್ಲಿ ನಾವೆಲ್ಲ ಮಠವನ್ನು ಮುನ್ನಡೆಸುತ್ತಿದ್ದವೆ ಎಂದು ತಿಳಿಸಿದರು.
ಸ್ವಾರ್ಥವನ್ನು ಬದಿಗೊತ್ತಿ ಪ್ರತಿಯೊಬ್ಬರೂ ಸಮಾಜಕ್ಕಾಗಿ ತಮ್ಮದೇ ಆದ ಅಳಿಲು ಸೇವೆ ಸಲ್ಲಿಸಿದರೆ ಇಡೀ ಸಮಾಜ ತನ್ನಿಂತಾನೆ ಅಭಿವೃದ್ಧಿಯಾಗುತ್ತದೆ. ಆ ಮೂಲಕ ಸಾಮಾಜಿಕ ಅಸಮಾನತೆ ತೊಲಗುತ್ತದೆ ಎಂದ ಅವರು, ಜಗಜ್ಯೋತಿ ಬಸವೇಶ್ವರರು ತಮ್ಮ ವಚನಗಳಲ್ಲಿ ತಿಳಿಸಿರುವಂತೆ ಎಲ್ಲ ವರ್ಗದವರಿಗೂ ಸಮನಾದ
ಸ್ಥಾನಮಾನ ಸಿಗುವಂತಾದಾಗ ಮಾತ್ರ ಇಡೀ ವ್ಯವಸ್ಥೆ ಸಂಪದ್ಭರಿತವಾಗುತ್ತದೆ ಎಂದರು.
ಮರಳೇಗವಿ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ, ಶಿವರುದ್ರ ಸ್ವಾಮೀಜಿ, ಸಂಕಲಾಪುರ ಮಠದ ಧರ್ಮರಾಜೇಂದ್ರ ಸ್ವಾಮೀಜಿ, ಕರಡೀಗವಿ ಮಠದ ಶಂಕರಾನಂದಸ್ವಾಮೀಜಿ, ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.