ಬೆಂಗಳೂರು ಗ್ರಾಮಾಂತರ

ಮಾನವೀಯ ಮೌಲ್ಯಗಳಿಗೆ ಮರುಜೀವಕೊಟ್ಟ ಕವಿ ಡಾ.ಜಿ.ಎಸ್. ಶಿವರುದ್ರಪ್ಪ

Published On :

ರಾಮನಗರ: ಮಧುರ ಕಾವ್ಯಗಳನ್ನು ರಚಿಸುವ ಮೂಲಕ ಮಾನವೀಯ ಮೌಲ್ಯಗಳಿಗೆ ಮರುಜೀವಕೊಟ್ಟ ಮಹಾಕವಿ ಡಾ.ಜಿ.ಎಸ್.ಶಿವರುದ್ರಪ್ಪ ಎಂದು ಉಪನ್ಯಾಸಕ ಜಿ.ಶಿವಣ್ಣ ಬಣ್ಣಿಸಿದರು. ನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಕಾಲೇಜಿನಲ್ಲಿ ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರಿಗೆ ಆಯೋಜಿಸಿದ್ದ ಶ್ರದ್ಧಾಂಜಲಿ ಸಮರ್ಪಣೆ  ಸಮಾರಂಭದಲ್ಲಿ ಮಾತನಾಡಿದ ಅವರು, ಜಿಎಸ್‌ಎಸ್ ರಚಿಸಿರುವ ಕವಿತೆಯ ಸಾಲುಗಳು ಜನರ ಹೃದಯದಲ್ಲಿ ಹರಿಯಬೇಕಾದ್ದು ಪ್ರೀತಿ, ಸ್ನೇಹಗಳ ಪ್ರವಾಹ ಎಂಬುದನ್ನು ತೋರಿಸುತ್ತದೆ ಎಂದರು.
ನೂರಾರು ಕಾವ್ಯಗಳನ್ನು ಕನ್ನಡಿಗರಿಗೆ ಕಾಣಿಕೆಯಾಗಿ ಕೊಟ್ಟು, ಅತ್ಯಂತ ಸರಳವಾಗಿ ಬದುಕಿ ತೋರಿಸಿದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರು ನಮ್ಮನ್ನಗಲಿರುವುದು ಅತ್ಯಂತ ನೋವಿನ ಸಂಗತಿ. ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ತಿಳಿಸಿದರು.
ರಾಷ್ಟ್ರಕವಿ ಕುವೆಂಪು ಅವರ ಪರಮ ಶಿಷ್ಯರಾಗಿದ್ದ ಡಾ.ಜಿ.ಎಸ್.ಎಸ್ ಅವರು ಗುರುವಿನ ದಾರಿಯಲ್ಲಿಯೇ ನಡೆದು, ಗುರು ಪರಂಪರೆಗೆ ಕೀರ್ತಿತಂದವರು. ಅವರ ಕಾವ್ಯಗಳು ಹಾಡಲಷ್ಟೆ ಅಲ್ಲದೆ ಜನರ ಜೀವನಕ್ಕೆ ಬೆಳಕನ್ನೂ ನೀಡುತ್ತವೆ ಎಂದು ಪ್ರಾಂಶುಪಾಲ ಬಿ.ಗೋಪಾಲ್ ಹೇಳಿದರು.
ಒಂದು ನಿಮಿಷ ಮೌನಚಾರಣೆ ಮಾಡುವ ಮೂಲಕ ಡಾ.ಜಿಎಸ್‌ಎಸ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.