ರಂಗಭೂಮಿ ಸಾಂಸ್ಕೃತಿಕ ಜೀವಂತಿಕೆಯ ಸಂಕೇತ: ಗುಬ್ಬಿ ವೀರೇಶ್ ಅಭಿಮತ
ದೊಡ್ಡಬಳ್ಳಾಪುರ: ರಂಗಭೂಮಿ ಸಾಂಸ್ಕೃತಿಕ ಜೀವಂತಿಕೆಯ ಸಂಕೇತ. ಈ ಜೀವಂತಿಕೆ ಹಳ್ಳಿಗಾಡಿನಲ್ಲಿ ಉಳಿದಿದೆಯೇ ಹೊರತು ನಗರದಲ್ಲಿ ಅಲ್ಲ ಎಂದು ನಾಟಕ ರತ್ನ ಗುಬ್ಬಿ ವೀರಣ್ಣ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಗುಬ್ಬಿ ವೀರೇಶ್ ಹೇಳಿದರು.
ಬೆಂ.ಗ್ರಾ.ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ನೇತೃತ್ವದಲ್ಲಿ ಇಲ್ಲಿನ ಡಾ.ರಾಜ್ಕುಮಾರ್ ಕಲಾ ಮಂದಿರ(ಪುರಭವನ)ದಲ್ಲಿ ಶುಕ್ರವಾರ ಉದ್ಘಾಟನೆಗೊಂಡ ಜಿಲ್ಲಾ ಮಟ್ಟದ ನಾಟಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಿನಿಮಾ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ದಾಳಿಯಿಂದಾಗಿ ಇಂದು ನಮ್ಮ ಮೂಲ ಕಲೆಗಳು ನೆಲೆ ಕಳೆದುಕೊಳ್ಳುತ್ತಿವೆ. ಕಲಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಆಗಬೇಕು. ಅಭಿನಯ ಕಲೆಯ ತಾಯಿ ರಂಗಭೂಮಿ. ಇಂದು ರಂಗಸಂಸ್ಕೃತಿ ಆತಂಕವನ್ನು ಎದುರಿಸುತ್ತಿದೆ. ರಂಗ ಕಲಾವಿದರ ಬದುಕು ದುಸ್ತರವಾಗಿದೆ. ವಿವಿಧ ಅಕಾಡೆಮಿಗಳಿದ್ದರೂ ರಂಗಕರ್ಮಿಗಳ ಬದುಕು ಹಸನಾಗಿಲ್ಲ. ಕನಿಷ್ಠ ಮಾಸಾಶನಕ್ಕೂ ಅಲೆದಾಡುವ ಪರಿಸ್ಥಿತಿ ಇದೆ ಎಂದರು.
ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ ಭಾಗವಹಿಸಿ ಮಾತನಾಡಿದರು. ಬೆಂ.ಗ್ರಾ.ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಗೌರವಾಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ಪ್ರಧಾನ ಕಾರ್ಯದರ್ಶಿ ರಾಮಾಂಜಿನಪ್ಪ, ತಾ.ಕಸಾಪ ಅಧ್ಯಕ್ಷ ರವಿಕಿರಣ್, ಕಲಾವಿದರ ಸಂಘದ ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ಮತ್ತು ದೇವನಹಳ್ಳಿಯ ಸಂಚಾಲಕರು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಮುನಿಕೆಂಪಣ್ಣ, ವೆಂಕಟರಾಜು, ಪಟೇಲ್ ಮುನಿಯಪ್ಪ, ಜವಾಜಿ ಸೀತಾರಾಂ, ಚಿಕ್ಕನಾರಾಯಣಪ್ಪ, ಎನ್.ಎಸ್.ಆಂಜನಪ್ಪ, ಸುಶೀಲಮ್ಮ, ದೊರೆಸ್ವಾಮಿ, ಮುನಿವೆಂಕಟಪ್ಪ, ವೆಂಕಟರಾಯಪ್ಪ ಅವರನ್ನು ಸನ್ಮಾನಿಸಲಾಯಿತು.
ನಾಟಕೋತ್ಸವ: ಉದ್ಘಾಟನಾ ಕಾರ್ಯಕ್ರಮದ ನಂತರ ಮಧುರೆ ಹೋಬಳಿ ಕಲಾವಿದರ ಸಂಘದಿಂದ ಶ್ರೀರಾಮ ಮುದ್ರಕೆ ಪ್ರಧಾನ ದೃಶ್ಯಾವಳಿ, ಶ್ರೀವಿನಾಯಕ ಕೃಪಾ ಪೋಷಿತ ನಾಟಕ ಮಂಡಲಿಯಿಂದ ಮಾಧವ ಸಂಧಾನ ಪೌರಾಣಿಕ ನಾಟಕ, ಎಸ್.ಮಹದೇವು ತಂಡದಿಂದ ತ್ಯಾಗಿ ಸಾಮಾಜಿಕ ನಾಟಕ, ಗ್ರಾಮಾಂತರ ಮಹಿಳಾ ಕಲಾವಿದರಿಂದ ಶ್ರೀಕೃಷ್ಣ ಸಂಧಾನ ಪೌರಾಣಿಕ ನಾಟಕ ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

