ಎಟಿಎಂ ಸಿಸಿಟಿವಿಗೆ ಬಟ್ಟೆ ಮುಚ್ಚಿ ದರೋಡೆ ಯತ್ನ ವಿಫಲ
ಕ.ಪ್ರ.ವಾರ್ತೆ ಸೂಲಿಬೆಲೆ ಡಿ.30
ಹೊಸಕೋಟೆ ತಾ.ನಂದಗುಡಿ ಮುಖ್ಯ ನಿಲ್ದಾಣದಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಭಾನುವಾರ ರಾತ್ರಿ ನುಗ್ಗಿರುವ ದುಷ್ಕರ್ಮಿಗಳು ಕೇಂದ್ರದಲ್ಲಿ ಅಳವಡಿಸಿದ್ದ ಸಿಸಿ ಟಿವಿಗೆ ಬಟ್ಟೆ ಮುಚ್ಚಿ ದರೋಡೆ ಯತ್ನಿಸಿ ವಿಫಲರಾಗಿರುವ ಘಟನೆ ನಡೆದಿದೆ.
ನಂದಗುಡಿ ಗ್ರಾಮದ ಮಧ್ಯಭಾಗದಿಂದ ಹಾದು ಹೋಗಿರುವ ಚಿಂತಾಮಣಿ, ಹೊಸಕೋಟೆ ಹೆದ್ದಾರಿ ಬದಿಯಲ್ಲಿನ ಮುಖ್ಯ ನಿಲ್ದಾಣದ ಜನನಿಬಿಡ ಪ್ರದೇಶದಲ್ಲಿ ಕೆನರಾ ಬ್ಯಾಂಕ್ ಶಾಖೆಯಿದ್ದು, ಇದಕ್ಕೆ ಹೊಂದಿಕೊಂಡಂತೆ ಎಟಿಎಂ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಶನಿವಾರ ಬ್ಯಾಂಕ್ ಸಿಬ್ಬಂದಿ ಎಟಿಎಂ ಘಟಕಕ್ಕೆ ಹಣ ತುಂಬಿ ಹೋಗಿದ್ದಾರೆ. ಈ ಎಟಿಎಂ ಕೇಂದ್ರಕ್ಕೆ ಸೆಕ್ಯುರಿಟಿ ಗಾರ್ಡ್ ಇಲ್ಲದೆ ಯಾವಾಗಲೂ ತೆರೆದಿರುತ್ತದೆ. ಭಾನುವಾರ ರಾತ್ರಿ ಕೇಂದ್ರಕ್ಕೆ ನುಗ್ಗಿರುವ ದುಷ್ಕರ್ಮಿಗಳ ಕೇಂದ್ರದಲ್ಲಿ ಅಳವಡಿಸಿರುವ ಸಿಸಿ ಟಿವಿಗೆ ಬಟ್ಟೆಯಿಂದ ಮುಚ್ಚಿ ಲಾಕರ್ ಸಂಪರ್ಕವನ್ನು ಕಡಿತ ಮಾಡಿ ಹಣಕ್ಕಾಗಿ ತಡಕಾಡಿದ್ದಾರೆ. ಆದರೆ, ಶನಿವಾರ ಬ್ಯಾಂಕಿನ ಸಿಬ್ಬಂದಿ ಲಾಕರ್ಗೆ ಹಾಕಿದ್ದ ಹಣವೆಲ್ಲ ಭಾನುವಾರ ಖಾಲಿಯಾಗಿದ್ದ ಕಾರಣ ದರೋಡೆಕೋರರಿಗೆ ನಯಾಪೈಸೆ ಸಿಕ್ಕಿಲ್ಲ. ಇದರಿಂದ ದುಷ್ಕರ್ಮಿಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸಾಗಿದ್ದಾರೆ.
ಸೋಮವಾರ ಎಂದಿನಂತೆ ಬ್ಯಾಂಕ್ ತೆರೆದು, ಎಟಿಎಂ ಘಟಕ ಬಾಗಿಲು ಮುಚ್ಚಿದ್ದ ಕಾರಣ ಏನೋ ಸಮಸ್ಯೆಯಿರಬೇಕು ಎಂದು ಸುಮ್ಮನಿದ್ದ ಸಿಬ್ಬಂದಿ ಸಂಜೆ 3 ಗಂಟೆ ಸಮಯದಲ್ಲಿ ಎಟಿಎಂ ಕೇಂದ್ರದ ಲಾಕರ್ಗೆ ಹಣ ತುಂಬಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಭದ್ರತಾ ವ್ಯವಸ್ಥೆ ಮಾಡುವವರೆಗೂ ಎಟಿಎಂ ಕೇಂದ್ರವನ್ನು ತೆರೆಯದಂತೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಸಿಪಿಐ ತಿಮ್ಮಯ್ಯ, ಪಿಎಸ್ಐ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

