ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸಿ: ಸಿ.ಪುಟ್ಟಸ್ವಾಮಿ
ರಾಮನಗರ: ಜಾಗತೀಕರಣದ ಅಬ್ಬರದಿಂದ ನಲುಗುತ್ತಿರುವ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕೆಲಸಕ್ಕೆ ಸಂಘ-ಸಂಸ್ಥೆಗಳು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ಕರೆ ನೀಡಿದರು. ತಾಲೂಕಿನ ಕುಂಭಾಪುರ ಕಾಲೋನಿಯಲ್ಲಿ ಡಾ.ರಾಮಮನೋಹರ ಲೋಹಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಸಂಘಟನೆಗಳಿಗೆ ಪ್ರೇರೇಪಣೆ ನೀಡುವ ವಾದ್ಯ ಪರಿಕರಗಳ ರಕ್ಷಿಸುವ ಕಾರ್ಯವನ್ನು ಸಂಘಟನೆಗಳು ಕೈಗೊಳ್ಳಬೇಕು ಎಂದರು. ಕಲೆಗಳು ಜೀವನದ ಅವಿಭಾಜ್ಯ ಅಂಗ. ಜೀವನ ಪ್ರೀತಿಯನ್ನು ಗಟ್ಟಿಗೊಳಿಸುವ ಬದುಕಿನ ಆಸೆಗಳನ್ನು, ಜೀವಂತಿಕೆಯನ್ನು ಕಟ್ಟಿಕೊಡುವುದು ತೀರಾ ಅಪರೂಪ. ಹಳ್ಳಿಗಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಶ್ರೀಮಂತವಾಗಿದೆ. ಆ ನಿಟ್ಟಿನಲ್ಲಿ ಸಂಸ್ಥೆ ಇನ್ನೂ ಉತ್ತಮವಾದ ಕಾರ್ಯವನ್ನು ಮಾಡಲಿ ಎಂದು ಜಾನಪದ ವಿದ್ವಾಂಸ ಡಾ.ಕುರುವ ಬಸವರಾಜು ತಿಳಿಸಿದರು. ಸಾಂಸ್ಕೃತಿಕ ಉತ್ಸವಗಳು ಜನರನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತವೆ. ಜಾನಪದ ಸಂಸ್ಕೃತಿಯಲ್ಲಿ ಯಾವುದೇ ಜಾತಿ, ಮತ, ಭೇದ, ಪಂಥ ಎಂಬುದಿಲ್ಲ. ದುಡಿಮೆಯ ನೋವು, ಬದುಕಿನ ಕಷ್ಟಗಳನ್ನು ಮರೆತು ಒಂದೆಡೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳಲು ಇಂತಹ ಉತ್ಸವಗಳು ವೇದಿಕೆಯಾಗುತ್ತವೆ ಎಂದು ಉಪನ್ಯಾಸಕ ಜಿ.ಶಿವಣ್ಣ ತಿಳಿಸಿದರು. ಭಾರತಿ ಕೋ-ಆಪರೇಟಿವ್ ಬ್ಯಾಂಕ್ನ ನಿರ್ದೇಶಕ ಎಚ್.ಸಿ.ರಾಮಣ್ಣ, ಶಿಕ್ಷಕ ಹನುಮಯ್ಯ ಮಾತನಾಡಿದರು. ಟ್ರಸ್ಟ್ನ ಅಧ್ಯಕ್ಷ ದಾಸಪ್ಪ, ಜನಮುಖಿ ಟ್ರಸ್ಟ್ನ ಕಾರ್ಯದರ್ಶಿ ಕುಂಭಾಪುರ ಬಾಬು, ವೆಂಕಟರಾಮು, ಜಿ.ಅನಿತಾ, ಕೃಷ್ಣಪ್ಪ, ಪಿಳ್ಳಯ್ಯ ಮತ್ತಿತರರು ಭಾಗವಹಿಸಿದ್ದರು. ತಮಟೆ, ವೀರಗಾಸೆ, ಪೂಜಾ ಕುಣಿತ, ಪಟದ ಕುಣಿತ ಕಲಾ ಪ್ರದರ್ಶನ ಜನರನ್ನು ಮನಸೂರೆಗೊಳಿಸಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

