ದೊಡ್ಡಬಳ್ಳಾಪುರದಲ್ಲಿ ಸಂಭ್ರಮದ ಕ್ರಿಸ್ಮಸ್
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಡಿ.25
ಇಲ್ಲಿನ ವಿವಿಧ ಚರ್ಚುಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.
ಕ್ರೈಸ್ತ ಬಾಂಧವರು ವಿಶೇಷ ಪ್ರಾರ್ಥನೆಗಳಲ್ಲಿ ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.
ಇಲ್ಲಿನ ಪ್ರವಾಸಿ ಮಂದಿರ ಮೃತ್ತದಲ್ಲಿರುವ ಸೇಂಟ್ ತೆರೇಸಾ ಚರ್ಚ್ನಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ವಿಶೇಷ ಪ್ರಾರ್ಥನೆ, ಧರ್ಮೋಪದೇಶ ನಡೆಯಿತು. ಚರ್ಚಿನ ಆವರಣದಲ್ಲಿ ಕ್ರಿಸ್ತನ ಹುಟ್ಟಿನ ಸಂದರ್ಭದ ಚಿತ್ರಣವನ್ನು ಕಟ್ಟಿಕೊಡುವ ಮಾದರಿ ಸಿದ್ಧಪಡಿಸಿ ಅಲಂಕರಿಸಲಾಗಿತ್ತು.
ಸಹಸ್ರಾರು ಕ್ರೈಸ್ತ ಧರ್ಮೀಯರು ಮತ್ತು ಇತರ ಧರ್ಮೀಯರೂ ಚರ್ಚ್ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಮಂಗಳವಾರ ರಾತ್ರಿಯಿಂದಲೇ ವಿವಿಧ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ಕೇಕ್ ಮತ್ತಿತರ ಸಿಹಿ ತಿನಿಸುಗಳನ್ನು ಹಂಚಲಾಯಿತು.
ಕೊಂಗಾಡಿಯಪ್ಪ ಮುಖ್ಯರಸ್ತೆ ಕ್ರಾಸ್ನಲ್ಲಿರುವ ಚರ್ಚ್, ಪಾಲನಜೋಗಿಹಳ್ಳಿ, ಪಾಲ್ಪಾಲ್ ದಿನ್ನೆ, ಮಧುರೆ ಮೇರಿ ಚರ್ಚ್ ಸೇರಿದಂತೆ ಪ್ರಮುಖ ಹೋಬಳಿ ಕೇಂದ್ರಗಳಾದ ತೂಬಗೆರೆ, ದೊಡ್ಡಬೆಳವಂಗಲ, ಸಾಸಲು, ಕನಸವಾಡಿಗಳ ವಿವಿದೆಡೆ ಸಹ ಕ್ರಿಸ್ಮಸ್ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ. ಕ್ರೈಸ್ತ ಧರ್ಮೀಯರು ಬಂಧು-ಬಾಂಧವರೊಂದಿಗೆ ಹಬ್ಬದ ಸಡಗರದಲ್ಲಿ ಪಾಲ್ಗೊಂಡರು. ಸಿಹಿ ಹಂಚಿ, ಪರಸ್ಪರ ಉಡುಗೊರೆಗಳನ್ನು ನೀಡಿ ಸಂಭ್ರಮಿಸಿದರು.
ನಕ್ಷತ್ರ ಜ್ಯೋತಿ: ಹಲವೆಡೆ ಕ್ರಿಸ್ತನ ಹುಟ್ಟಿನ ಧ್ಯೋತಕವಾಗಿ ನಕ್ಷತ್ರಗಳನ್ನು ಬೆಳಗಿಸಿ ಸಂಭ್ರಮಿಸಲಾಯಿತು. ಅದೇ ರೀತಿ ಕೊಟ್ಟಿಗೆಯ ರೂಪಕಗಳನ್ನು ಸೃಷ್ಟಿಸಿ ಕ್ರಿಸ್ತನ ಜನನದ ಶುಭ ಸಂದೇಶವನ್ನು ಮಾದರಿಗಳ ಮೂಲಕ ಪ್ರದರ್ಶಿಸಲಾಗಿದ್ದದ್ದು ವಿಶೇಷವಾಗಿತ್ತು. ಕೆಲವರು ಮನೆಗಳಲ್ಲಿ ಸಹ ವಿಶೇಷ ಪ್ರಾರ್ಥನೆ, ಕ್ರಿಸ್ತ ಜನನದ ಸಂದೇಶ ಸಾರುವ ರೂಪಕ ಮಾದರಿಗಳನ್ನು ಮಾಡಿ ಗಮನ ಸಳೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

